ಸ್ಥಳೀಯ ಸುದ್ದಿಗಳು

ಸಂಸದರಿಂದ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಮನವಿ ಏನು ಗೊತ್ತಾ?

ಸುದ್ದಿಲೈವ್/ಶಿವಮೊಗ್ಗ

ಇಂದು ಬೆಳಿಗ್ಗೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಶಿವಮೊಗ್ಗ ಸಂಸದರಾದ ಮಾನ್ಯ ಶ್ರೀ ಬಿವೈ ರಾಘವೇಂದ್ರ ರವರನ್ನು  ಭೇಟಿ ಮಾಡಿ ಶಿವಮೊಗ್ಗದಿಂದ ಬೆಂಗಳೂರು ಮತ್ತು ಇತರೆಡೆಗಳಿಗೆ ರೈಲು ಓಡಾಟವನ್ನ ಹೆಚ್ಚಿಸುವಂತೆ, ಡಬ್ಬಲ್ ಟ್ರ್ಯಾಕಿಂಗ್ ನಿರ್ಮಿಸುವಂತೆ ಹಾಗೂ ರೇಣುಗುಂಟ ಎಕ್ಸ ಪ್ರೆಸ್ ಸ್ಥಗಿತಗೊಳ್ಳದಂತೆ ಆಗ್ರಹಿಸಿ ಕೈಗೊಳ್ಳಲು ಮನವಿ ಸಲ್ಲಿಸಿದೆ.

ಶಿವಮೊಗ್ಗ ನಗರವು ಬೃಹತ್ ನಗರವಾಗಿ ಹೊರಹೊಮ್ಮುತ್ತಿದ್ದು ದೇಶ ವಿದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಶಿವಮೊಗ್ಗ ನಗರಕ್ಕೆ ವ್ಯಾಪಾರ ವಹಿವಾಟುಗಳಿಗೆ ಬರುತ್ತಿದ್ದು, ಇದರಿಂದ ರೈಲ್ವೆ ಇಲಾಖೆಗೆ ಬಹಳಷ್ಟು ಆದಾಯವಾಗುತ್ತಿದೆ. ಶಿವಮೊಗ್ಗ ನಗರಕ್ಕೆ ಇನ್ನೂ ಹೆಚ್ಚಿನ ರೈಲುಗಳ ಅವಶ್ಯಕತೆ ಇದೆ ಹಾಗೂ ಈಗಿರುವ ರೈಲುಗಳಿಗೆ ಹೆಚ್ಚಿನ ಬೋಗಿಗಳನ್ನು ಜೋಡಿಸುವ ಅವಶ್ಯಕತೆ ಇದೆ.

ಈಗ ಇರುವ ಶಿವಮೊಗ್ಗ ಟು ಬೆಂಗಳೂರು, ಶಿವಮೊಗ್ಗ ಟು ಮೈಸೂರ್ ಶಿವಮೊಗ್ಗ ಟು ಚಿಕ್ಕಮಂಗಳೂರು, ತಾಳಗುಪ್ಪ ಟು ಮೈಸೂರು ರೈಲುಗಳು ಸಂಚಾರ ಮಾಡುತ್ತಿದ್ದು, ಆದರೂ ನಾಗರಿಕರಿಗೆ ಸೀಟ್ ಲಭ್ಯವಾಗುತ್ತಿಲ್ಲ ಇನ್ನೂ ಹೆಚ್ಚಿನ ರೈಲು ಭೋಗಿಗಳ ಅವಶ್ಯಕತೆಗಳಿವೆ, ಹಾಗೆಯೇ ಇನ್ನೂ ಹಲವು ರಾಜ್ಯಗಳ ಸಂಪರ್ಕಿಸುವ ರೈಲುಗಳ ಅವಶ್ಯಕತೆ ಇದೆ. ಆದರೆ ಶಿವಮೊಗ್ಗ ಟು ತಿರುಪತಿಗೆ ಹೊರಡುವ ರೈಲು ಸ್ಥಗಿತಗೊಂಡು ಮೂರು ವಾರಗಳು ಕಳೆದಿವೆ. ಮುಂದಿನ ನವಂಬರ್ ಒಂದಕ್ಕೆ ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ಬಂದಿದೆ. ರೈಲು ಸ್ಥಗಿತಗೊಳ್ಳದಂತೆ ಕ್ರಮ ಜರುಗಿಸಲು ಮನವಿ ಮಾಡಿಕೊಳ್ಳಲಾಯಿತು.

ಬೆಳಿಗ್ಗೆ 8-30 ಯಿಂದ 9 ಗಂಟೆಗೆಬೆಂಗಳೂರಿಗೆ ಮತ್ತೊಂದು ರೈಲು. ಹಾಗೂ 10 ವರ್ಷದಿಂದ ನೆನೆಗುದಿಗೆ ಬಿದ್ದಿರುವ ಬೀರೂರು-ಶಿವಮೊಗ್ಗ ಡಬ್ಬಲ್ ಟ್ರ್ಯಾಕ್ ನಿರ್ಮಿಸಲು ಕ್ರಮ ಜರುಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಇದು ಶಿವಮೊಗ್ಗದ ನಗರದ ಜನತೆಗೆ ಬಹುದೊಡ್ಡ ಅನ್ಯಾಯವಾಗಲಿದೆ. ಕೇಂದ್ರ ರೈಲ್ವೆ ಸಚಿವರನ್ನು ಸಂಪರ್ಕಿಸಿ ಶೀಘ್ರವಾಗಿ ರೇಣುಗುಂಟ ಎಕ್ಸ್ ಪ್ರೆಸ್ ಖಾಯಂ ಆಗಿ ಚಲಿಸುವಂತೆ ಹಾಗೂ ಇತರೆ ಬೇಡಿಕೆಗಳನ್ನ ಪರಿಗಣಿಸುವಂತೆ  ಶಿವಮೊಗ್ಗದ ಸಂಸದರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಶಾಸಕರು ಶ್ರೀ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರು ರುದ್ರೇಗೌಡರು, ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷರು ರೈಲ್ವೆ ಸಮಿತಿಯ ಸದಸ್ಯರು, ನಾಗರಾಜ್ ಬೊರೆ, ಸಂಘಟನಾ ಕಾರ್ಯದರ್ಶಿಗಳಾದ ಡಾ‌. ಎ ಸತೀಶ್ ಕುಮಾರ್ ಶೆಟ್ಟಿ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯ ಸದಸ್ಯರುಗಳಾದ ಸೀತಾರಾಮ್, ಚನ್ನವೀರಪ್ಪ ಗಾಮನಗಟ್ಟಿ, ಪ್ರಕಾಶ್, ಕೇಶವಮೂರ್ತಿ, ರಂಗನಾಥ್, ದತ್ತಣ್ಣ, ಬಸವರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/1989

Related Articles

Leave a Reply

Your email address will not be published. Required fields are marked *

Back to top button