ಸ್ಥಳೀಯ ಸುದ್ದಿಗಳು

ಅಡಿಕೆ ಕಳ್ಳರ ಹೆಡೆಮುರಿಕಟ್ಟಿದ ಶಿರಾಳಕೊಪ್ಪ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ಕ್ಬಿಂಟಾಲ್ ಗಟ್ಟಲೆ ಅಡಿಕೆಯನ್ನ ಕಳುವು ಆಗಿದ್ದ ಪ್ರಕರಣವನ್ನ ಶಿರಾಳಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಾಲು ಸಮೇತ ಆರೋಪಿಯನ್ನ‌ ಬಂಧಿಸಲಾಗಿದೆ.

ದಿನಾಂಕಃ 17-11-2023 ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳಿಗಾವಿ ಗ್ರಾಮದ ವಾಸಿ ರಮೇಶ್ ರವರ  ವಾಸದ ಮನೆಯ ಮುಂದಿನ ಕಟ್ಟೆಯ ಮೇಲೆ ಇರಿಸಿದ್ದ ಅಂದಾಜು ಮೌಲ್ಯ 1,45,000/- ರೂಗಳ 3 ಕ್ವಿಂಟಾಲ್ 50 ಕೆ ಜಿ ತೂಕದ ಒಣ ಅಡಿಕೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು.‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಮತ್ತು ಮಾಲಿನ ಪತ್ತೆಗೆ ತಂಡವನ್ನು ರಚಿಸಲಾಗಿದೆ.

ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಮತ್ತು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಶಿವಾನಂದ ಮದರಖಂಡಿ ಮತ್ತು ಸಿಪಿಐ ರುದ್ರೇಶ್, ರವರ ಮೇಲ್ವಿಚಾರಣೆಯಲ್ಲಿ, ಶಿರಾಳಕೊಪ್ಪ ಠಾಣೆಯ ಪಿಎಸ್ಐ ಮಂಜುನಾಥ್ ಎಸ್ ಕುರಿರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್.ಸಿ ಸಂತೋಷ್, ಪಿಸಿ ಸಲ್ಮಾನ್ ಖಾನ್, ಕಾರ್ತಿಕ್, ಅಶೋಕ್ ನಾಯ್ಕ್, ನಾಗರಾಜ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂಧಿಗಳಾದ ಹೆಚ್.ಸಿ ಗುರುರಾಜ್, ಇಂದ್ರೇಶ್, ವಿಜಯ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಸದರಿ ತನಿಖಾ ತಂಡವು ದಿನಾಂಕಃ 06-12-2023 ರಂದು ಪ್ರಕರಣದ ಆರೋಪಿತರಾದ 1) ಭಟ್ಕಳದ  ಅಬ್ರಾರ್ ಶೇಖ್ (21) 2) ಇಮ್ರಾನ್, (20)  ಮತ್ತು 3) ಅಬ್ದುಲ್ ವಾಹೀದ್ ತಾರ್ (22), ರವರನ್ನು ದಸ್ತಗಿರಿ ಮಾಡಲಾಗಿದೆ, ಆರೋಪಿತರಿಂದ ಶಿರಾಳಕೊಪ್ಪ ಪೊಲೀಸ್ ಠಾಣೆ ಮತ್ತು ಆನಂದಪುರ ಪೊಲೀಸ್ ಠಾಣೆಯ 02 ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 2,41,586/- ರೂಗಳ 5 ಕ್ವಿಂಟಾಲ್ 14 ಕೆಜಿ ಒಣ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 7,00,000/- ರೂಗಳ ಬುಲೇರೋ ಕಾರ್ ಸೇರಿ ಒಟ್ಟು 9,41,586 /- ರೂ ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/4390

Related Articles

Leave a Reply

Your email address will not be published. Required fields are marked *

Back to top button