ಸ್ಥಳೀಯ ಸುದ್ದಿಗಳು

ಸ್ವರ್ಣವಲ್ಲಿ ಮಠದ ಶಿಷ್ಯ ಸ್ವೀಕಾರ ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

ಶಿರಸಿ ಜಿಲ್ಲೆಯ ಸೋಂದ ಸ್ವರ್ಣವಲ್ಲಿ ಮಠಕ್ಕೆ ನೂತನ ಶಿಷ್ಯರನ್ನ ಸ್ವೀಕರಿಸಲಾಗುತ್ತಿದೆ. ಫೆ.18 ರಿಂದ‌ 22 ರವರೆಗೆ ಈ ಕಾರ್ಯಕ್ರಮವು ಮಠದ ಮಠಾಧೀಶ್ವರ ಗಂಗಾಧರೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಧಾರ್ಮಿಕ‌ ಮತ್ತು ಶಿಷ್ಯ ಸ್ವೀಕಾರ ಕಾರ್ಯಕ್ರಮ ಜರುಗಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸ್ವರ್ಣ ರಶ್ಮಿ ಯ ಮುಖಂಡರಾದ ಹಾಗೂ ವಕೀಲ ಅಶೋಕ್ ಜಿ ಭಟ್ , ಐದು ದಿನಗಳ ಕಾರ್ಯಕ್ರಮದಲ್ಲಿ ಎರಡು ದಿನಗಳ ಕಾರ್ಯಕ್ರಮ ಹಾಗೂ ಶಿಷ್ಯ ಸ್ವೀಕಾರದ ಕಾರ್ಯಕ್ರಮದ ವಿಧಿನಿಯಮಗಳು ನಡೆದಿದೆ. ಫೆ.22 ರಂದು ಧಾರ್ಮಿಕ ಸಭೆ ಮತ್ತು ಶಿಷ್ಯ ಸ್ವೀಕಾರ ನಡೆಯಲಿದೆ ಎಂದರು.

ಯಲ್ಲಾಪುರದ ವೇ|| ನಾಗರಾಜ್ ಭಟ್ ಅವರನ್ನ ಗಂಗಾಧರೇಶ್ವರ ಸ್ವಾಮೀಜಿ ಅಧಿಕಾರ ಸ್ವೀಕರಿಸಲಿದ್ದಾರೆ. ಶಿಷ್ಯ ಸ್ವೀಕಾರದ ನಂತರ ಇವರಿಗೆ ಹೆಸರು ಬದಲಿಸಲಾಗುವುದು. ಫೆ.22 ರಂದು ನಡೆಯುವ ಧರ್ಮಸಭಾ ಕಾರ್ಯಕ್ರಮವು ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ.

ಮೈಸೂರಿನ ಕೆಆರ್ ಎಸ್ ನ ಯೋಗಾನಂದೇಶ್ವರ ಸರಸ್ವತಿ ಮಠದ ಯಡತೊರೆಯ ಶಂಕರ ಭಾರತಿ ಮಹಾಸ್ವರಸ್ವತಿ ಸ್ವಾಮೀಜಿ,ಹರಿಹರಪುರದ ಶಾರದಾ ಲಕ್ಷ್ಮೀನರಸಿಂಹ ಪೀಠಮ್ ನ ಸ್ವಯಂ ಪ್ರಕಾಶ್ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಅವಿಚ್ಛಿನ್ನ ಪರಂಪರೆಯ ಬೆಂಗಳೂರಿನ ಚಾಮರಾಜಪೇಟೆಯ ಕೂಡ್ಲಿ ಶೃಂಗೇರಿ ಮಠದ ವಿದ್ಯಾವಿಶ್ವೇಶ್ವರ ಸ್ವಾಮೀಜಿ,

ಹೊಳೆನರಸೀಪುರದ ಪ್ರಕಾಶಾಂದೇಶ್ವರ ಸರಸ್ವತಿ ಮಹಾಸ್ವಾಮಿಗಳು, ಕಾಸರಗೋಡಿನ ಸಚ್ಚಿದಾನಙದ ಭಾರತಿ ಮಹಾಸ್ವಾಮಿಗಳು, ಮಾಧವಾನಂದ ಭಾರತೀ ಸ್ವಾಮಿಗಳು ಮೊದಲಾದವರು ಭಾಗಿಯಾಗಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಗಂಗೇಧರೇಶ್ವರ ಸ್ವಾಮಿಗಳು 38ವರ್ಷದಿಂದ ಅನೇಕ ಸಾಮಾಜಿಕ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಪಶ್ಚಿಮಘಟ್ಟಗಳ ಉಳಿಸಿ ಹೋರಾಟ, ಬೇಡ್ತಿ-ಅಘನಾಶಿನಿ ಜಲಾಶಯದ ಹೋರಾಟದ ಮುಂಚೂಣಿಯನ್ನ ಸ್ವಾಮೀಜಿ ವಹಿಸಿದ್ದರು. ಇವರನ್ನ ಹಸಿರು ಸ್ವಾಮೀಜಿಗಳೆಂದೆ ಕರೆಯುತ್ತಾರೆ. ಅವರ ಅಭಿಲಾಷೆಯಂತೆ ಎಂದು ಸ್ವರ್ಣರಶ್ಮಿ ಸಂಸ್ಥೆಯ ಬಾಲಕೃಷ್ಣ ಹೆಗಡೆ ತಿಳಿಸಿದರು.

ಇದನ್ನೂ ಓದಿ-https://suddilive.in/archives/9266

Related Articles

Leave a Reply

Your email address will not be published. Required fields are marked *

Back to top button