ಕ್ರೈಂ ನ್ಯೂಸ್

ಕಾಡಾನೆಗಳ ಹಾವಳಿಗೆ ಗ್ರಾಮಸ್ಥರು ತತ್ತರ!

ಸುದ್ದಿಲೈವ್/ಶಿವಮೊಗ್ಗ

ಇತ್ತೀಚೆಗೆ ಹಲವು ಗ್ರಾಮಗಳಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗುತ್ತಿದ್ದು, ಜನ ಅರಣ್ಯ ಇಲಾಖೆ ಮೇಲೆ ರೋಸಿ ಹೋಗಿದ್ದಾರೆ. ಕಾಡಾನೆಗಳು ಪ್ರಾಣಬಲಿ ಪಡೆಯುವವರೆಗೆ ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತಿಚೆಗಷ್ಟೆ ಶಿವಮೊಗ್ಗ ತಾಲ್ಲೂಕಿನ ಚೋರಡಿ ಸಮೀಪದ ಹೊರಬಯಲು ಗ್ರಾಮಕ್ಕೆ ಕಾಡಾನೆಗಳು ದಾಳಿ ಇಟ್ಟು ಬೆಳೆ ನಾಶ ಮಾಡಿದ್ದವು. ಅಕ್ಟೋಬರ್ 22ರಂದು ಅಗಸವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವಪುರ ಗ್ರಾಮದಲ್ಲಿ ಕಾಡಾನೆಯೊಂದು ದಾಳಿ ನಡೆಸಿ ಬೆಳೆಗಳನ್ನು ಹಾನಿ ಮಾಡಿದೆ.

ಕಳೆದ ಒಂದು ವರ್ಷದಿಂದ ಪ್ರತಿ 15 ದಿನಕ್ಕೊಮ್ಮೆ ಕಾಡಾನೆ ದಾಳಿ ಮಾಡುತ್ತಿದ್ದು, ಇಲ್ಲಿನ ಕೆ.ಜಿ.ರಾಜು, ಓಬಣ್ಣ ನಾಯಕ್, ನಾಗೇಶ್ ನಾಯಕ್ ಮತ್ತು ಪ್ರಕಾಶ್ ಎಂಬುವವರ ತೋಟಕ್ಕೆ ನುಗ್ಗಿ ಕಾಡಾನೆ ದಾಂದಲೆ ನಡೆಸಿದೆ. ತೆಂಗು ಮತ್ತು ಅಡಿಕೆ ಗಿಡಗಳನ್ನು ನಾಶ ಮಾಡಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಟ್ರಂಚ್ ಹೊಡೆದು ಹೋಗಿದ್ದಾರೆ.

ಮಧ್ಯದಲ್ಲಿ ಎರಡು ಬಂಡೆ ಸಿಕ್ಕಿದ್ದರಿಂದ ಅಲ್ಲಿ ಹಾಗೆಯೇ ಬಿಟ್ಟಿದ್ದಾರೆ. ಅಲ್ಲಿಂದಲೇ ಆನೆಗಳು ನುಗ್ಗುತ್ತಿದ್ದು, ತೋಟದಲ್ಲೇ ಮನೆ ಮಾಡಿಕೊಂಡವರಿಗೆ ಆತಂಕಕ್ಕೆ ಕಾರಣವಾಗಿದೆ. ವೃದ್ಧರು ಮತ್ತು ಮಕ್ಕಳು ಇರುವೆಡೆ ಪ್ರಾಣ ಕೈಯಲ್ಲಿ ಹಿಡಿದುಕೊಂಡೆ ಆನೆಯ ಭಯದಲ್ಲೇ ದಿನ ತಳ್ಳುದಿದ್ದಾರೆ. ಬೆಳೆ ನಾಶವಷ್ಟೇ ಅಲ್ಲ ಪ್ರಾಣ ಹಾನಿ ಆದರೆ ಯಾರು ಜವಬ್ದಾರಿ ಹೊರಬೇಕು.

ಇತ್ತೀಚೆಗೆಯಂತು ಶೆಟ್ಟಿಹಳ್ಳಿ ಅಭಯರಣ್ಯ ವ್ಯಾಪತಿಯಲ್ಲಿ ಕಾಡಾನೆಗಳ ಹಾವಳಿ ಪದೇ ಪದೇ ಕೇಳಿಬರುತ್ತಿದ್ದು, ಅರಣ್ಯ ಇಲಾಖೆ ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಬೇಕು ಶಾಶ್ವತ ಪರಿಹಾರ ನೀಡಬೇಕು.ಸರ್ಕಾರ ಬೆಳೆ ನಷ್ಟವನ್ನು ಭರಿಸಿ ಕೊಡಬೇಕು ಎಂದು ಸಂತ್ರಸ್ಥರ ಆಗ್ರಹಿಸಿದ್ದಾರೆ.

ಕಾಡಾನೆ ದಾಳಿ ಇದೇ ರೀತಿ ಮುಂದುವರಿದರೆ ಅನಿವಾರ್ಯವಾಗಿ ಅರಣ್ಯ ಇಲಾಖೆ ಕಚೇರಿ ಮುಂದೆ ಸ್ಥಳಿಯ ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕೂಡ ಸ್ಥಳಿಯರು ಹೇಳಿಕೆ ನೀಡಿದ್ದಾರೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.

ಇದನ್ನೂ ಓದಿ-https://suddilive.in/archives/1820

Related Articles

Leave a Reply

Your email address will not be published. Required fields are marked *

Back to top button