ಸ್ಥಳೀಯ ಸುದ್ದಿಗಳು

ಏ.18 ಕ್ಕೆ ರಾಘವೇಂದ್ರ ನಾಮಪತ್ರಸಲ್ಲಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿ

ಸುದ್ದಿಲೈವ್/ಶಿವಮೊಗ್ಗ

ಜೆಡಿಎಸ್ ಪಕ್ಷದ ಬೆಂಬಲಿಗ ಅಭ್ಯರ್ಥಿ ಬಿಜೆಪಿಯ ಬಿ.ವೈ.ರಾಘವೇಂದ್ರ ಏ. 18 ರಂದು ನಾಮಪತ್ರ ಸಲ್ಲಿಸುತ್ತಿದ್ದು, ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಸಿಎಂ ಕುಮಾರ ಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲ್ಲಲು ಸುಲಭದ ಮಾರ್ಗವಾಗಿದೆ. ಯಾವುದೇ ಅನುಮಾನ ಬೇಡ ಎಂದರು.

ನಾಮಪತ್ರ ಸಲ್ಲಿಕೆಯಾದ  ನಂತರ ಮತ್ತೊಮ್ಮೆ ಶಿವಮೊಗ್ಗ, ಗ್ರಾಮಾಂತರ, ತೀರ್ಥಹಳ್ಳಿಯ ಕಾರ್ಯಕರ್ತರ ಸಭೆಯನ್ನ ಮಾಜಿ ಸಿಎಂ ನಡೆಸಲಿದ್ದಾರೆ. ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಡಿಸಿಎಂ ಈಶ್ವರಪ್ಪನವರು ನಾಮಪತ್ರ ಸಲ್ಲಿಸಿದ್ದಾರೆ. ಕೊನೆಯ ದಿನ ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ಅವರ ಗೆಲುವು ನಿಶ್ಚಿತ ಎಂದರು.

ಈಶ್ವರಪ್ಪನವರ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಯ ಗೆಲುವಿಗೆ ಯಾವುದೇ ಅಡೆತಡೆಗಳಿಲ್ಲ. ಅವರಿಗೆ ಇನ್ನೂ ಅವಕಾಶವಿದೆ ನಾಮಪತ್ರ ಹಿಂಪಡೆದುಕೊಳ್ಳಲಿ ಎಂದು ಸಲಹೆ ನೀಡಿದರು.

ನಿನ್ನೆ ಕಾಂಗ್ರೆಸ್ ನ ನಾಮಪತ್ರ ಮೆರವಣಿಗೆ ಮತ್ತು ಮಾಜಿ ಡಿಸಿಎಂ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಗಿಂತ ಅಧಿಕ ಜನರನ್ನಸೇರಿಸಿ ರಾಘವೇಂದ್ರರ ನಾಮಪತ್ರ ಸಲ್ಲಿಸಲು ಜನರನ್ನ ಸೇರಿಸುತ್ತೇವೆ ಎಂದು ಹೇಳಿದರು.

ಜನ ಮೈತ್ರಿಯಾಗಿದ್ದು ಒಳ್ಳೆಯದಾಗಿದೆ ಎಂದು ಹೇಳುತ್ತಿದ್ದಾರೆ. ಮೈತ್ರಿಯನ್ನ ವಿರೋಧುಸುತ್ತಿರುವುದು ಕಾಂಗ್ರೆಸ್ ನವರು. ನಾವು ಕಾಂಗ್ರೆಸ್ ಹೇಳಿದಂತೆ ಕೇಳಬೇಕೋ ಅಥವಾ ಜನ ಹೇಳಿದ್ದು ಕೇಳಬೇಕೋ ಎಂದು ಪ್ರಶ್ನಿಸಿದ ಪ್ರಸನ್ನ ಕುಮಾರ್, ಡಿಕೆಶಿ ಅವರು ಕುಮಾರ ಸ್ವಾಮಿ ಅವರನ್ನ ಮಹಿಳೆಯರನ್ನ ಅವಮಾನಿಸಿದ್ದಾರೆ ಎಂದು ಹೇಳ್ತಾ ಇದ್ದಾರೆ. ಇದು ಚುನಾವಣೆ ಗಿಮಿಕ್ ಅಷ್ಟೆ,  ಅವರ ಅಪಪ್ರಚಾರ ಮುಂದು ವರೆಸಿದಿದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/12938

Related Articles

Leave a Reply

Your email address will not be published. Required fields are marked *

Back to top button