ಕ್ರೈಂ ನ್ಯೂಸ್

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಕೆ.ಎಸ್‌ ಈಶ್ವರಪ್ಪ ವಿರುದ್ದ ಎಫ್‌ಐಆರ್

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವೇಳೆ ಚುನಾವಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ರಾಜಕೀಯ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕೆ.ಎಸ್.ಈಶ್ವರಪ್ಪನವರ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ.

ಏ.೫ ರಂದು ತೀ‍ರ್ಥಹಳ್ಳಿ ತಾಲ್ಲೂಕು ನೊಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಬುತೀರ್ಥದ ದೇವಸ್ಥಾನ ಒಂದರಲ್ಲಿ ಪೂಜಾ ಕಾ‍ರ್ಯಕ್ರಮ ನೆರವೇರಿಸಿ, ಅಲ್ಲೇ ಹತ್ತಿರದಲ್ಲೇ ಅರ್ಚಕರ ಮನೆಗೆ ಹೋಗಿ, ಅಲ್ಲಿ ಅವರ ಮನೆಯ ಅಂಗಳದಲ್ಲಿ ಸುಮಾರು ೫೦ ರಿಂದ ೬೦ ಜನರನ್ನು ಸೇರಿಸಿಕೊಂಡು ೫೦ ಕುರ್ಚಿಗಳು ಹಾಗೂ ಹ್ಯಾಂಡ್‌ ಮೈಕ್‌ ಒಳಗೊಂಡಂತೆ ಸಣ್ಣ ವೇದಿಕೆ ರೀತಿಯಲ್ಲಿ ಸಭೆ ನಡೆಸಿ ಅವರು ರಾಜಕೀಯ ಪ್ರೇರಿತ ಭಾಷಣವನ್ನು ಮಾಡಿರುತ್ತಾರೆ.

ಇದರಿಂದ ಈಶ್ವರಪ್ಪನವರ ಕಾರ್ಯಕ್ರಮದ ವಿರುದ್ಧ ಇದು ಮೂರನೇ ಎಫ್ಐಆರ್ ದಾಖಲಾದಂತಾಗಿದೆ. ಶಿಕಾರಿಪುರದಲ್ಲಿ ಬೈಕ್ ರ್ಯಾಲಿ ಕಾರ್ಯಕ್ರಮದ ವಿರುದ್ಧ, ಶಿವಮೊಗ್ಗದಲ್ಲಿ ಗೋಪಾಲಗೌಡ ಬಡಾವಣೆಯ ಆದಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರಚಾರ ಸಭೆ. ಈಗ ತೀರ್ಥಹಳ್ಳಿಯ ಅಂಬುತೀರ್ಥ ದೇವಸ್ಥಾನದಲ್ಲಿ ಪ್ರಚಾರ ಸಭೆ ಕುರಿತು ದೂರು ದಾಖಲಾಗಿದೆ.‌

ಚುನಾವಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಅನುಮತಿಯನ್ನು ಈ ಕಾ‍ರ್ಯಕ್ರಮ ನಡೆಸಲು ಪಡೆದಿರುವುದಿಲ್ಲ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಸಂಜ್ಞೆಯ ಅಪರಾದ ಪ್ರಕರಣವಾದ್ದರಿಂದ ನ್ಯಾಯಾಲಯದ ಅನುಮತಿ ಪಡೆದು ಕೆ.ಎಸ್‌ ಈಶ್ವರಪ್ಪ ರವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ-https://suddilive.in/archives/12263

Related Articles

Leave a Reply

Your email address will not be published. Required fields are marked *

Back to top button