ರಾಜ್ಯ ಸುದ್ದಿಗಳು

ಪ್ರಧಾನಿಯವರು ಮಾಡಿರುವ ಕೆಲಸಕ್ಕೆ ಕೂಲಿ ನೀಡುವ ಸಮಯ ಬಂದಿದೆ-ಅಣ್ಣಮಲೈ

ಸುದ್ದಿಲೈವ್/ಭದ್ರಾವತಿ

ಅರ್ಧ ಕನ್ನಡ, ಅರ್ಧ ತಮಿಳಿನಲ್ಲಿ ಭಾಷಣ ಆರಂಭಿಸಿದ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಮಲೈ, ಈ ಬಾರಿ ಪ್ರಧಾನಿ ಮೋದಿ ಕಳೆದ 10 ವರ್ಷದಿಂದ ಮಾಡಿರುವ ಕೆಲಸಕ್ಕೆ ನಾವೆಲ್ಲಾ ಕೂಲಿ ಕೊಡುವ ಸಮಯ ಬಂದಿದೆ ಎಂದು ತಿಳಿಸಿದರು.

ಭದ್ರಾವತಿಯಲ್ಲಿ ತಮಿಳು ಸಮಾಜವನ್ನ ಕುರಿತು ಚುನಾವಣೆ ಭಾಷಣ ಮಾಡಿದ ಅವರು,  ಪ್ರಧಾನಿ ಚೇರ್ ನಲ್ಲಿ ಕೂರಲು ಯೋಗ್ಯತೆ ಬೇಲು. ಪ್ರಧಾನಿ ಚೇರಿನಲ್ಲಿ ಕೂರುವುದು ಮಕ್ಕಳ ಆಟಿಕೆ ಆಗಬಾರದು. ಎಲ್ಲರಿಗೂ ಪ್ರಧಾನಿ ಆಗಬೇಕು ಎಂಬ ಆಸೆ ಇದೆ. ಫಾರುಕ್ ಅಬ್ದುಲ್ಲಾ, ಸ್ಟ್ಯಾಲಿನ್,ಪ.ಬಂ ಸಿಎಂ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ ಸೇರಿದಂತೆ ಎಲ್ಲರಿಗೂ ಪ್ರಧಾನಿ ಆಗುವ ಆಸೆ ಇದೆ.

ಇದರಲ್ಲಿ ಗೊಂದಲವಿದೆ. ಅದು ಕೌನ್ ಬನೇಗಾ ಕರೋಡ್ ಪತಿ ತರ ಕೌನ್ ಬನೇಗಾ ಪ್ರಧಾನ ಮಂತ್ರಿತರ ಕಳೆದ 8 ತಿಂಗಳಿಂದ ಪ್ರಧಾನಿ ಅಭ್ಯರ್ಥಿಯನ್ನ ಹುಡುಕಲಾಗುತ್ತಿದೆ. ತಮಿಳುನಾಡಿನಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದೆ. ಎರಡನೇ ಹಂತರ ಚುನಾವಣೆ ಏ.26 ಕ್ಕೆ ರಾಜ್ಯದ 14 ಜಿಲ್ಲೆಯಲ್ಲಿ ನಡೆಯಲಿದೆ. ಮೇ.07 ಕ್ಕೆ ಚುನಾವಣೆ ನಡೆಯಲಿದೆ.

ಆದರೂ ಯಾರಿಗೂ ಗೊತ್ತಿಲ್ಲ ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳಲ್ಲಿ ಇವತ್ತಿಗೂ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟವಾಗಿಲ್ಲ. ಪ್ರಧಾನಿ ಯಾರು ಆತನ ಸಾಧಕ ಬಾಧಕ ಅಂಶಗಳು ಗೊತ್ತಿರಬೇಕು. 2014 ದೇಶದಲ್ಲಿ ಪ್ರಧಾನಿಯಾಗಿ ಮೋದಿ ಆಯ್ಕೆಯಾದರು.

2024 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ಮೋದಿಯನ್ನ ದೇಶ ಆರಿಸಲು ಮುಂದಾಗಿದೆ. ಯಾರೂ ಮೋದಿಯಷ್ಟು ಬೆಳೆದ ನಾಯಕ ದೇಶದಲ್ಲಿ ಇಲ್ಲ. ಶೇ.76 ರಷ್ಟು ಜನ ಇಡೀ ಪ್ರಪಂಚದಲ್ಲಿ ಮೋದಿಯನ್ನ ಉತ್ತಮ ಪ್ರಧಾನಿ ಎಂದು ಒಪ್ಪಿಕೊಂಡಿದೆ.

ಎಲ್ಲರೂ ಗೌರವಿಸುವ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಬೇಕು. ಕೆಲವರು ಪಕ್ಷಕ್ಕಾಗಿ ದುಡಿದವರು ಇದ್ದಾರೆ. ಸಣ್ಣ ಪುಟ್ಟ ಕೋಪ ಇದೆ. ಅವರೂ ಸಹ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಮಾತನಾಡಿದ ಅಣ್ಣಮಲೈ ಅವರಗೆಲ್ಲಾ ಮನವಿ ಮಾಡಿಕೊಳ್ತೀನಿ ಒಂದೊಂದು ಮತವೂ ಮೋದಿಗೆ ಸೇರಬೇಕು.  ಹಾಗಾಗಿ ರಾಘವೇಂದ್ರರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಕೊಡುವ ಮತ ಮೋದಿಗೆ ಸೇರುತ್ತದೆ ಎಂದರು.

ಕಳೆದ 2.25 ಲಕ್ಷ ಮತಗಳಿಂದ ರಾಘವೇಂದ್ರ ಗೆದ್ದಿದ್ದಾರೆ. ಅವರನ್ನ ಈ ಬಾರಿ 4.5 ಲಕ್ಷ ಮತಗಳಿಂದ ಗೆಲ್ಲುಸಲು ಸಂಕಲ್ಪ ಮಾಡೋಣ  ಎಂದರು. ಬಡವರಿಗೆ, ರೈತ ಮಹಿಳೆಯರಿಗೆ ನೀಡಿರುವ ಯೋಜನೆಗಳಿಗೆ ಕೂಲಿಕೊಡುವ ಸಮಯ ಬಂದಿದೆ. 10 ವರ್ಷ ಏನೇನು ಕೆಲಸ ಮಾಡಿದ್ದಾರೋ, ಅವರ ಕೆಲಸಕ್ಕೆ  ಕೂಲಿ ಕೊಡಬೇಕು. ರಾಘವೇಂದ್ರರನ್ನ ಗೆಲ್ಲಿಸಿ ಮೋದಿಯನ್ನ ದೆಹಲಿ ಸಿಂಹಾಸನದಲ್ಲಿ ಕೂರಿಸೋಣ ಎಂದರು.

ಎನ್ ಡಿಎ ಅಲೈನ್ಸ ನಲ್ಲಿ ಯಾರಿಗೂ ಭಾರತವನ್ನ ಒಡೆಯುವವರು ಇಲ್ಲ. ಐಎನ್ ಡಿಎ ಅಲ್ಲಿ ಭಾರತವನ್ನ ಒಡೆಯುವ ಅಭ್ಯರ್ಥಿಗಳಿದ್ದಾರೆ. ಭಾರತ ಒಡೆಯುವರನ್ನ ಆಯ್ಕೆ ಮಾಡದೆ ಪ್ರಧಾನಿ ಮೋದಿಯನ್ನ ಗೆಲ್ಲಿಸೋಣ ಎಂದರು.

ಇದನ್ನೂ ಓದಿ-https://suddilive.in/archives/13592

Related Articles

Leave a Reply

Your email address will not be published. Required fields are marked *

Back to top button