ಸ್ಥಳೀಯ ಸುದ್ದಿಗಳು

ಅಗ್ನಿಶಾಮಕದಳದ ಅಧಿಕಾರಿ ಲೋಕ ಬಲೆಗೆ

ಸುದ್ದಿಲೈವ್/ಶಿವಮೊಗ್ಗ

ವಾಹನದ ಇನ್ಸುರೆನ್ಸ್ ಕ್ಲೈಮ್ ಮಾಡಲು ಬೇಕಾದ ಅಗ್ನಿಶಾಮಕ ದಳದ ವರದಿಗೆ ಲಂಚದ ಬೇಡಿಕೆ ಇಟ್ಟ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

2023 ಸೆಪ್ಟಂಬರ್ ನಲ್ಲಿ ಮಂಡಗದ್ದೆಯ 15 ನೇ ಮೈಲಿಗಲ್ಲಿನ ಬಳಿ ಕೆಎ 32 ಡಿ 8547 ಕ್ರಮ ಸಂಖ್ಯೆಯ ಫೋರ್ಡ್ ಕಂಪನಿ ಕಾರು ಬೆಂಕಿಗೆ ಆಹುತಿಯಾಗಿತ್ತು. ಈ ಕಾರು ಗೋಪಿಶೆಟಟಿಕೊಪ್ಪದ ನಿವಾಸಿ ಇರ್ಫಾನ್ ಎಂಬುವರಿಗೆ ಸೇರಿತ್ತು.

ಇರ್ಫಾನ್ ಸ್ನೇಹಿತ ಗುರುಮೂರ್ತಿ ಎಂಬುವರಿಗೆ ಕೆಲಸದ ನಿಮಿತ್ತ ನೀಡಿದ್ದರು. ಗುರುಮೂರ್ತಿ ಮಂಡಗದ್ದೆಯಿಂದ ಶಿವಮೊಗ್ಗಕ್ಕೆ ವಾಪಾಸಾಗುತ್ತಿದ್ದ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟುಕರಕಲಾಗಿತ್ತು.

ಈ ಬಗ್ಗೆ ಮಾಳೂರು ಪೊಲೀಸ್ ಠಾಣೆಯ್ಲಿ ದೂರು ದಾಖಲಾಗಿತ್ತು. ಇನ್ಸುರೆನ್ಸು ಕ್ಲೈಮ್ ಮಾಡಿಕೊಳ್ಳಲು ಇರ್ಫಾನ್ ಮುಂದಾದಾಗ ಅಗ್ನಿಶಾಮಕ ದಳದ ವರದಿಯನ್ನ ಯುನೈಟೆಡ್ ಇನ್ಸುರೆನ್ಸ್ ಸಂಸ್ಥೆ ಕೇಳಿತ್ತು.

ಅದಕ್ಕಾಗಿ ಇರ್ಫಾನ್ ಶಿವಮೊಗ್ಗ ಅ್ನಿಶಾಮಕದಳಕ್ಕೆ ಬಂದು ವರದಿಕೇಳಿದಾಗ ಇಲ್ಲಿನ ಅಧಿಕಾರಿ ಮಹಾಲಿಂಗಪ್ಪ 5000 ರೂ. ಹಣದ ಬೇಡಿಕೆ ಇಟ್ಟಿದ್ದಾರೆ.‌ ಬೇಸತ್ತ ಇರ್ಫಾನ್ ಲೋಕಾಯುಕ್ತಕ್ಕೆ ದೂರು‌ನೀಡಿದ್ದರು.

ಇಂದು ಇರ್ಫಾನ್ 5 ಸಾವಿರ ರೂ ಹಣ ಲಂಚ ನೀಡುವಾಗ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಿದೆ.‌ ದಾಳಿ ನಡೆಸಿದ ಅಗ್ನಿಶಾಮಕದಳ ಮಹಾಲಿಂಗಪ್ಪರನ್ನ ವಶಕ್ಕೆ ಪಡೆದಿದೆ.

ಇದನ್ನೂ ಓದಿ-https://suddilive.in/archives/10594

Related Articles

Leave a Reply

Your email address will not be published. Required fields are marked *

Back to top button