ಕುಳವಳ್ಳಿ ಬಳಿ ನಡೆದ ರಸ್ತೆ ಅಪಘಾತ-ಸ್ಥಳದಲ್ಲಿಯೇ ದ್ವಿಚಕ್ರವಾಹನ ಸವಾರ ಸಾವು-ಅಪಘಾತವಲ್ಲ ಇದೊಂದು ಕೊಲೆ ಎಂದ ಕುಟಂಬ

ಸುದ್ದಿಲೈವ್/ಸೊರಬ

ಸೊರಬ ತಾಲೂಕಿನ ಕುಂಭತ್ತಿ ಮತ್ತು ಕುಳವಳ್ಳಿ ಗ್ರಾಮದಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಉಂಟಾಗಿದ್ದು ಟಿವಿಎಸ್ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ.
ಮೇಲ್ನೋಟಕ್ಕೆ ಇದು ರಸ್ತೆ ಅಪಘಾತ ಎಂದು ಕಂಡು ಬಂದರು ಇದೊಂದು ವ್ಯವಸ್ಥಿತವಾಗಿ ನಡೆದ ಕೊಲೆ ಎಂದು ಮೃತನ ಕುಟುಂಬ ಆರೋಪಿಸಿದೆ. ಕುಟುಂಬದಲ್ಲಿದ್ದ ಜಮೀನು ವಿವಾದದ ಹಿನ್ನಲೆಯಲ್ಲಿ ರಸ್ತೆ ಅಪಘಾತ ನಡೆದಿದ್ದು ಇದೊಂದು ಕೊಲೆ ಎಂದು ಕುಟುಂಬ ಆರೋಪಿಸಿದೆ.
ಮಂಜಪ್ಪ (53) ಎಂಬ ವ್ಯಕ್ತಿಯು ಟಿವಿಎಸ್ ವಾಹನದಲ್ಲಿ ಬರುವಾಗ ನಂಬರ್ ಪ್ಲೇಟ್ ಇಲ್ಲದ ಹಳೆಯ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮಂಜಪ್ಪ ಸಾವನ್ನಪ್ಪಿದ್ದಾರೆ. ರಸ್ತೆಯ ಬದಿಯ ತೋಡಿಗೆ ಕಾರು ಇಳಿದಿದೆ. ಕಾರಿನಲ್ಲಿದ್ದವರು ಎಲ್ಲರೂ ಪರಾರಿಯಾಗಿದ್ದಾರೆ.
ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ. ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಇದನ್ನೂ ಓದಿ-https://suddilive.in/archives/1982
