ದತ್ತಾತ್ರಿಗೆ ಎಂಎಲ್ ಸಿ ಟಿಕೇಟ್ ನೀಡುವಂತೆ ವಿವಿಧ ಸಂಘಟನೆಗಳಿಂದ ಬಿಎಸ್ ವೈ ಭೇಟಿ

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಗಾಗಿ ಆಕಾಂಕ್ಷಿಗಳ ಪಟ್ಟಿ ಪ್ರಮುಖ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಪೈಪೋಟಿ ಜೋರಾಗಿದೆ. ಕಾಂಗ್ರೆಸ್ ನಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಎಸ್ಪಿ ದಿನೇಶ್, ಆಯನೂರು ಮಂಜುನಾಥ್ ರಂಗನಾಥ್ ಕಣದಲ್ಲಿದ್ದಾರೆ.
ಅದರಂತೆ ಬಿಜೆಪಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 10 ಜನ ಆಕಾಂಕ್ಷಿಗಳು ಕಣದಲ್ಲಿದ್ದಾರೆ. ಡಾ.ಧನಂಜಯ ಸರ್ಜಿ, ವಕೀಲ ಪ್ರವೀಣ್ ಕುಮಾರ್, ದತ್ತಾತ್ರಿ ಸೇರಿದಂತೆ 10 ಜನ ಶಿವಮೊಗ್ಗ ಜಿಲ್ಲೆಯಿಂದ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸುವ ಆಕಾಂಕ್ಷಿಗಳಾಗಿದ್ದಾರೆ. ಪದವೀಧರ ಮತ್ತು ಶಿಕ್ಷಣ ಕ್ಷೇತ್ರ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ ಸೇರಿದಂತೆ 6 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
ಬಿಜೆಪಿಯಲ್ಲಿ ಶಿವಮೊಗ್ಗ ಜಿಲ್ಲೆಯ ಒಂದರಲ್ಲೇ ಇಷ್ಟೊಂದು ಜನರಿದ್ದಾರೆ. ಇನ್ನೂ ಐದು ಜಿಲ್ಲೆಯಿಂದ ಸ್ಪರ್ಧಿಸುವ ಅವಕಾಶವಿದೆ. ಅದು ಏನೇ ಇರಲಿ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಚುನಾವಣೆ ನಡೆಯಲಿದೆ. ಕಳೆದ ಬಾರಿ ಆಯನೂರು ಮಂಜುನಾಥ್ 2019 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು.
ಬದಲಾದ ಕಾಲಘಟ್ಟದಲ್ಲಿ ಆಯನೂರು ಪದವೀಧರ ಕ್ಷೇತ್ರದ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದರು. ಈಗ ಕಾಂಗ್ರೆಸ್ ಸೇರ್ಪಡೆಗೊಂಡು ಪದವೀಧರ ಕ್ಷೇತ್ರಕ್ಕೆ ಆಯ್ಕೆ ಬಯಸಿದ್ದಾರೆ. ಸರ್ಕಾರ ಈ ಚುನಾವಣೆಗೆ ಮತದಾರರ ನೋಂದಣಿಗೆ ಅವಕಾಶ ಕೊಟ್ಟಿರುವುದರಿಂದ ಎರಡೂ ಪಕ್ಷಗಳ ಆಕಾಂಕ್ಷಿಗಳು ನೋಂದಣಿ ಕಾರ್ಯವನ್ನ ಭರದಿಂದ ಮಾಡುತ್ತಿದ್ದಾರೆ.
ಇಂದು ರೋಟರಿ, ಫ್ರೆಂಡ್ಸ್ ಸೆಂಟರ್, ಚಿನ್ನಾಬೆಳ್ಳಿ ವರ್ತಕರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಶಿವಮೊಗ್ಗ ತಾಲೂಕು ಬ್ರಾಹ್ಮಣ ಸಂಘ, ವಿಪ್ರ ವೈದಿಕ ಪರಿಷತ್, ಕಾಸ್ಮೋ ಕ್ಲಬ್ ಇಷ್ಟು ಸಂಘಟನೆಗಳು ಬಿಜೆಪಿಯ ದತ್ತಾತ್ರಿಯ ಪರವಾಗಿ ಬ್ಯಾಟ್ ಬೀಸಿವೆ. ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ಗೃಹಕ್ಕೆ ಇಷ್ಟು ಸಂಘಟನೆಗಳು ತೆರಳಿ ಪದವೀಧರ ಕ್ಷೇತ್ರಕ್ಕೆ ದತ್ತಾತ್ರಿಯವರನ್ನ ಪ್ರಬಲ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವಂತೆ ಒತ್ತಾಯಿಸಿದೆ.
ಈ ಹಿಂದೆ ಸೂಡಾ ಅಧ್ಯಕ್ಷರಾಗಿದ್ದ ದತ್ತಾತ್ರಿಯವರು 2019 ರಲ್ಲೂ ಆಯನೂರು ಮಂಜುನಾಥ್ ಆಯ್ಕೆಯಾದಾಗಲೂ ಆಕ್ಷಿಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದರು. ಅದಕ್ಕೂ ಮೊದಲು ಎಂಪಿ ಚುನಾವಣೆಯ ರೇಸ್ ನಲ್ಲೂ ಅವರ ಹೆಸರು ಕೇಳಿಬಂದಿತ್ತು. 2023 ರ ವಿಧಾನ ಸಭಾ ಚುನಾವಣೆಯಲ್ಲೂ ಇವರ ಹೆಸರು ಕೇಳಿಬಂದಿತ್ತು. ಈ ಬಾರಿಯೂ ಎಂಎಲ್ ಸಿ ರೇಸ್ ನಲ್ಲಿ ದತ್ತಾತ್ರಿ ಇದ್ದಾರೆ. ಆದರೆ ಈ ಬಾರಿ 10 ಜನ ಆಕಾಂಕ್ಷಿಯಲ್ಲಿ ಪೈಪೋಟಿ ಇದೆ ಅದೃಷ್ಟ ಲಕ್ಷ್ಮೀ ಯಾರ ಕೈಹಿಡಯಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ-https://suddilive.in/archives/2490
