ರಾಷ್ಟ್ರೀಯ ಸುದ್ದಿಗಳು

ನಗರದಲ್ಲಿ ನಡೆದ 75 ನೇ ಗಣರಾಜ್ಯೋತ್ಸವ-ಅಧ್ವಾನವಾದ ಸಚಿವರ ಭಾಷಣ

ಸುದ್ದಿಲೈವ್/ಶಿವಮೊಗ್ಗ

75 ನೇ ಗಣರಾಜ್ಯೋತ್ಸವನ್ನ ನಗರದ ಡಿಎಆರ್ ನಲ್ಲಿ ಜಿಲ್ಲಾಡಳಿತದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಮದು ಬಂಗಾರಪ್ಪ ದೇಶದ ತ್ರಿವರ್ಣ ಧ್ಜಜ ಹಾರಿಸುವ ಮೂಲಕ ಧ್ವಜಾರೋಹಣ ಮಾಡಿದರು.

ನಂತರ ಸಚಿವರು ತುಕಡಿಗಳ ಪರಿವೀಕ್ಷಣೆ ಮಾಡಿದರು. ಧ್ವಜಾರೋಹಣದಲ್ಲಿ ಎರಡು ಪೊಲೀಸ್ ಬ್ಯಾಂಡ್ ಮತ್ತು 26 ತುಕಡಿಗಳು ಭಾಗಿಯಾಗಿದ್ದವು. ನಂತರ ಪೊಲೀಸ್ ಪೆರೇಡ್ ನಿಂದ ಧ್ವಜ ವಂದನ ಸ್ವೀಕರಿಸಲಾಯಿತು. ಪೆರೇಡ್ ಕಮ್ಯಾಂಡರ್ ಪ್ರಶಾಂತ್ ನಿಂದ ಪೆರೇಡ್ ನಡೆಯಿತು.

ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸ್ವತಂತ್ರ್ಯ ಭಾರತಕ್ಕೆ ಡಾ.ಬಿ.ಅರ್ ಅಂಬೇಡ್ಕರ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ರವರ ಸಮಿತಿ ರಚಿಸಿ ಸುಸಂಬದ್ಧ ಲಿಖಿತ ಸಂವಿಧಾನ ನೀಡಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಸಮಪಾಲು ಮತ್ತು ಸಮ ಬಾಳಿನ ಮೂಲಕ  ಅಧಿಕಾರಕ್ಕೆ ಬಂದಿದೆ. ಗ್ಯಾರೆಂಟಿಗಳಿಂದ ಜನರ ಮನಗೆದ್ದಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1-10 ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಒಂದು ಮೊಟ್ಟೆ ಬದಲು ಎರಡು ಮೊಟ್ಟೆ ನೀಡಲಾಗುತ್ತಿದೆ, 13682 ಪದವಿ ಶಿಕ್ಷಕರ ನೇಮಕಾತಿ ಆಗಿದೆ. ಕುಡಿಯುವ ನೀರು ಮತ್ತು ವಿದ್ಯುತ್ ಚ್ಛಕ್ತಿ ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಕ್ರಮ ಜರುಗಿಸಲಾಗುತ್ತಿದೆ. ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಾಗಿದೆ. ಬಳ್ಳಿಗಾವಿಯ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ಫ್ರೀಡಂ ಪಾರ್ಕ್ ಗೆ ಅಲ್ಲಮನ ಹೆಸರು ಇಡಲಾಗಿದೆ. ಆಯುಶ್ ವಿದ್ಯಾಲಯಕ್ಕೆ 20 ಕೋಟಿ ಹಣ ಬಿಡುಗಡೆ ಆಗಿದೆ. ಪ್ರವಾಸೋಧ್ಯಮ ಅಭಿವೃದ್ಧಿಗೆ ಉನ್ನತ ಮಟ್ಟದ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.‌

ಜನಸ್ಪಂಧನಾ ಮತ್ತು ಇತರೆ ಕಲ್ಯಾಣ ಕಾರ್ಯಗಳ ಮೂಲಕ ಜನರ ಸಮಸ್ಯೆಗೆ ಸ್ಪಂಧಿಸಲಾಗಿದೆ. ರಾಗಿಗುಡ್ಡದಲ್ಲಿ ನಡೆದ ಸೌಹಾರ್ಧ ಕ್ರಿಕೆಟ್ ನಡೆಸಿರುವ ಬಗ್ಗೆ ಪ್ರಶಂಸೆಯನ್ನ ಸಚಿವರು ಮಾಡಿರುವುದು ಗಮನ ಸೆಳೆದಿದೆ.

ತಪ್ಪಾಗಿ ಉಚ್ಚರಣೆ

ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರಾದರೂ ಉತ್ತಮ ಭಾಷಣ ಮಾಡುವ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಈ ಬಾರಿಯೂ ಹಳೆಯ ಉಸ್ತುವಾರಿ ಸಚಿವ ಕೆಸಿ ನಾರಾಯಣ ಗೌಡರ ಭಾಷಣವನ್ನ ನೆನಪಿಸಿದೆ. ನಾರಾಯಣ ಗೌಡರು ಹೊರಜಿಲ್ಲೆಯವರಾಗಿದ್ದರು. ಆದರೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯವರಾದರೂ ಉತ್ತಮ ಭಾಷಣ ನಿರೀಕ್ಷೆ ಹುಸಿಯಾಗಿದೆ.

ಬಾಬ ಸಾಹೇಬ್ ಅಂಬೇಡ್ಕರ್ ಬದಲು ಸಾಯಿ ಬಾಬಾ ಎಂದು ತಪ್ಪಾಗಿ ಉಚ್ಚರಿಸಿ ನಂತರ ಸರಿಯಾಗಿ ಉಚ್ಚರಿಸಲು ಸಚಿವರು ಒದ್ದಾಡಿರುವ ದೃಶ್ಯಗಳು ಲಭ್ಯವಾಗಿದೆ. ಬಾಬ ಸಾಹೇಬ್ ಅಂಬೇಡ್ಕರ್ ಬದಲು ತಪ್ಪಾಗಿ ಸಚಿವರು ಉಚ್ಛರಿಸಿದ್ದಾರೆ.

ಈ ಹಿಂದೆ ಬಿಜೆಪಿಯ ಕೆ.ಸಿ ನಾರಾಯಣ ಗೌಡ ಅವರು ಹೀಗೆ 108 ತಪ್ಪುಗಳನ್ನ ಉಚ್ಚರಿಸಿದ್ದರು. ನಮ್ಮ ಶಿಕ್ಷಣ ಸಚಿವರೂ ಹೀಗೆ ಭಾಷಣ ಮಾಡಿ ಅದ್ವಾನ ಮಾಡಿದ್ದಾರೆ. ಈ ಹಿಂದೆ ಸಚಿವರ ಭಾಷಣವನ್ನ ವಾರ್ತ ಇಲಾಖೆ ಸಿದ್ದಪಡಿಸಿಕೊಡುತ್ತಿತ್ತು. ಆದರೆ ಸಚಿವರೇ ಈ ಬಾರಿ ಭಾಷಣ ಮಾಡಿದ್ದಾರೆ. ಸಚಿವ ಭಾಷಣದಲ್ಲಿ ಅನೇಕ ನಿರೀಕ್ಷೆಗಳಿದ್ದವು ಆದರೆ ಭಾಷದಲ್ಲಿ ಅನೇಕ ತಪ್ಪು ಉಚ್ಚಾರಿಸಿ ನಿರಾಸೆ ಮೂಡಿಸಿದರು.

ಇದನ್ನೂ ಓದಿ-https://suddilive.in/archives/7728

Related Articles

Leave a Reply

Your email address will not be published. Required fields are marked *

Back to top button