ಹಾರನಳ್ಳಿಯಲ್ಲಿ ದೊಣ್ಣೆಗಳನ್ನ ಹಿಡಿದು ಬಡಿದಾಡಿದ ಪ್ರಕರಣಕ್ಕೆ ಟ್ವಿಸ್ಟ್!

ಸುದ್ದಿಲೈವ್/ಶಿವಮೊಗ್ಗ

ಹಾರನಹಳ್ಳಿಯಲ್ಲಿ ಈದ್ ಹಬ್ಬದ ವಿಚಾರದಲ್ಲಿ ಗಲಾಟೆಯಾಗಿರುವ ಬಗ್ಗೆ ಈಗ ಪ್ರತಿ ದೂರು ದಾಖಲಾಗಿದ್ದು ಮಜರ್ ಬಸ್ ನಿಲ್ದಾಣದಲ್ಲಿ ಮೊಬೈಲ್ ಕರೆ ಮಾಡಿ ಮಾತನಾಡುತ್ತಾ ನಿಂತಿದ್ದಾಗ ಅತಿಕ್ ಅಹ್ಮದ್, ಶಮ್ಮು, ಖುಯ್ಯಮ್, ಫಯಾಜ್, ಅಫ್ರೋಜ್, ಸಿದ್ದಿಕ್, ಶಾಹೀದ್, ನವಾಜ್, ಮುಜಾಮಿಲ್, ಹಾಗೂ ಇತರರು ಗುಂಪು ಕಟ್ಟಿಕೊಂಡು ದೊಣ್ಣೆ, ಕಟ್ಟಿಗೆ, ಪೈಪ್, ರಾಡುಗಳಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹಾರನಹಳ್ಳಿಯಲ್ಲಿ ಖದರ್ ವಾಲಿ ದರ್ಗಾ ಮತ್ತು ಖಬರ್ ಸ್ಥಾನದ ಜಾಗಗಳ ವಿಚಾರದಲ್ಲಿ ಸಯ್ಯದ್ ಮಜರ್ ಮತ್ತು ಖಯ್ಯಂರ ನಡುವೆ ವಿವಾದವಿದ್ದು, ಈ ಬಗ್ಗೆ ಇ.ಒ ಕೋರ್ಟ್ ನಲ್ಲಿ ದಾವೆ ನಡೆಯುತ್ತಿದೆ. ಸಯ್ಯದ್ ಮಜರ್ ಅ.10 ರಂದು ರಾತ್ರಿ 9-30 ಕ್ಕೆ ಗ್ರಾಮದ ಅಕ್ಕಿಮಿಲ್ ನಿಂದ ಮನೆಗೆ ಹೋಗುವ ರಸ್ತೆ ಮಾರ್ಗದಲ್ಲಿ ಬಸ್ ನಿಲ್ದಾಣದ ಹತ್ತಿರ ನಡೆದುಕೊಂಡು ಹೋಗುವಾಗ ಖಯ್ಯಮ್ ಗುಂಪು ಮಜರ್ ಇದೇ ದಾರಿಯಲ್ಲಿ ಬರುತ್ತಾನೆ ಮುಗಿಸಿಯೇ ಬಿಡೋಣ ಎಂದು ಮಾತನಾಡಿಕೊಳ್ಳುವುದನ್ನ ಮಜರ್ ಕೇಳಿಸಿಕೊಳ್ಳುತ್ತಾರೆ.
ಮಜರ್ ಕೇಳಿಸಿಕೊಂಡು ತಕ್ಷಣ ಭರತ್ ಫರ್ಟಿಲೈಜರ್ ಬಳಿ ಬಂದು ಪೊಲೀಸರಿಗೆ ಖಯ್ಯಂ ಗುಂಪು ಕಟ್ಟಿಗೆ ದೊಣ್ಣೆ, ರಾಡು ಮತ್ತು ಪೈಪ್ ಗಳನ್ನ ಹಿಡಿದುಕೊಂಡು ಹಲ್ಲೆಗೆ ಸಿದ್ದರಾಗುತ್ತಿರುವುದಾಗಿ ಹೇಳಲು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಖುಯ್ಯಂ ಗ್ಯಾಂಗ್ ನಮ್ಮ ಆಸ್ತಿಯನ್ನ ದರ್ಗಾ ಆಸ್ತಿ ಎಂದು ಹೇಳುತ್ತಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ದಾಖಲಾಗಿದೆ. ಹಲ್ಲೆಯಲ್ಲಿ ಮಜರ್ ತಲೆಗೂ ಪೆಟ್ಟುಬಿದ್ದು ಹೊಲಿಗೆ ಹಾಕಲಾಗಿದೆ.ಅವರನ್ನಮೆಗ್ಗಾನ್ ಗೆ ದಾಖಲಿಸಲಾಗಿದೆ.
ಖಯ್ಯಂ ಮತ್ತು ಇತರಿಗೆ ಮೂರು ವರ್ಷ ಸಜೆಯಾಗಿತ್ತು
ಇದಕ್ಕೂ ಮೊದಲು ಗ್ರಾಮದಲ್ಲಿ ಖಯ್ಯಂ ಮತ್ತು ಮಜರ್ ನಡುವಿನ ಮನಸ್ಥಾಪ ನಿನ್ನೆ ಮೊನ್ನೆಯದಲ್ಲ. 2015 ರಂದು ಮಜರ್ ತಮ್ಮ ಮನೆಯ ಜಾಗದ ಅಳತೆ ಮಾಡುಸುತ್ತಿದ್ದ ವೇಳೆ ಅತೀಕ್ ಅಹ್ಮದ್, ಸಿದ್ದಿಕ್, ಶಮ್ಮು, ಫೈರೋಜ್, ಖಯ್ಯಂ ಎಂಬುವರು ತಗಾದೆ ತೆಗೆದು ಮಜರ್ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣ ಕುಂಸಿಠಾಣೆಯಲ್ಲಿ ದಾಖಲಾಗಿ ದೋಷಾರೋಪ ಪಟ್ಟಿಗಳನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಯಲಯ ಐವರಿಗೆ ತಲಾ 10 ಸಾವಿರ ರೂ. ದಂಡ ಮತ್ತು ಮೂರು ವರ್ಷ ಸಜೆ ವಿಧಿಸಿತ್ತು. ಸಜೆ ಮುಗಿದ ಮೇಲೂ ಇಬ್ಬರ ನಡುವಿನ ಮನಸ್ಥಾಪ ಮುಂದುವರೆದಿದೆ.
ಇದನ್ನೂ ಓದಿ-https://suddilive.in/archives/1161
