ಸ್ಥಳೀಯ ಸುದ್ದಿಗಳು

50 ರ ಸಂಭ್ರಮದಲ್ಲಿ ಗಣ್ಯರ ಗ್ಯಾಲರಿ ಖಾಲಿ ಖಾಲಿ-ನೃತ್ಯದಲ್ಲಿ ಗಮನ ಸೆಳೆದ ಜಿಲ್ಲಾಧಿಕಾರಿಗಳ ಪುತ್ರ

ಸುದ್ದಿಲೈವ್/ಶಿವಮೊಗ್ಗ

ಕರ್ನಡ ರಾಜ್ಯೋತ್ಸವದ ದಿನಾಚರಣೆಯ ವೇಳೆ ಗಣ್ಯರ ಗ್ಯಾಲರಿ ಖಾಲಿ ಖಾಲಿ ಇದ್ದಿದ್ದು ಗಮನ ಸೆಳೆದಿದೆ. ಕನ್ನಡ ರಾಜ್ಯೋತ್ಸವದ 50 ಸಂಭ್ರಮದಲ್ಲಿ ಗಣ್ಯರ ಗೈರು ಹಾಜರಿ ಉತ್ಸವದ ವೇಳೆ ನಿರುತ್ಸಾಹ ಎದ್ದುಕಾಣುತ್ತಿದೆ.

ಇಂದು ಬೆಳಿಗ್ಗೆ ನಗರದ ಡಿಎಆರ್ ಗ್ರೌಂಡ್ ನಲ್ಲಿ ಕನ್ನಡ ರಾಜ್ಯೋತ್ಸವದ 50 ಸಂಭ್ರಮ ಎಂದಿನಂತೆ ಏರ್ಪಾಟು ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರೇ ಪ್ರತಿ ಬಾರಿ ಧ್ವಜಾರೋಹಣ ನಡೆಸುತ್ತಾರೆ.. ಆದರೆ ಬೆಂಗಳೂರಿನ ಕಾರ್ಯನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಂದಿರಲೊಲ್ಲ.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯಿಂದಲೇ ರಾಷ್ಟ್ರಧ್ವಜ ಹಾರಿಸುವ ಮೂಲಕ ಗೌರವ ವಂದನೆ ನಡೆಯಿತು. ಜಿಲ್ಲೆಯ ಏಳು ವಿಧಾನ ಸಭಾ ಶಾಸಕರು ಹಾಜರಿರಬೇಕಿದ್ದ  ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶಾಸಕ ಚೆನ್ನಬಸಪ್ಪ, ಮೇಯರ್ ಶಿವಕುಮಾರ್ ಎಂಎಲ್ ಸಿ ರುದ್ರೇಗೌಡ ಮತ್ತು ಪಾಲಿಕೆಯ ಬೆರಳೆಣಿಕೆ ಸದಸ್ಯರು ಜಿಲ್ಲಾ ಅಧಿಕಾರಿಗಳು ಶಾಲೆ ಮಕ್ಕಳು ಹೊರತು ಪಡಿಸಿದರೆ ಕಾರ್ಯಕ್ರಮದ ಗಣ್ಯರ ಗ್ಯಾಲರಿ ಖಾಲಿ ಖಾಲಿ ಇತ್ತು.

ಉತ್ಸವ ಚಿಲುಮೆ ಆಗಬೇಕಿದ್ದ್ದ ರಾಜ್ಯೋತ್ಸವದ ಸಂಭ್ರಮ ನಿರುತ್ಸಾಹದಿಂದ‌ ಕೂಡಿದೆ. ಪ್ರತಿವರ್ಷದಂತೆ ಈ ಬಾರಿಯೂ ಮಕ್ಕಳ ನೃತ್ಯ ಮತ್ತು ಕನ್ನಡದ ಹಾಡುಗಳು ಹಾಡುವ ಮೂಲಕ ಸಂಭ್ರಮಿಸಲಾಗಿದೆ. ಸಾಂದೀಪಿ ಶಾಲೆಯ ಮಕ್ಕಳಿಂದ‌ಧರಣಿ ಮಂಡಲ, ಎನ್ಇಎಸ್ ಶಾಲೆಯಿಂದ ನೃತ್ಯ, ಬಿಜಿಎಸ್ ಶಾಲೆ, ಪೋದಾರ್ ಶಾಲೆಗಳು ಕಾರಗಯಕ್ರಮದಲ್ಲಿ ಭಾಗಿಯಾಗದ್ದವು.

ದಾ.ರಾಬೇಂದ್ರೆಯ ಒಂದೇ ಒಂದೇ ನಾವೆಲ್ಲರೂ ಒಂದೆ,  ಎಲ್ಲಾದರೂ ಇರು ಎಂತಾದರೂ ಇರು ಎಂಬ ಐದು ಹಾಡುಗಳ ನುಡಿನಮನ ಗೀತೆಗಳನ್ನ ಹಾಡಲಾಯಿತು. ವೀರಗಾಸೆ,, ಕೋಲಾಟ ಮೊದಲಾದ ಜಾನಪದ ನೃತ್ಯಗಳು ನಡೆದವು.

ಜಿಲ್ಲಾಧಿಕಾರಿಗಳ ಮಗ ಭಾಗಿ

ಶೇಷಾದ್ರಿಪುರಂನ ರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ ಜಿಲ್ಲಾಧಿಕಾರಿಗಳ ಮಗ  ಶಶಿವಿನ್ ನಾವೆನ್ ಭಾಗಿಯಾಗಿದ್ದು ವಿಶೇಷವಾಗಿತ್ತು.ಮಿಲ್ಟ್ರಿ ಧಿರಿಸಿನಲ್ಲಿ ಬಂದಿದ್ದ ಶಶಿವಿನ್ ಕನ್ನಡ ಬಾವುಟವನ್ನ ಹಿಡಿದು ನೃತ್ಯದಲ್ಲಿ ಭಾಗಿಯಾಗಿದ್ದು ಎಲ್ಲರ ಗಮನ ಸೆಳೆದಿದ್ದಾನೆ.

ಸೈನ್ಸ್ ಮೈದಾನದಿಂದ ಮೆರವಣಿಗೆ

ಸೈನ್ಸ್ ಮೈದಾನದಿಂದ‌ ವಿವಿಧ ಇಲಾಖೆಗಳ ಸ್ಥಬ್ಧ ಚಿತ್ರಗಳ ಮೆರವಣಿಗೆ ನಡೆದಿದೆ. ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮೀ ಸ್ತಬ್ಧ‌ಚಿತ್ರ , ಜೋಗ ಜಲಪಾತ, ಗುಡವಿ ಪಕ್ಷಿಧಾಮ,  ಸ್ತಬ್ಧಚಿತ್ರ, ಕೆಎಸ್ ಆರ್ ಟಿಸಿ ವತಿಯಿಂದ‌ಸರ್ಕಾರದ ಶಕ್ತಿ ಯೋಜನೆಯ ಅಲಂಕಾರ ಮಾಡಲಾಗಿತ್ತು. ಹೀಗೆ  ವಿಬಿಧ ಇಲಾಖೆಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.

ಇದನ್ನೂ ಓದಿ-https://suddilive.in/archives/2214

Related Articles

Leave a Reply

Your email address will not be published. Required fields are marked *

Back to top button