ಕ್ರೈಂ ನ್ಯೂಸ್

ರಾಬರಿ @ ರೈಲ್ವೆ ಓವರ್ ಬ್ರಿಡ್ಜ್

ಸುದ್ದಿಲೈವ್/ಶಿವಮೊಗ್ಗ

ನಗರದ ಶೇಷಾದ್ರಿಪುರಂ  ರೈಲ್ವೆ ಓವರ್ ಬ್ರಿಡ್ಜ್ ಕೆಳಗೆ ಬೈಕ್ ನಲ್ಲಿ ಬಂದ ಮೂವರಿಂದ ರಾಬರಿ ನಡೆದಿದೆ. ಮೂರು ಯುವಕರಿಂದ ಮೊಬೈಲ್,  ನಗದು ಹಣ ಹಾಗೂ ದಾಖಲಾತಿಗಳನ್ನ ಕಿತ್ತುಕೊಂಡು ಹೋಗಿದ್ದಾರೆ.

ಜಯನಗರ ರಾಮಮಂದಿರ ನಿವಾಸಿ ವಿನಿತ್ ರಾಮ್ಜಿಯಾ ಎಂಬುವರ ದೊಡ್ಡಪ್ಪನ ಮಗನ ರಿಸೆಪ್ಷನ್ ಕಾರ್ಯಕ್ರಮವನ್ನ ತೀರ್ಥಹಳ್ಳಿಯ ಮಂಡಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ . ಬೆಂಗಳೂರಿನಿಂದ ಸ್ನೇಹಿತರು ಬಂದಿದ್ದರು ಕಾರ್ಯಕ್ರಮ ಮುಗಿಸಿ ಫೆ.28 ರಂದು ರಾತ್ರಿ ರೈಲಿಗೆ ಹೋಗಲು  ಸ್ನೇಹಿತರನ್ನ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬಿಡಲು ವಿನೀತ್ ಬಂದಿದ್ದರು.

ರೈಲು ಬರಲು ಸಮಯವಿದ್ದಿದ್ದರಿಂದ ಗೂಡ್ ಶೆಡ್ ಬಳಿ ವಿನೀತ್ ಸ್ನೇಹಿತರಾದ ಮಾರುತಿ ಮತ್ತು‌ ರಮೆಶ್ ಎಂಬುವರ ಜೊತೆ ರೈಲ್ವೆ ಓವರ್ ಬ್ರಿಡ್ಜ್ ಕೆಳಗೆ ವಾಕ್ ಮಾಡುತ್ತಿದ್ದಾಗ ಶೇಷಾದ್ರಿಪುರಂನಿಂದ ಒಂದೇ ಬೈಕ್ ನಲ್ಲಿ ಬಂದ ಮೂವರು ಅಪರಿಚಿತ ಯುವಕರು ಹರಿತಾದ ಆಯುಧ ತೋರಿಸಿ ರಾಬರಿ ಮಾಡದ್ದಾರೆ.

ಮೂರು ಮೊಬೈಲು, ಐದು ಸಾವಿರಕ್ಕೂ ಹೆಚ್ಚು ಹಣ, ಮೂವರ ಬಳಿಯಿದ್ದ ಪರ್ಸ್, ಪರ್ಸ್ ನಲ್ಲಿದ್ದ ವಾಹನ ಪರವಾನಗಿ, ಎಟಿಎಂ, ಮೊದಲಾದ ದಾಖಲಾತಿಗಳನ್ನ ದೋಚಿದ್ದಾರೆ. ಮಾರುತಿ ಎಂಬುವರು ತಪ್ಪಿಸಿಕೊಳ್ಳಲು ಯತ್ನಿಸಿದರೂ ದೋಚಲು ಬಂದ ಯುವಕನೊಬ್ಬನು ಹಿಂಬಾಲಿಸಿಕೊಂಡು ಹೋಗಿ ರಾಬರಿ ಮಾಡಿದ್ದಾನೆ.

ವಿನೀತ್ ಈ ಬಗ್ಗೆ ಕೊಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9991

Related Articles

Leave a Reply

Your email address will not be published. Required fields are marked *

Back to top button