ರಾಜಕೀಯ ಸುದ್ದಿಗಳು

ಶುದ್ಧೀಕರಣದ ಮಾತಿಗೆ ಶಾಸಕರು ಟ್ಯಾಂಕ್ ನಲ್ಲಿ ನೀರು ಇರಬೇಕಲ್ಲಾ ಎಂದಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಪಕ್ಷ ಬಿಎಸ್ ವೈ ಕುಟುಂಬದ ಹಿಡಿತದಲ್ಲಿದೆ ಎಂದು ಹೇಳಿ ಬಂಡಾಯವಾಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪ  ಪಕ್ಷದಲ್ಲಿ ಶುದ್ಧೀಕರಣದ ಮಾತುಗಳನ್ನ ಆಡುತ್ತಾ ಬಂದಿದ್ದಾರೆ.

ಪಕ್ಷವನ್ನ ಬಿಎಸ್ ವೈ ಕುಟುಂಬದಿಂದ ದೂರವಿಡಲು ಶುದ್ಧೀಕರಣದ ಅವಶ್ಯಕತೆ ಇದೆ. ಬಿಎಸ್ ವೈ ಕೆಜೆಪಿ ಕಟ್ಟುವಾಗ ಯಾರು ಯಾರು ಸಹಾಯ ಮಾಡಿಲ್ಲವೋ ಅಂತಹ ಹಿಂದೂ ಹುಲಿಗಳನ್ನ ತುಳಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಹಾಗಾಗಿ ಪಕ್ಷದಲ್ಲಿ ಬಿಎಸ್ ವೈ ಒಬ್ಬರನ್ನ ಬಿಟ್ಟು ಉಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ರಾಜೀನಾಮೆ ನೀಡಲಿ

ಸಂಸದ ರಾಘವೇಂದ್ರ ಸ್ಪರ್ಧೆಯಿಂದ ಹಿಂದೆ ಸರಿಯಬೇಕು. ಹಿಂದೂ ಹುಲಿಗಳಾದ ಪ್ರತಾಪ್ ಸಿಂಹ, ಸದಾನಂದ ಗೌಡ, ಸಿಟಿರವಿಗೆ ಟಿಕೇಟ್ ತಪ್ಪಿಸಲಾಗಿದೆ. ಸಚಿವೆ ಶೋಭಾ ಕರದ್ಲಾಂಜೆಗೆ ಬಿಎಸ್ ವೈ ಪಟ್ಟು ಹಿಡಿದು ಟಿಕೇಟ್ ಕೊಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಂಸದ ರಾಘವೇಂದ್ರರನ್ನ ಸೋಲಿಸಿ ದೆಹಲಿಯಲ್ಲಿ ಮೋದಿಯ ಕೈಹಿಡಿದು ಬಿಜೆಪಿಯ ಶುದ್ಧೀಕರಣ ಮಾಡುವುದಾಗಿ ಈಶ್ವರಪ್ಪ ಗುಡುಗಿದ್ದಾರೆ.

ಆದರೆ ಅವರ ಗರಡಿಯಲ್ಲೇ ಬೆಳೆದು ಬಂದ ಶಾಸಕ ಚೆನ್ನಬಸಪ್ಪ ಸಹ ಹೌದು ಈಶ್ವರಪ್ಪನವರ ಗರಡಿಯಲ್ಲೇ ಬೆಳೆದವನು ನಾನು ಎಂದು ಇಂದು ಜೆಡಿಎಸ್ ಮತ್ತು ಬಿಜೆಪಿಯ ಜಂಟಿ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆದರೆ ಈಶ್ವರಪ್ಪನವರು ಪಕ್ಷದ ಶುದ್ಧೀಕರಣದ ಬಗ್ಗೆ ಮಾತನಾಡಿದ್ದಾರೆ. ಈ ಶುದ್ಧೀಕರಣ ಪಕ್ಷದಲ್ಲಿ ಅವಶಕತೆ ಇದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕರು ಟ್ಯಾಂಕ್ ನಲ್ಲಿ ನೀರಿದ್ದರೆ ತಾನೇ ಶುದ್ಧೀಕರಣವಾಗೋದು ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಯಾವ ಟ್ಯಾಂಕು, ಯಾವ ನೀರು ಖಾಲಿಯಾಗಿದೆ ಎಂಬುದೇ ಕುತೂಹಲಕಾರಿಯಾಗಿದೆ. ಒಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲ್ಲಲಿದ್ದಾರೆ ಎಂದಿದ್ದಾರೆ.‌

ಇದನ್ನೂ ಓದಿ-https://suddilive.in/archives/12365

Related Articles

Leave a Reply

Your email address will not be published. Required fields are marked *

Back to top button