ರಾಜಕೀಯ ಸುದ್ದಿಗಳು

ಸದನದಲ್ಲಿ ಶಾಸಕ ಚೆನ್ನಬಸಪ್ಪರ ವಿರುದ್ಧ ಲಕ್ಷ್ಮಣ್ ಸವದಿ ಕೆರಳಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಮಾಜಿ ಡಿಸಿಎಂ ಹಾಗೂ ಹಾಲಿ ಶಾಸಕ ಲಕ್ಷ್ಮಣ್ ಸವದಿ ಶಿವಮೊಗ್ಗ ಶಾಸಕ‌ ಚೆನ್ನಬಸಪ್ಪನವರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿ ತಾಳ್ಮೆ ಕಳೆದುಕೊಂಡು ಮಾತನಾಡಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯಲ್ಲಿನ ಕಬ್ಬು ಬೆಳೆಗಾರರಿಗೆ ಅವಮಾನ ಮಾಡುತ್ತಿದ್ದೀರಿ. ಈ ಭಾಗದ ಜನತೆಗೆ ನಿಮ್ಮನ್ನ ಕಬ್ಬಿನಿಂದಲೇ ಹೊಡೆದುಹಾಕುತ್ತಾರೆ. ನಿಮಗೆ ಏನಾದರೂ ಮಾನ-ಮಾರ್ಯದೆ ಇದೆಯಾ?’ ಎಂದು ಕಾಂಗ್ರೆಸ್ ಸದಸ್ಯ ಲಕ್ಷ್ಮಣ್ ಸವದಿ, ಬಿಜೆಪಿ ಸದಸ್ಯ ಚನ್ನಬಸಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚೆಯ ವೇಳೆ ಲಕ್ಷ್ಮಣ್ ಸವದಿ ಮಾತನಾಡಲು ಮುಂದಾಗಿದ್ದಾರೆ, ಇದೇ ವೇಳೆ ಸಚಿವ‌ ಜಮೀರ್ ಅಹ್ಮದ್ ಅವರ ವಿರುದ್ಧ ಸದನದ ಬಾವಿಗಿಳಿದು  ಬಿಜೆಪಿ ಸದಸ್ಯರು ಧರಣಿ ನಡೆಸಿ ಶಾಸಕರ ಭಾಷಣವನ್ನ  ಅಡ್ಡಿಪಡಿಸಿದ್ದಾರೆ.

ಇದರಿಂದ ಕೆರಳಿದ ಲಕ್ಷ್ಮಣ್ ಸವದಿ, ‘ಶಿವಮೊಗ್ಗದ ಶಾಸಕರು ಹೆಂಗೆ ಕೂಗಾಡುತ್ತಾರೆ ನೋಡಿ. ಇವರಿಗೆ ಬೀಗ ಕೊಟ್ಟು ಯಾರು ಕಳುಹಿಸಿದ್ದಾರೆಂಬುದು ಗೊತ್ತಿದೆ’ ಎಂದು ಛೇಡಿಸಿದರು.‘ನಿಮ್ಮ ಜನ್ಮಕ್ಕೆ ನಾಚಿಗೆಯಾಗಬೇಕು. ನಿಮ್ಮನ್ನು ಕಬ್ಬಿನಿಂದಲೇ ರೈತರು ಹೊಡೆದುಹಾಕುತ್ತಾರೆ. ಶಿವಮೊಗ್ಗದವರು ಉತ್ತರ ಕರ್ನಾಟಕ ವಿರೋಧಿಗಳು’ ಎಂದು ಬಿಜೆಪಿ ಸದಸ್ಯ ಚೆನ್ನಬಸಪ್ಪ ವಿರುದ್ಧ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಕಿಡಿಕಾರಿದರು.

ಸ್ಪೀಕರ್ ಯು.ಟಿ.ಖಾದರ್ ಸಮಾಧಾನ ಮಾಡಲು ಪ್ರಯತ್ನಿಸಿದರೂ, ಪ್ರಯೋಜನವಾಗಲಿಲ್ಲ. ಚೆನ್ನಬಸಪ್ಪ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ ಲಕ್ಷ್ಮಣ್ ಸವದಿ, ‘ನಿಮಗೆ ಹುಚ್ಚುನಾಯಿ ಕಡಿದಿದೆಯಾ? ಎಂದು ಕೂಗಾಡಿದರು. ಇದೇ ವೇಳೆ ಕೆಲವು ಸಕ್ಕರೆ ಕಾರ್ಖಾನೆ ಮಾಲಕರು ರೈತರಿಗೆ ಮೋಸ ಮಾಡುತ್ತಿದ್ದು, ಅವರು ಸರಕಾರವನ್ನು ವಂಚಿಸಬಹುದು. ಆದರೆ, ದೇವರನ್ನಲ್ಲ. ಅವರಿಗೆ ಪಾಶ್ವವಾರ್ಯು ಆಗಲಿದೆ ಎಂದು ಹೇಳಿದರು

ಇದನ್ನೂ ಓದಿ-

Related Articles

Leave a Reply

Your email address will not be published. Required fields are marked *

Back to top button