ಸ್ಥಳೀಯ ಸುದ್ದಿಗಳು

ಪುತ್ರನಿಗೆ ಟಿಕೇಟ್ ಕೈತಪ್ಪಿದ ಹಿನ್ನಲೆ-ಬಿಎಸ್ ವೈ ವಿರುದ್ಧ ಅಸಮಾಧಾನ ಹೊರಹಾಕಿದ ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಯಡಿಯೂರಪ್ಪ ಅವರು‌ ಹಾವೇರಿ ಲೋಕಸಭಾ ಟಿಕೇಟ್ ಬಗ್ಗೆ ನಾನು ನನ್ನ ಮಗ ಮನೆಗೆ ಹೋದಾಗ ಟಿಕೇಟ್ ಕೊಡಿಸುತ್ತೇನೆ ಗೆಲಗಲಿಸುತ್ತೆನೆ ಅಂದಿದ್ದರು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಪುನರ್ ಉಚ್ಚರಿಸಿದ್ದಾರೆ.

ಯಡಿಯೂರಪ್ಪ ಮಾತಿನಲ್ಲಿ ನಡೆದುಕೊಳ್ಳಲಿಲ್ಲ. ಅನ್ಯಾಯ ಮಾಡಿದ್ರು, ಶಿವಮೊಗ್ಗ ಲೋಕ ಸಭಾ ಕ್ಷೇತ್ರದಿಂದ ನನಗೆ ನಿಲ್ಲಬೇಕು ಅಂತಾ ಒತ್ತಾಯ ಮಾಡ್ತಿದ್ಸಾರೆ ಎಂದು ಮಾಧ್ಯಮಗಳ ಜೊತೆ ಮತನಾಡಿದರು.

ನಾವೆಲ್ಲಾ ಮೋದಿ ಅಭಿಮಾನಿಗಳು, ನಾಡಿದ್ದು ಸಭೆ ಮಾಡ್ತಿದ್ದೇನೆ. ಶುಕ್ರವಾರ ಸಂಜೆ ಐದು ಗಂಟೆಗೆ ಸಭೆ ಮಾಡ್ತಿದ್ದೇನೆ. ಎಲ್ಲಾ ಸಮುದಾಯವದರು ಸಭೆಯಲ್ಲಿ ಭಾಗವಹಿಸುತ್ತಾರೆ ಎಂದರು.

ಯಡಿಯೂರಪ್ಪ ಶೋಭಾ ಕರಂದ್ಲಾಜೆ ಗೆ ಹಠ ಹಿಡಿದು ಟಿಕೇಟ್ ಕೊಡ್ಸಿದ್ದಾರೆ. ನನ್ನ ಮಗನಿಗೆ ಏಕೆ ಕೊಡಿಸಲಿಲ್ಲ. ಶೋಭಾ ಅವರು ದೆಹಲಿಗೆ ಹೋಗಿ ಟಿಕೇಟ್ ಕೇಳಲಿಲ್ಲ. ಯಡಿಯೂರಪ್ಪ ಅವರ ಪರವಾಗಿ ಕೊಡ್ಸಿದ್ದಾರೆ. ರಾಜ್ಯದ ಹಲವರಿಗೆ ಅನ್ಯಾಯ ಆಗಿದೆ. ಕಟೀಲ್, ಪ್ರತಾಪ್ ಸಿಂಹ, ಸಿ.ಟಿ.ರವಿ, ಸದಾನಂದಗೌಡ ಅವರಿಗೆ ಅನ್ಯಾಯವಾಗಿದೆ ಎಂದು ಅನ್ಯಾವನ್ನ ತೋಡಿಕೊಂಡಿದ್ದಾರೆ.

ನನ್ನ ಅಭಿಮಾನಿಗಳು ಏನು ಹೇಳ್ತಾರೋ ಹಾಗೆ ಕೇಳುತ್ತೇನೆ.ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ.ವೈಯಕ್ತಿಕ ಹಿತಾಸಕ್ತಿಯಿಂದ ತಾಯಿಯ ಕುತ್ತಿಗೆ ಹಿಸುಕುತ್ತಿದ್ದಾರೆ.ತಾಯಿಯ ಕುತ್ತಿಗೆ ಹಿಸುಕಬೇಕಾದರೆ ಪಕ್ಷ ಉಳಿಸಬೇಕಿದೆ.

ಬೊಮ್ಮಯಿ ನನಗೆ ಆರೋಗ್ಯ ಸರಿ ಇಲ್ಲ ನಾನು ಸ್ಪರ್ಧೆ ಮಾಡಲ್ಲ.ಹಾವೇರಿಯಿಂದ ಕಾಂತೇಶ್ ನಿಲ್ಸಿ ಅಂದಿದ್ರು. ಆದರೂ ಬೊಮ್ಮಾಯಿ ಅವರನ್ನು ಒತ್ತಾಯ ಮಾಡಿ ನಿಲ್ಲಿಸುತ್ತಿದ್ದಾರೆ. ಯತ್ನಾಳ್ ಅವರನ್ನು ಪಕ್ಕಕ್ಕೆ ಸರಿಸುವ ಕೆಲಸ ನಡೆಯುತ್ತಿದೆ ಎಂದು ಬಿಎಸ್ ವೈ ವಿರುದ್ಧ ಮಾತನಾಡಿದ್ದಾರೆ.

ನಾನು ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ಯಡಿಯೂರಪ್ಪ ಅವರು ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡ್ತಿದ್ದಾರೆ. ಅವರೆಲ್ಲಾ ನನಗೆ ಪೋನ್ ಮಾಡ್ತಿದ್ದಾರೆ ನಾನು ಅವರ ಧ್ವನಿ ಆಗಬೇಕಿದೆ. ರಾಧ ಮೋಹನ್ ಅವರು ಪೋನ್ ಮಾಡಿದ್ರು. ಕಾಂತೇಶ್ ಗೆ ಪದವೀಧರ ಕ್ಷೇತ್ರದ ಟಿಕೇಟ್ ಕೊಡಿಸುತ್ತೇವೆ ಅಂದ್ರು

ನಾನು ಇನ್ನು ಆ‌ ಬಗ್ಗೆ ಏನು ತೀರ್ಮಾನ ‌ಮಾಡಿಲ್ಲ. ಯಡಿಯೂರಪ್ಪ ಅವರ ತಪ್ಪನ್ನು ಅವರಿಗೆ ನಾನು‌ ನೇರವಾಗಿ ಹೇಳುತ್ತಿದ್ದೆ. ಯಡಿಯೂರಪ್ಪ ಕೆಜೆಪಿ‌ ಕಟ್ಟಿದ್ದಾಗ ಹೋಗಲಿಲ್ಲಈಗಾಗಿ ಯಡಿಯೂರಪ್ಪ ಅವರಿಗೆ ನನ್ನ ಬಗ್ಗೆ ಅಸಮಾಧಾನ ಇರಬಹುದು ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾನು ಯಾವಾಗಲೂ ‌ಮೋದಿ ಪರವಾಗಿಯೇ ಇರುತ್ತೇನೆ. ಮೋದಿ ಪ್ರಧಾನಮಂತ್ರಿ ಆಗಬೇಕು ಎಂಬುದು ನನ್ನ ಉದ್ದೇಶ. ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಿದರೂ ನನ್ನ ಬೆಂಬಲ ಮೋದಿಗೆ ಇರುತ್ತದೆ. ನನ್ನ ಮಗ ಕಳೆದೊಂದು ವರ್ಷದಿಂದ ಹಾವೇರಿಯಲ್ಲಿ ಓಡಾಟ ಮಾಡ್ತಿದ್ದ. ಟಿಕೇಟ್ ಕೊಡ್ತೀನಿ ಅಂತೇಳಿ ಮೋಸ ಮಾಡಿದ್ರು ಎಂದು ವಿಷ ಕಾರಿದ್ದಾರೆ.

ಹಾವೇರಿಯಿಂದಲೂ ಕಾಂತೇಶ್ ನನ್ನ ಪಕ್ಷೇತರವಾಗಿ ಸ್ಪರ್ಧೆ ಮಾಡಲಿ ಅಂತಿದ್ದಾರೆ. ಒಂದು ಕುಟುಂಬದ ‌ಕೈಯಲ್ಲಿ ಪಕ್ಷ ನಿಂತಿದೆ ಅಂತಿದ್ದಾರೆ. ಈಗಾಗಿ ಬೆಂಬಲಿಗರ ಜೊತೆ ಸಭೆ ಮಾಡ್ತೇನೆ. ಇಂದು ರಾತ್ರಿ ಬೆಂಗಳೂರಿಗೆ ಹೋಗ್ತಿದ್ದೇನೆ. ಬೆಂಗಳೂರಿನಲ್ಲಿ ನನ್ನ ವೈಯಕ್ತಿಕ ಕೆಲಸ ಇದೆಅಲ್ಲದೇ ಕೆಲವು ಹಿರಿಯರ ಭೇಟಿ ಮಾಡೋದು ಇದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ-https://suddilive.in/archives/10668

Related Articles

Leave a Reply

Your email address will not be published. Required fields are marked *

Back to top button