ರಾಜಕೀಯ ಸುದ್ದಿಗಳು

ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಮೀಸಲಾತಿ ಕಡಿತ-ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಯ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿಯನ್ನ ಪರಿಣಿಸುವಂತೆ ಕೋರಿ ಟಿ.ಎನ್ ವಿಜಯ ಭಾಸ್ಕರನ್ ಅವರು ಸಲ್ಲಿಸಿರುವ 6 ನೇ ಆಡಳಿತ ಸುಧಾರಣೆ ವರದಿ ಅಧ್ಯಾಯ 4 ರ ಅಧಿಸೂಚನೆ ಸಂಖ್ಯೆ 81 ನ್ನ ಕೈಬಿಡುವಂತೆ ಕರ್ನಾಟಕ ಅರಣ್ಯ ಪದವೀಧರರು ಮತ್ತು ವಿದ್ಯಾರ್ಥಿಗಳ ಸಂಘ ನಗರದಲ್ಲಿ‌ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಮೀಸಲಾತಿಯು ಅರಣ್ಯಶಾಸ್ತ್ರ ಪದವೀಧರರ ಮೀಸಲಾತಿ ಶೇ.75 ರಿಂದ ಶೇ.50 ಕ್ಕೆ ಇಳಿಕೆಯಾಗಿದೆ.
ಸರ್ಕಾರದ ಧೋರಣೆ ಖಂಡಿಸಿ, ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಸೈನ್ಸ್ ಮೈದಾನದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು. ಅರಣ್ಯ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ನೀಡಲು ಆಗ್ರಹಿಸಲಾಗಿದೆ. ಅರಣ್ಯ ಶಾಸ್ತ್ರ ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡದಂತೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ-https://suddilive.in/archives/8835

Related Articles

Leave a Reply

Your email address will not be published. Required fields are marked *

Back to top button