ರಾಜ್ಯ ನಾಯಕರ ಅನುಪಸ್ಥಿತಿಯಲ್ಲಿ ಬಿಜೆಪಿಯ ಬರ ಅಧ್ಯಾಯನ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಬರ ಅಧ್ಯಾಯನ ನಡೆಸಿದೆ. ಶಿವಮೊಗ್ಗದ ಏಳು ತಾಲೂಕನ್ನ ರಾಜ್ಯ ಬರ ಎಂದು ಘೋಷಿಸಿದೆ. ಇದರ ಬೆನ್ನಲ್ಲೇ ಸರ್ಕಾರ ಬರದ ಕಾರ್ಯಕ್ರಮ ರೂಪಿಸದೆ ಅಸಡ್ಡೆತನ ತೋರುತ್ತಿದೆ ಎಂದು ಆರೋಪಿಸಿ ಬಿಜೆಪಿಯಿಂದ ಇಂದು ಬರ ಅಧ್ಯಾಯನ ನಡೆಸಿದೆ. ಬರ ಅಧ್ಯಾಯನಕ್ಕೆ ಬರಬೇಕಿದ್ದ ಪಕ್ಷದ ರಾಜ್ಯ ನಾಯಕರ ಗೈರು ಹಾಜರಿ ಮಾತ್ರ ಎದ್ದುಕಾಣುವಂತೆ ಮಾಡಿದೆ.
ಬರ ವಿಚಾರ ಇಟ್ಟುಕೊಂಡು ಸರ್ಕಾರದ ಕಣ್ಣು ತೆರಸಲು ಹೊರಟಿರುವ ಬಿಜೆಪಿಗೆ ಶಿವಮೊಗ್ಗದಲ್ಲಿ ರಾಜ್ಯ ನಾಯಕರ ಅನುಪಸ್ಥಿತಿ ಮಾತ್ರ ಎದುರಾಳಿ ಕಾಂಗ್ರೆಸ್ ಗೆ ಆಹಾರವಾಗಿದೆ. ಕೇವಲ ಜಿಲ್ಲಾ ನಾಯಕರ ಉಪಸ್ಥತಿಯಲ್ಲಿ ಪಕ್ಷ ಹೊರಟಿರುವುದು ರಾಜ್ಯ ನಾಯಕರ ಜವಬ್ದಾರಿಯನ್ನ ಅಣುಕಿಸುವಂತೆ ಮಾಡಿದೆ.
ವಿಧಾನ ಸಭೆ ಅಧಿವೇಶನದಲ್ಲಿ ಬರ ಅಧ್ಯಾಯನ ಸಮಿತಿಯ ವರದಿ ಇಟ್ಟು ಚರ್ಚೆಗೆ ಮುಂದಾಗಿರುವ ಬಿಜೆಪಿಗೆ ರಾಜ್ಯ ನಾಯಕರಾದ ಹಾಗೂ ಮಾಜಿ ಸಚಿವ ಸುನೀಲ್ ಕುಮಾರ್ ಮತ್ತು ಶಿವರಾಂ ಹೆಬ್ಬಾರ್ ಅವರ ಅನುಪಸ್ಥಿತಿ ಮಾತ್ರ ಎದ್ದುತೋರಿಸಿದೆ. ಸರ್ಕಾರವನ್ನ ಬರ ವಿಚಾರದಲ್ಲಿ ಬೆಂಡು ಮಾಡಲು ಮುಂದಾದ ಬಿಜೆಪಿ ಎದುರಾಳಿ ಕಾಂಗ್ರೆಸ್ ನ ವಾಗ್ದಾಳಿಯನ್ನ ಎದುರಿಸುವಂತೆ ಮಾಡಿದೆ.
ಇಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅಧ್ಯಾಯನಕ್ಕೆ ಬರಬೇಕಿದ್ದ ನಾಯಕರು ಗೈರು ಆಗಿದ್ದಾರೆ. ಸಂಸದರೆ ಬರ ಅಧ್ಯಾಯನಕ್ಜೆ ಹೊರಟಿದ್ದಾರೆ. ವಿಡಂಬನಾತ್ಮಕ ಅಧ್ಯಾಯನ ಎಂದು ಟೀಕಿಸಿರುವುದು ಪಕ್ಷವನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಕುಂಸಿ ಹಾರನಹಳ್ಳಿ ಹಾಗೂ ಶಿಕಾರಿಪುರದಲ್ಲಿ ಬಿಜೆಪಿ ಸಂಸದ ರಾಘವೇಂದ್ರರವರ ನೇತೃತ್ವದಲ್ಲಿ ಬರ ಅಧ್ಯಾಯನನಡೆಸಿದೆ. ಕುಂಸಿ ಮೆಸ್ಕಾಂ ಕಚೇರಿ ಮುಂದೆ ಸಂವಾದ ನಡೆಸಲಾಗಿದೆ. ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಹರಿಸುವ ಕುರಿತು ಅಧಿಜಾರಿಗಳ ಜೊತೆ ಚರ್ಚೆ ನಡೆಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಚೆನ್ನಬಸಪ್ಪ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಮೊದಲಾದ ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/2770
