ರಾಜಕೀಯ ಸುದ್ದಿಗಳು
ಹಲವಾರು ಬೆಂಬಲಿಗರೊಂದಿಗೆ ಎಂ.ಶ್ರೀಕಾತ್ ಕಾಂಗ್ರೆಸ್ ಸೇರ್ಪಡೆ

ಸುದ್ದಿಲೈವ್/ ಬೆಂಗಳೂರು/ಶಿವಮೊಗ್ಗ

ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಪ್ತರಾಗಿದ್ದ ಎಂ. ಶ್ರೀಕಾಂತ್ ತಮ್ಮ ನೂರಾರು ಬೆಂಬಲಿಗರೊಂದಿಗೆ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡರು.
ಕಳೆದ ಒಂದು ತಿಂಗಳ ಹಿಂದೆಯ ಜೆಡಿಎಸ್ ತೊರೆಯುವ ಬಗ್ಗೆ ಘೋಷಣೆ ಮಾಡಿದ್ದ ಎಂ. ಶ್ರೀಕಾಂತ್ ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶ್ರೀಕಾಂತ್ ಮತ್ತು ಅವರ ಬೆಂಬಲಿಗ ಜೆಡಿಎಸ್ ಮುಖಂಡರುಗಳನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಶಿವಮೊಗ್ಗ ಮಹಾನಗರಪಾಲಿಕೆ ಸದಸ್ಯ ನಾಗರಾಜ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಯುವ ಜೆಡಿಎಸ್ ಪದಾಧಿಕಾರಿಗಳಾದ ಸೂಲಯ್ಯ ಸೇರಿದಂತೆ ಅನೇಕ ಮುಖಂಡರು, ಜೆಡಿಎಸ್ ವಿವಿಧ ಘಟಕಗಳ ಪದಾಧಿಕಾರಿಗಳು ಕಾಂಗ್ರೆಸ್ ಸೇರಿದರು.
ಇದನ್ನೂ ಓದಿ-https://suddilive.in/archives/1814
