ಕ್ರೈಂ ನ್ಯೂಸ್
ನಡುರಸ್ತೆಯಲ್ಲಿ ಖಾಸಗಿ ಸಿಟಿ ಬಸ್ ನ ಟೈರ್ ಬ್ಲಾಸ್ಟ್-ಬಾಲಕಿಗೆ ಗಾಯ
ಸುದ್ದಿಲೈವ್/ಶಿವಮೊಗ್ಗ
ನೆಹರೂ ರಸ್ತೆಯಲ್ಲಿ ಸಿಟಿ ಬಸ್ ಟೈರ್ ವೊಂದು ಬ್ಲಾಸ್ಟ್ ಆಗಿದ್ದು, ಬಸ್ ನಲ್ಲಿ ರಂದ್ರ ಉಂಟಾಗಿದ್ದು ರಂದ್ರದಿಂದ ಬಾಲಕಿ ಒಬ್ಬಳು ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.
ಖಾಸಗಿ ಸಿಟಿ ಬಸ್ ಬೊಮ್ಮನ್ ಕಟ್ಟೆಯಿಂದ ಗೋಪಾಳಕ್ಕೆ ತೆರಳುವ ವೇಳೆ ನೆಹರೂ ರಸ್ತೆಯಲ್ಲಿ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಬಸ್ ಒಳಗೆ ರಂದ್ರವಾಗಿ ಬಾಲಕಿಯೊಬ್ಬಳು ಕೆಳಗೆ ಬಿದ್ದಿದ್ದಾಳೆ. ಗಾಯಗೊಂಡ ಬಾಲಕಿಯನ್ನ ಮೆಗ್ಗಾನ್ ಗೆ ಸಾಗಿಸಲಾಗಿದೆ.
ಟೈರ್ ಬ್ಲಾಸ್ಟ್ ನಿಂದ ಜನ ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗಿದ್ದಾರೆ. ಬಸ್ ಡಿವೈಡರ್ ಮೇಲೆ ಹತ್ತಿ ನಿಂತಿದೆ. ಈ ವೇಳೆ ಜ್ಯಾಮ್ ಆಗಿದ್ದು ಪಶ್ಚಿಮ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ-https://suddilive.in/archives/11814