ನಗರದಾದ್ಯಂತ ಸೆಕ್ಷನ್ ಜಾರಿ ರದ್ದುಗೊಳಿಸಬೇಕು-ಶಾಸಕ ಚೆನ್ನಿ ಮತ್ತು ಮಾಜಿ ಸಚಿವ ಈಶ್ವರಪ್ಪ ಗುಡುಗು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಹಿಂದೂ ಮತ್ತು ಮುಸ್ಲೀಂ ಕಾರ್ಯಕ್ರಮಗಳು ನಡೆಯುತ್ತವೆ. ಅನಂತ ಚತುರ್ಥಿದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿ ಹಿಂದೂ ಮಹಾಸಭಾ ಗಣಪತಿ ವಿಸರ್ಜಿಸಲಾಯಿತು. ಒಂದೇ ಗಲಾಟೆ ಕಲ್ಲುತೂರಾಟ ನಡೆಯಲಿಲ್ಲವೆಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿಂದೂಗಳ ಹಬ್ಬ ಮೆರವಣಿಗೆ ನಡೆದಾಗ ಒಂದು ಗಲಾಟೆ ಆಗೊಲ್ಲ. ಆದರೆ ಮುಸ್ಲೀಂರ ಮೆರವಣಿಗೆ ನಡೆದಾಗ ರಾಜ್ಯ ಸರ್ಕಾರ ತಲೆತಗ್ಗಿಸುವಂತೆ ಗಲಾಟೆ ಆಗಿವ ಎಂದರು.
ಮೆರವಣಿಗೆಯಲ್ಲಿ ತಲವಾರನ್ನ ಹಿಡಿಯಲಾಗಿದೆ. ತಲವಾರ್ ಹಿಡಿದು ಯಾರಿಗೆ ಹೆದರಿಸುತ್ತಿದ್ದೀರಿ. ಹಿಂದೂ ಸಮಾಜಕ್ಕಾ ಎಂದು ಪ್ರಶ್ನಿಸಿದ ಅವರು. ತಲವಾರು ಹಿಡಿದು ಎಚ್ಚರಿಕೆಕೊಡಲು ಹಿಂದೂ ಸಮಾಜಕ್ಕೂ ಬರುತ್ತೆ.ಹಿಂದೂ ಸಮಾಜ ಎಂದೂ ಯಾರಿಗೂ ಹೆದರಿಲ್ಲ. ತಲವಾರ್ ಹಿಡಿದು ಮೆರವಣಿಗೆ ಹೊರಟವರನ್ನ ಪೊಲೀಸರು ಬಂಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಗೃಹಸಚಿವ ಡಾ.ಪರಮೇಶ್ವರ್ ಯಾರೂ ತಲವಾರ್ ಹಿಡಿದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಗೃಹ ಸಚಿವರು ಮುಸ್ಲೀಂ ಗುಲಾಮರಾಗಿದ್ದಾರೆ. ಔರಂಗಜೇಬ್,ಟಿಪ್ಪು ಫೋಟೊಗಳು, ದೊಡ್ಡತಲ್ವಾರುಗಳನ್ಮ ತೂಗಿಹಾಕಿರುವುದು ಭಯ ಹುಟ್ಟಿಸುವುದಕ್ಕಾ ಎಂದು ಗುಡುಗಿದರು. ಮುಸ್ಲೀಂ ಹಬ್ವಗಳು ನಡೆಯುವುದು ಹಿಂದೂ ಸಮಾಜವನ್ನ ಹೆದರಿಸಲಾ ಎಂದು ಕೇಳಿದರು.
ರಾಗಿಗುಡ್ಡದಲ್ಲಿ ಹಿಂದೂಗಳು ಮನೆಗಳಲ್ಲಿ ದೊಡ್ಡಕಲ್ಲು ತೂರಲಾಗಿದೆ. ಮುಖಕ್ಕೆ ಕಪ್ಪು ಪಟ್ಟಿ ಕಟ್ಟಿಕೊಂಡು ಮನೆಗೆ ನುಗ್ಗಿ ಹೊಡೆದಿದ್ದಾರೆ. ಪೊಲೀಸ್ ಇಲಾಖೆಯವರಿಗೆ ಸಾಕಷ್ಟು ಪೆಟ್ಟುಬಿದ್ದಿದೆ. ಎಸ್ಪಿಗೂ ಕಲ್ಲು ತೂರಲಾಗಿದೆ ಅದೃಷ್ಟವಷತ್ ಬಜಾವ್ ಆಗಿದ್ದಾರೆ. ಈ ಭಾಗದಲ್ಲಿ ಗಣಪತಿ ಇಟ್ಟು ವಿಸರ್ಜಿಸಲಾಗಿದೆ. ಮುಸ್ಲೀಂ ಹಬ್ಬದ ಮೆರವಣಿಗೆಗೆ ಪೊಲೀಸರು ಅನುಮತಿ ನೀಡಿರುವ ಜಾಗವೇ ಬೇರೆ. ಕಂಡಕಂಡಲ್ಲಿ ಅವರು ಓಡಾಡಿದ್ದಾರೆ.
ಸಂಜೆ 6 ಗಂಟೆಯ ವರೆಗೆ ಮೆರವಣಿಗೆ ಮುಗಿಸಲು ಹೇಳಿದರೆ 7-30 ಆಗಿದೆ. ಡಾ.ಪರಮೇಶ್ವರ್ ಶಿವಮೊಗ್ಗಕ್ಕೆ ಬನ್ನಿ ಹಿಂದೂ ಮನೆಗಳಿಗೆ ಹೋಗಿ ಬರಲಿ. ಮುಸ್ಲೀಂ ಗುಂಡಗಳು ತಲ್ವಾರ್ ಹಿಡಿದು ಮೆರವಣಿಗೆ ನಡೆಸಿರುವುದು ಟಿವಿಯಲ್ಲಿ ತೋರಿಸಲಾಗುತ್ತಿದೆ. ತಲ್ವಾರ್ ಹಿಡಿದಿಲ್ಲವೆಂದು ಗೃಹಸಚಿವರು ಹೇಳಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಒಬ್ಬ ಸಚಿವರು, ಜಿಲ್ಲಾ ರಕ್ಷಣಾಧಿಕಾರಿಗಳು ಕೆಲವರು ಕಲ್ಲು ಹೊಡೆದಿದ್ದಾರೆ. ಎಂದಿದ್ದಾರೆ. ಕೆಲವರು ಎಂದರೆ ಯಾರು. ಒಬ್ವ ಹಿಂದೂ ಯುವಕನು ಕಲ್ಲು ತೂರಿಲ್ಲ. ಹಿಂದೂ ಸಮಾಜ ರಕ್ಷಣೆ ನಿಮ್ಮ ಕರ್ತವ್ಯ ಅಲ್ಲ. ಇದು ಪ್ರಚೋದನೆ ಅಲ್ಲವೇ? ನಾವು 500, ಸಾವಿರ ಜನರು ನುಗ್ಗುತ್ತೀವಿ ನಮನ್ನೂ ಅರೆಸ್ಟ್ ಮಾಡಿ ಎಂದರು. ಗಾಯಾಳುಗಳನ್ನ ಮೆಗ್ಗಾನ್ ನಿಂದಲೇ ಡಿಸ್ಚಾರ್ಜ್ ಆಗಿದ್ದಾರೆ.
ನಾನು ಎಸ್ಪಿಗೆ ಗಾಯಾಳು ಪೊಲೀಸರು ಎಲ್ಲಿ ಎಂದು ಕೇಳಿದರೆ ಡಿಸ್ಚಾರ್ಜ್ ಆಗಿದ್ದಾರೆ ಮನೆಗೆ ಹೋಗಿದ್ದಾರೆ ಎನ್ನುತ್ತಾರೆ. ಸಾಕ್ಷಿ ಹೇಳೋದು ಬೇಡ ಎಂದು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆರೋಪಿಸಿದರು. ಇಡೀ ನಗರಕ್ಕೆ ಸೆಕ್ಷನ್ 144 ವಿಸ್ತರಿಸುವುದೇಕೆ? ಗೃಹ ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಹಗುರವಾಗಿ ತೆಗೆದುಕೊಳ್ಳಬೇಡಿ.
ರಾಗಿಗುಡ್ಡದಲ್ಲಿ ಗೂಂಡಾ ಮುಸ್ಲೀಂರಿಗೆ ರಕ್ಷಣೆ ನೀಡಲಾಗಿದೆ. ಶಾಂತಮ್ಮ ಎಂಬ ಮಹಿಳೆಗೆ ಅಡಿಕೆ ದಬ್ಬೆಯಲ್ಲಿ ಹೊಡೆಯಲಾಗಿದೆ. ಹೊಡೆದವರನೆಲ್ಲಾ ಬಂಧಿಸಲಾಗಿದೆಯಾ? ಕೋಲಾರದಲ್ಲಿ ಕತ್ತಿಯನ್ನ ತೂಗಿಹಾಕಿದ್ದಕ್ಕೆ ದೂರು ದಾಖಲಿಸಲಾಗಿದೆ. ಇಲ್ಲಿಯಾಕೆ ಬಿಟ್ರಿ, ನಗರದಲ್ಲಿ ತಕ್ಷಣ ಖಡ್ಗ ತೆಗೆಯಬೇಕು. ತೆಗೆಯದಿದ್ದರೆ ಸರ್ಕಾರವೇ ಹೊಣೆ ಎಂದು ದೂರಿಸಿದರು.
ಸ್ಥಳೀಯರು ಅಥವಾ ಹೊರಗಡೆಯಿಂದ ಬಂದ ಮುಸ್ಲೀಂ ಬಂದು ಗಲಾಟೆ ಮಾಡಿದ್ದಾರೆ ಎನ್ನಲು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಗಲಭೆ ನಡೆಸಲಾಗಿದೆ. ಹಿಂದೂ ಸಮಾಜನಗರದಲ್ಲಿ ಶಾಂತವಾಗಿದೆ. ಇದನ್ನ ದೌರ್ಬಲ್ಯವಲ್ಲ. ವ್ಯಾಪಾರ ನೆಡಸಲು ಅವಕಾಶ ನೀಡಬೇಕು. ಒಬ್ಬ ಹಿಂದೂನೂ ಅರೆಸ್ಟ್ ಮಾಡಬಾರದು. ಒಬ್ಬನೂ ಹಿಂದೂ ಕಲ್ಲು ತೂರಿಲ್ಲ ಎಂದು ಹೇಳಿದರು. ಮಧ್ಯಾಹ್ನದ ಒಳಗೆ ಗಾಂಧಿ ಬಜಾರ್ ಬಂದ್ ಮಾಡೋದು ನಿಲ್ಲಿಸಬೇಕು. ಶಾಂತಿಯಾಗಿರುವ ಶಿವಮೊಗ್ಗವನ್ನ ಹಾಳಮಾಡಬೇಡಿ ಎಂದರು.
ಮುಸ್ಲೀಂ ನಾಯಕರು ಈ ಗೂಂಡಾಗಳಿಗೆ ಎಚ್ಚರಿಕೆ ನೀಡಬೇಕು. ತಬ್ಲಿಕ್ ಈ ಹಬ್ಬ ಮಾಡಿಲ್ಲ. ಶಿಯಾ ಸುನ್ನಿ ಗಳು ಹಬ್ಬ ಆಚರಿಸಿದ್ದಾರೆ. ಇವರನ್ನ ಕರೆದು ಶಾಂತಿ ಸಭೆ ನಡೆಸಬೇಕು. ಹಬ್ಬದ ದಿನಗಳಲ್ಲಿ ಶಾಂತಿ ಸಭೆ ನಡೆಸೋದಲ್ಲ. ಸಿಎಂ ಗೃಹಸಚಿವರು ಜಿಲ್ಲಾ ಉಸ್ತುವಾರಿ ಸಚಿವರ ಹೇಳಕೆ ನೋಡಿದರೆ ಹಿಂದೂ ಸಮಾಜ ತಿರುಗಿ ಬೀಳುವಂತೆ ಮಾಡುತ್ತಿವೆ. ಮುಸ್ಲೀಂ ಗೂಂಡಗಳು ರಕ್ಷಣೆಯಾಗುವಂತಿದೆ ಎಂದು ಗುಡುಗಿದರು.
ವಕೀಲ ಶ್ರೀಪಾಲ್ ವಿರುದ್ಧ ಕ್ರಮ ಜರುಗಿಸಿ
ವಕೀಲ ಕೆಪಿ ಶ್ರೀಪಾಲ್ ರನ್ನಬಂಧಿಸಬೇಕು.ಪತ್ರಿಕೆಯಲ್ಲಿ ಟಿವಿ ಮಾಧ್ಯಮಗಳಲ್ಲಿ ಪ್ರಚೋದನಾಕಾರಿ ಸುದ್ದಿ ಬಿತ್ತರವಾಗುತ್ತಿದೆ. ಇಂತಹ ಟಿವಿ ವರದಿಗಾರ ಮತ್ತು ಟಿವಿ ಸಂಪಾದಕರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಬೇಕೆಂದು ಹೇಳಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವನ್ನ ಹಾಳು ಮಾಡುವ ಇವರ ವಿರುದ್ಧ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಗುಡುಗಿದರು.
ಶಾಸಕ ಚೆನ್ನಿ ಮಾತು
ಶಾಸಕ ಚೆನ್ನಬಸಪ್ಪ ಮಾತನಾಡಿ, ಶಾಂತಿ ನಗರಕ್ಕ ಹೋಗಿ ಬಂದಿದ್ದೇನೆ. ನಿನ್ನೆನೂ ಹೋಗಿದ್ದೆ. ಮೆರವಣಿಗೆ ಮುಂಚೆ ಮತ್ತು ಗಲಭೆ ನಂತರನೂ ಹೋಗಿದ್ದೆ. ಗಾಯಾಳುಗಳನ್ನ ಭೇಟಿಯಾಗಲು ಹೋಗಿ ಬಂದಿದ್ದೇನೆ. ಹಿಂದೂಗಳು ಕೆಟ್ಟ ಪರಿಸ್ಥಿತಿಯಲ್ಲಿ ಬದುಕುವಂತಾಗಿದೆ. ಎಲ್ಲಿ ಹಿಂದೂ ಗಳಿದಗದಾರೆ ಅಟ್ಯಾಕ್ ಮಾಡಲಾಗಿದೆ. ಅವರು ಹೇಗೆ ನಡೆದುಕೊಂಡಿದ್ದಾರೆ ಎಂಬುದು ಉದಾಹರಣೆಯಾಗಿದೆ. ಮುಸ್ಲೀಂ ಸಾಮ್ರಾಜ್ಯ ಎಂದು ಬರೆಯಲಾಗಿದೆ. ಟಿಪ್ಪು ಬಗ್ಗೆ ಫ್ಲೆಕ್ಸ್ ಹಾಕಲಾಗಿದೆ.
ಔರಂಗಜೇಬ್ ನ ವಂಶಸ್ಥರು ರಾಗಿಗುಡ್ಡದಲ್ಲಿದ್ದಾರಾ?. ಸಸ್ಯಶ್ಯಾಮಲಂ ಎಂಬುವ ರೀತಿ ಹಸಿರು ಸಾಮ್ರಾಜ್ಯ ನಡೆಸಲಾಗಿದೆ. ಒಬ್ಬ ಮಹಿಳೆ ಕಣ್ಣೀರು ಹಾಕಿದ್ದಾಳೆ. ಸುತ್ತಲು ಮುಸ್ಲೀಂ ಇದ್ದಾರೆ. ಒಬ್ಬಳೇ ಇದ್ದೇನೆ. ಯಾವ ಸಂದರ್ಭದಲ್ಲಿ ಏನಾಗಲುದೆ ಗೊತ್ತಿಲ್ಲವೆಂದು ಭಯದಲ್ಲಿ ಬದುಕುತ್ತಿದ್ದೇನೆ ಎಂದಿದ್ದಾರೆ. ಶಿವಮೊಗ್ಗ ಶಾಂತಿಯಾಗಿರುವುದು ಅನೇಕರಿಗೆ ಇಷ್ಟವಾಗಿಲ್ಲ. ಪ್ರತಿಮನೆಗೆ ಹೋಗಿ ಹೇಳಿದ್ದೇನೆ. ಧೈರ್ಯವಾಗಿರಲು ಹೇಳಿದ್ದೇನೆ ಎಂದರು.
ಅವರು ತಲ್ವಾರ್ ತರುವುದಾದರೆ ತರಲಿ ಆತ್ಮರಕ್ಷಣೆ ಮಾಡಿಕೊಳ್ಳುವುದು ಹಿಂದೂ ಸಮಾಜಕ್ಕೆ ಗೊತ್ತಿದೆ. ನಿನ್ನೆ ರಾಗಿಗುಡ್ಡದಲ್ಲಿ ಸೆಕ್ಷನ್ ಹಾಕಲಾಗಿದೆ. ಆದರೆ ಎಎ ವೃತ್ತದಲ್ಲಿ ವ್ಯತ್ಯಾಸವಾಗಿಲ್ಲ. ಶಾಂತಿನಗರದಲ್ಲಿ ಆಗಿರುವುದನ್ನ ತಂದು ನಗರಕ್ಕೆ ವಿಸ್ತರಿಸುವುದು ಯಾವ ನ್ಯಾಯ ಎಂದರು.
ಸೆಕ್ಷನ್ ನನ್ನ ಕರ್ಫ್ಯೂ ಆಗಿ ಅನೇಕ ಬಾರಿ ಬದಲಾಯಿಸಲಾಗಿದೆ. ಸೆಕ್ಷನ್ ಹಾಕಿ ರಕ್ಷಣೆ ನೀಡಿರುವುದಕ್ಕೆ ರಕ್ಷಣೆ ಇಲಾಖೆ ಯಾಕೆ? ಬಜಾರ್ ನಲ್ಲಿ ಯಾರೂ ಭಯ ಭೀತಿ ಪಟ್ಟುಕೊಂಡು ವ್ಯಾಪಾರ ಮಾಡೋದು ಬೇಡ ನಿಮ್ಮ ಜೊತೆ ನಾವಿದ್ದೇವೆ. ಸೆಕ್ಷನ್ ಹಾಕಿರುವುದಕ್ಕೆ ಅಂಗಡಿ ಬಂದ್ ಮಾಡಬಾರದು. ನಗರದಾದ್ಯಂತ ಸೆಕ್ಷನ್ ತೆಗೆಯಿರಿ ಎಂದರು.
ಇದನ್ನೂ ಓದಿ-https://suddilive.in/2023/10/02/ರಾಗಿಗುಡ್ಡದಲ್ಲಿ-ಕಲ್ಲು-ತೂರ/
