ದಸರಾ ಮೆರವಣಿಗೆಯಲ್ಲಿ ಗಮನ ಸೆಳೆದ ಪ್ಲಕಾರ್ಡ್!

ಸುದ್ದಿಲೈವ್/ಶಿವಮೊಗ್ಗ

ಬನ್ನಿ ಮುಡಿಯುವ ಮೂಲಕ 9 ದಿನಗಳ ದಸರಾ ಹಬ್ಬ ಮುಕ್ತಾಯಗೊಂಡಿದೆ. ಬನ್ನಿ ಕಡಿಯುವ ಮುಂಚೆ ದಸರಾ ಉತ್ಸವದ ಮೆರವಣಿಗೆಯೂ ಸಹ ಇಂದು ಹಲವು ಗಮನ ಸೆಳೆದಿದೆ. ಓರ್ವ ವ್ಯಕ್ತಿಯು ಧಿರಿಸು ಮತ್ತು ಪ್ಲಕಾರ್ಡ್ ವೊಂದು ಗಮನ ಸೆಳೆದಿದೆ.
ಮುಂದಿನ ದಿನಗಳಲ್ಲಿ ನಮ್ಮನ್ನ ಜಿಗುಪ್ಸೆಗೊಳಿಸುವಷ್ಟು ಹಿಂಡಿ ಹಿಪ್ಪೆ ಮಾಡುವ ವಸ್ತುಗಳ ಬಗ್ಗೆ ಮೆರವಣಿಗೆಯಲ್ಲಿ ಗಮನ ಸೆಳೆದಿದ್ದಾನೆ. ದಸರಾ ಹಬ್ಬದ ಮೆರವಣಿಗೆಯಲ್ಲಿ ಇವರು ವಿಶೇಷವಾದ ಪ್ಲಾಸ್ಟಿಕ್ ಅಭಿಯಾನವನ್ನು ಮಾಡಿದ್ದಾನೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಈತನ ಸಂದೇಶ ಮಾತ್ರ ಅರ್ಥಪೂರ್ಣವಾದುದು.
ಮೈತುಂಬಾ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬಾಟೆಲ್ ಹಾಕಿಕೊಂಡು ಬಂದ ಯುವಕನ ಕೈಯಲ್ಲಿದ್ದ ಪ್ಲಕಾರ್ಡ್ ಸಹ ಗಮನ ಸೆಳೆದಿದೆ. ಭೂಮಿ @ 2040 ಎಚ್ಚರಿಕೆ! ಇದು ಪ್ಲಾಸ್ಟಿಕ್ ಭೂತ ಬಿಡದಿದ್ದರೆ ನೀವು-ನಾವು ಗೋತ ಎಂಬ ಎಚ್ಚರಿಕೆ ನೀಡಿದ್ದಾನೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದು 2040 ರಲ್ಲಿ ಎಂಬ ಸಂದೇಶ ಅರ್ಥಗರ್ಭಿತವಾಗಿದೆ.
ಎಚ್ಚರದಿಂದ ಮತ್ತು ಪ್ಲಾಸ್ಟಿಕ್ ನಿಂದ ಹೊರ ಬರದಿದ್ದರೆ ನಮ್ಮಮುಂದಿನ ಪೀಳಿಗೆಗಳ ಬದುಕು ಸಹ ಕಷ್ಟವಾಗಲಿದೆ ಎಂಬ ಸಂದೇಶವನ್ನ ಈ ಯುವಕ ಸಾರುತ್ತಿದ್ದಾನೆ.
ಇದನ್ನೂ ಓದಿ-https://suddilive.in/archives/1757
