ಕ್ರೈಂ ನ್ಯೂಸ್

ತಡರಾತ್ರಿ ಕೊರಲಹಳ್ಳಿ ಗ್ರಾಮಸ್ಥರ ಧರಣಿ-ವೈದ್ಯರ ವರ್ಗಾವಣೆಗೆ ಪಟ್ಟು

ಸುದ್ದಿಲೈವ್/ಶಿವಮೊಗ್ಗ

ಮಗುವೊಂದಕ್ಕೆ ಚಿಕಿತ್ಸೆ ಕೊಡಿಸಲು ಉದ್ಧಟತನ ಮರೆದ ವೈದ್ಯರನ್ನ ವರ್ಗಾವಣೆ ಮಾಡುವಂತೆ ಆಗ್ರಹಿಸಿ ರಾತ್ರೋ ರಾತ್ರಿ ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ‌ ಗ್ರಾಮಸ್ಥರು ಧರಣಿ ನಡೆಸಿದ್ದಾರೆ.

ಆಡಳಿತಾಧಿಕಾರಿ ಡಾ. ಅರುಣ್ ಗ್ರಾಮಸ್ಥರ ಸ್ಥಳಕ್ಕೆ ಆಗಮಿಸಿ‌ ಗ್ರಾಮಸ್ಥರಿಗೆ ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರ ವಿರುದ್ಧ ಕ್ರಮ‌ಜರುಗಿಸಲು ನನಗೆ ಅಧಿಕಾರವಿಲ್ಲ. ಮೇಲಾಧಿಕಾರಿಗಳಿಗೆ ತಿಳಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು ಗ್ರಾಮಸ್ಥರು ಈ ಹಿಂದೆಯೇ ಲಂಚದ ದೂರು ನೀಡಿದರು‌ ಕ್ರಮ ಕೈಗೊಳ್ಳಲಿಲ್ಲ ಏಕೆ ಎಂದು ವೈದ್ಯರಿಗೆ ಮರು ಪ್ರಶ್ನಿಸಿದ್ದಾರೆ. ವರ್ಗಾವಣೆ ಮಾಡುವ ತನಕ ಜಾಗ ಬಿಟ್ಟು ಕದಲಲ್ಲ ಎಂದಿದ್ದಾರೆ.

ಇದರಿಂದ ರಾತ್ರೋ ರಾತ್ರಿಯ ಗ್ರಾಮಸ್ಥರ ಧರಣಿ ಮುಂದುವರೆದಿದೆ. ಇಲ್ಲಿನ ಅಂಜನಾಪುರದ ಹತ್ತಿರವಿರುವ ಕೊರಲಹಳ್ಳಿಯ ಗ್ರಾಮದ ಮಗುವೊಂದಕ್ಕೆ ಅನಾರೋಗ್ಯದ ಹಿನ್ನಲೆಯಲ್ಲಿ ಶಿಕಾರಿಪುರದ ಮಕ್ಕಳ ಆಸ್ಪತ್ರೆಗೆ ಕರೆತರಲಾಗಿದೆ. ಅಲ್ಲಿ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಸಾರ್ವಜನಿಕ ಆಸ್ಪತ್ರೆಗೆ ಪೋಷಕರು ಕರೆತಂದಿದ್ದಾರೆ.

ಪ್ರತಿಭಟನಾ ನಿರತ ಕೊರಲಹಳ್ಳಿ ಗ್ರಾಮಸ್ಥರ ಪ್ರಕಾರ ಇಲ್ಲಿನ ಡಾ.ಗೋಪಾಲ ಹರಿಗೆಯವರು ಮಗುವಿಗೆ ಸರಿಯಾದ ಚಿಕಿತ್ಸೆ ನೀಡಿ ಎಂದು ಹೇಳಿದರೆ ನಾನು ಮಕ್ಕಳ ವೈದ್ಯ ಅಲ್ಲ ನಾನು‌ ಪೋಸ್ಟ್ ಮಾರ್ಟಂ ಮಾಡುವ ವೈದ್ಯ ಎಂದು ಗ್ರಾಮಸ್ಥರಿಗೆ ಎದುರು ಉತ್ತರ ನೀಡಿರುವುದಾಗಿ ಆರೋಪಿಸಿದ್ದಾರೆ.

ಅವರ ಉದ್ಧಟತನದ ಹಿನ್ನಲೆಯಲ್ಲಿ ಗ್ರಾಮಸ್ಥರು ತಡರಾತ್ರಿ ಆಸ್ಪತ್ರೆಯ ಮುಂದೆ ಧರಣಿ ನಡೆಸಿದ್ದಾರೆ. ಪೊಲಿಸರು ಧರಣಿ ಬಿಟ್ಟು ದೂರು ನೀಡಿ ತನಿಖೆ ನಡೆಸುವುದಾಗಿ ಭರವಸೆ ನೀಡಿದರು ಸ್ಥಳಕ್ಕೆ ಆಡಳಿತಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದಾರೆ.

ಆಡಳಿತಾಧಿಕಾರಿ ಡಾ.ಅರುಣ್ ಸ್ಥಳಕ್ಕೆ ಬಂದು ಆಶ್ಚಾಸನೆ ನೀಡಿದರು ಗ್ರಾಮಸ್ಥರು ಬಿಗಿಪಟ್ಟು ಹಿಡಿದಿದ್ದಾರೆ. ಡಾ. ಗೋಪಾಲ್ ಹರಿಗೆಯ ವಿರುದ್ಧ ಭ್ರಷ್ಠಾಚಾರದ ಬಗ್ಗೆ ಲಿಖಿತ ದೂರು ಸಹ ನೀಡಲಾಗಿದೆ.

ಇದನ್ನೂ ಓದಿ-https://suddilive.in/archives/12270

Related Articles

Leave a Reply

Your email address will not be published. Required fields are marked *

Back to top button