ಅ.28 ರಂದು ಶಿವಧೂತ ಗುಳಿಗ ನಾಟಕ ಪ್ರದರ್ಶನ

ಸುದ್ದಿಲೈವ್/ಶಿವಮೊಗ್ಗ

ವಿಧಾನ ಸಭಾ ಚುನಾವಣೆ ಅದರಲ್ಲೂ ತೀರ್ಥಹಳ್ಳಿ ವಿಧಾನ ಸಭಾ ಚುನಾವಣೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ಶಿವಧೂತ ಗುಳಿಗ ಈಗ 1000 ಪ್ರದರ್ಶನಕ್ಕೆ ಮುನ್ನುಗ್ಗುತ್ತಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನ್ಯಾಸಕ ಕೆ.ಜಿ ವೆಂಕಟೇಶ್, ಕಾಂತಾರ ಸಿನಿಮಾ ಪ್ರದರ್ಶನಕ್ಕೂ ಮೊದಲು ಈ ನಾಟಕ 250 ಪ್ರದರ್ಶನವಾಗಿತ್ತು. ನಾಟಕದಲ್ಲಿ ಕಾಂತಾರದ ಗುರುವ ಪಾತ್ರ ನಿರ್ವಹಿಸಿದ್ದ ಸ್ವರಾಜ್ ಶೆಟ್ಟಿ ಪಾತ್ರ ಧರಿಸಿದ್ದರು. ಇದನ್ನ ನೋಡಿದ ರಿಷಬ್ ಶೆಟ್ಟಿ ವೀಕ್ಷಿಸಿದ್ದರು. ಹಾಗಾಗಿ ಅವರನ್ನ ಸಿನಿಮಾದ ಪಾತ್ರದಲ್ಲಿ ನಟಿಸಲು ಅವಕಾಶ ಕಲ್ಪಿಸಿದ್ದಾರೆ ಎಂದರು.
ಜಾದೂಗಾರ ವಿಕ್ರಂ ಶೆಟ್ಟಿ ಮಾತನಾಟಿ ಕನ್ಬಡ, ಇಂಗ್ಲೀಷ್, ಮರಾಠಿ ಸೇರಿ ಹಲವು ಭಾಷೆಯಲ್ಲಿಬಪ್ರದರ್ಶನವಾಗುತ್ತಿದೆ. ವಿದೇಶದಲ್ಲಿ ಅಮೋಘವಾಗಿ ಪ್ರದರ್ಶನವಾಗಿದೆ. 512 ಪ್ರದರ್ಶನ ವಾಗುತ್ತಿದ್ದು 1000 ದ ಪ್ರದರ್ಶನದತ್ತ ಮುನ್ನುಗ್ಗುತ್ತಿದೆ. ಶಿವಧೂತ ಗುಳಿಗ ಅ.28 ರಂದು ಕುವೆಂಪು ರಂಗ ಮಂದಿರದಲ್ಲಿ ಪ್ರದರ್ಶನವಾಗುತ್ತಿದೆ.
ಟಿಕೇಟ್ 500 ರೂ. ಮತ್ತು 1000 ರೂ.ಗೆ ಬಿತ್ತರವಾಗುತ್ತದೆ. 35 ಜನರ ತಂಡ ಇದು. 28 ಜನರು ನಾಟಕದ ಅತ್ರಧಾರಿಯಾಗಿದೆ. 2 ಕಾಲು ಗಂಟೆ ನಾಟಕವಿದು. ಗುಳಿಗ ಮಲೆನಾಡಿನ ದೈವರಾದ ಗುಳಿಗನ ಪಾತ್ರ ನಾಟಕವನ್ನ ಎತ್ತಿಹಿಡುತ್ತದೆ . ಗುರುವಾ ಪಾತ್ರದ ಸ್ವರಾಜ್ ಶೆಟ್ಟಿ ಗುಳಿಗ ಪಾತ್ರವನ್ನ ಧರಿಸಿದ್ದಾರೆ. ನಾಟಕದ ಟಿಜೇಟ್ ಕುರಿತು 9448108222 ಅಥವಾ 8073579575 ಸಂಪರ್ಕಿಸಬಹುದು ಎಂದರು.
ಇದನ್ನೂ ಓದಿ-https://suddilive.in/archives/1770
