ಪ್ರಧಾನಿಗೆ ಬರೆದ ಆ ಒಂದು ಪತ್ರ ವಿಜೇಂದ್ರರಿಗೆ ರಾಜ್ಯಾಧ್ಯಕ್ಷನ ಪಟ್ಟ ದೊರೆಯಲು ಕಾರಣವಾಯಿತಾ?

ಸುದ್ದಿಲೈವ್/ಶಿವಮೊಗ್ಗ

ಶಾಸಕ ಬಿ.ವೈ.ವಿಜೇಂದ್ರರಿಗೆ ಬಿಜೆಪಿ ಹೈಕಮ್ಯಾಂಡ್ ರಾಜ್ಯಾಧ್ಯಕ್ಷನ ಪಟ್ಟಕಟ್ಟಿ ಹೊಸ ಸಾರಥ್ಯದ ಜವಬ್ದಾರಿಯನ್ನ ನೀಡಿರುವುದು ಹಳೇಯ ವಿಷಯ. ಪ್ರಬಲ ಸಮುದಾಯ ಲಿಂಗಾಯತರ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ವಿಜೇಂದ್ರರಿಗೆ ರಾಜ್ಯಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಈಗಾಗಲೇ ವಿಶ್ಲೇಷಿಸಲಾಗುತ್ತಿದೆ.
ಈ ವಿಶ್ಲೇಷಣೆ ಸರಿನೂ ಆಗಿರಬಹುದು. ಆದರೆ ಈ ಪಟ್ಟ ಕೇವಲ ಜಾತಿಲೆಕ್ಕಾಚಾರದಲ್ಲಿಯೇ ನಡೆದಿದೆಯಾ ಅಥವಾ ಕಾರ್ಯಕರ್ತರ ಪತ್ರಕ್ಜೂ ಹೈಕಮಾಂಡ್ ಮನ್ನಣೆ ನೀಡಿದೆ ಎಂಬ ಹೊಸ ವಿಚಾರವೊಂದು ಹೊರಬರುತ್ತಿದೆ. 12 ವರ್ಷದ ಕಾರ್ಯಕರ್ತನ ಪತ್ರವೂ ವಿಜೇಂದ್ರರಾಯ್ಕೆಗೆ ಕಾರಣವಾಗಿದೆ ಎಂದರೆ ಅಚ್ಚರಿ ಪಡಲೇಬೇಕಿದೆ. ಹೈಕಮಾಂಡ್ ಕಾರ್ಯಕರ್ತನೋರ್ವನ ಮನವಿಯನ್ನೂ ಪುರಸ್ಕರಿಸಿದ್ದಾರೆ ಎಂದು ಹೇಳಬಹುದಾಗಿದೆ.
ಸೊರಬ ತಾಲೂಕು ಮಲ್ಲಾಪುರ ಪೋಸ್ಟ್ ನ ದ್ವಾರಹಳ್ಳಿಯ ನಿವಾಸಿಯ ಯುವರಾಜ್ ವೀರಪ್ಪ ಎಂಬ ಯುವಕ ಪ್ರಧಾನಿ ಮೋದಿಗೆ ಬರೆದ ಪತ್ರ ಇಂದು ವಿಜೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಕಾರಣವಾಗಿದೆ ಅ.20 ರಂದು ಬರೆದ ಪತ್ರವೊಂದರಲ್ಲಿ ಯುವರಾಜ್ ರಾಜ್ಯದ ಬಿಜೆಪಿಯಲ್ಲಿ ಬಣದ ರಾಜಕಾರಣ ಆರಂಭವಾಗಿದೆ.
ಈ ಬಣದ ರಾಜಕಾರಣದಿಂದ ಪಕ್ಷ ವಿಧಾನ ಸಭೆ ಚುನಾವಣೆ ಸೋತಿದೆ. ಎದುರಾಳಿ ಪಕ್ಷದ ನಾಯಕರ ಜೊತೆ ಬಿಜೆಪಿ ನಾಯಕರು ಕೈಜೋಡಿಸಿದ ಉದಾಹರಣೆಗಳಿವೆ. ಕೇವಲ ರಾಜ್ಯ ನಾಯಕರಲ್ಲಿದ್ದ ಬಣ ರಾಜಕಾರ ಹೋಬಳಿ ಮಟ್ಟದಲ್ಲೂ ಹರಡಿಕೊಂಡಿರುವುದು ಆತಂಕಕಾರಿ.
ಹಾಗಾಗಿ ರಾಜ್ಯಾಧ್ಯಕ್ಷನ ಪಟ್ಟವನ್ನ ಬದಲಿಸಿ ಬಿ.ವೈ.ವಿಜೇಂದ್ರರಿಗೆ ನೀಡಿದಲ್ಲಿ ಪಕ್ಷ ಬಲವರ್ಧನೆ ಆಗಲಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪ್ರಬಲ ಪೈಪೋಟಿ ನೀಡಲು ಸಾಧ್ಯ ಎಂಬ ಯುವರಾಜರ ಮನವಿಗೆ ಹೈಕಮ್ಯಾಂಡ್ ಅಸ್ತು ಎಂದಿದೆ ಅಂತ ಹೇಳಲಾಗುತ್ತಿದೆ.
ಯುವರಾಜ್ ವೀರಪ್ಪ ಈ ಕುರಿತು ಸುದ್ದಿಲೈವ್ ನೊಂದಿಗೆ ಮಾತನಾಡಿ ನನ್ನ ಪತ್ರವನ್ನ ಪ್ರಧಾನಿ ಕಚೇರಿ ಪರಿಗಣಿಸಿ ಸಾರ್ವಜನಿಕ ಕುಂದುಕೊರತೆಯ ಪೋರ್ಟಲ್ ಗೆ ನೀಡಿತ್ತು. ನಿನ್ನೆಯ ವರೆಗೂ ನಿಮ್ಮ ಬೇಡಿಕೆಯನ್ನ ಪರಿಗಣಿಸಲಾಗುವುದು ಎಂದು ಬರುತ್ತಿತ್ತು. ನಿನ್ನೆಯಿಂದ ಮುಕ್ತಾಯವೆಂದು ತೋರಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಯುವರಾಜ್ ಅವರು ಪ್ರಧಾನಿ ಮೋದಿಗೆ ಹಲವು ಬಾರಿ ಪತ್ರ ಬರೆದಿದ್ದಾರೆ. ಪ್ರತಿ ಪತ್ರವನ್ನೂ ಕಚೇರಿ ಪರಿಗಣಿಸಿ ಪೋರ್ಟಲ್ ಮೂಲಕ ಉತ್ತರಿಸಿದೆ. ಈ ಹಿಂದೆ ಕುಮಾರ ಬಂಗಾರಪ್ಪನವರು ಸೊರಬ ವಿಧಾನಸಭೆಗೆ ಬೇಡ ಎಂದು ಪತ್ರ ಬರೆದಿದ್ದರು. ಇದಕ್ಕೂ ಪೋರ್ಟಲ್ ಮೂಲಕ ಕಚೇರಿ ಉತ್ತರಿಸಿತ್ತು ಎಂದು ಹೇಳಿದರು.
ಇದನ್ನೂ ಓದಿ-https://suddilive.in/archives/2885
