ರಾಜ್ಯ ಸುದ್ದಿಗಳು

ಲಿಂಗಪೂಜೆಯೊಂದಿಗೆ ಪ್ರತಿಭಟನೆ-ಜಯಮೃತ್ಯುಂಜಯ ಸ್ವಾಮೀಜಿ

ಸುದ್ದಿಲೈವ್/ಶಿವಮೊಗ್ಗ

ಪಂಚಮಸಾಲಿ ಲಿಂಗಾಯಿತ ಸಮುದಾಯದವರಿಗೆ ಮೀಸಲಾತಿ ಚಳುವಳಿ ದೇಶದಲ್ಲಿ ಹೊಸ ಮನ್ವಂತರವನ್ನ ಸೃಷ್ಠಿ ಮಾಡಿದೆ.ಸಮಾಜದ ಅಸ್ಮಿತೆಯನ್ನ ಹುಟ್ಟುಹಾಕಿದೆ. ಈ ಹಿನ್ನಲೆಯಲ್ಲಿ ಫೆ.14 ರಂದು ಶಿವಮೊಗ್ಗದಲ್ಲಿ ಮೀಸಲಾತಿ ಜಾರಿಗೊಳಿಸಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಸುದ್ದಿಗೋಷ್ಠಿ ನಡೆಸಿದ ಕೂಡಲ ಸಂಗಮದ ಪಂಚಮ ಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ನಾವೆಲ್ಲಾ ಲಿಂಗಾಯಿತರು ರೈತರಾಗಿದ್ದೇವೆ. ಎಲ್ಲಾ ಒಳಪಂಗಡದವರಿಗೆ ಒಬಿಸಿಗೆ ಸೇರಿಸಬೇಕು. ಗೌಡ, ಮಲೆಗೌಡಲಿಂಗಾಯಿತರಿಗೆ 2a ಮೀಸಲಾತಿಗಾಗಿ ಕಳೆದ ಮೂರುವರ್ಷನಡೆಸಿದ್ದೇವೆ. ಬಿಎಸ್ ವೈ ಸರ್ಕಾರ ಇದ್ದಾಗ ಹಿಂದುಳಿದ ವರ್ಗದ ಆಯೋಗ ರಚಿಸಿದ್ದರು. ಬೊಮ್ಮಾಯಿ ಸರ್ಕಾರ ಶಿಫಾರಸು ಮಾಡಿದ್ದರಿಂದ ಕೇಂದ್ರ ಸರ್ಕಾರ 2 ಎಂಬ ಹೊಸಕೆಟಗರಿ ಕೊಟ್ಟಿತ್ತು ಎಂದರು.

ಆದರೆ ಇನ್ನೇನು ಜಾರಿಯಾಗಬೇಕು ಬೊಮ್ಮಾಯಿ ಸರ್ಕಾರ ಬಿದ್ದಿಹೋಯಿತು. ಸರಿಯಾಗಿ ಜಾರಯಾಗಿಲ್ಲ.6 ನೇ ಹಂತದ ಹೋರಾಟ ಅನಿಅರ್ಯವಾಯಿತು. ಒಂದು ವಾರದೊಳಗೆ ಮೀಸಲು ಪ್ರಕಟಿಸುವ ಬಗ್ಗೆ ಹೊಸ ಕಾಂಗ್ರೆಸ್ ಸರ್ಕಾರ ಭರವಸೆ ನೀಡದ್ದರು. ಬೆಳಗಾವಿ ಅಧಿವೇಶನ ನಡೆಯುವ ವೇಳೆ ಮುತ್ತಿಗೆ ಹಾಕುವುದಾಗಿ ಹೇಳಿದಾಗ ಮತ್ತೆಭರವಸೆ ನಡೆದು ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ ಯಾವುದೇ ಪ್ರತಿಕ್ರಿತೆ ಇಲ್ಲವಾಯಿತು ಎಂದರು.

ಸರ್ಕಾರ ಕೊಟ್ಟ ಮಾತನದ ಹಿಂದೆ ಸರಿದ ಪರಿಣಾಮ ಹೋರಾಟ ಅನಿವಾರ್ಯವಾಗಿದೆ. ನಿನ್ನೆ ಎಲ್ಲಾ ಮಲೆನಾಡ ತಾಲೂಕು ಸಂಪರ್ಕಿಸಲಾಗಿದೆ. ಫೆ.14 ರಂದು ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟಿಸಲಾಗುವುದು. ಲೋಕಸಭಾ ಚುನಾವಣೆಯ ಒಳಗೆ 2 ಎ ಮೀಸಲಾತಿ ಘೋಷಿಸುವಂತೆ ಪ್ರತಿಭಟಿಸಲಾಗುತ್ತಿದೆ. ಲೋಕ ಸಭೆ ಚುನಾವಣೆಯ ಒಳಗೆ ಮೀಸಲಾತಿ ಜಾರಿಯಾಗದಿದ್ದರೆ ನಮ್ಮ ಜನ ಚುನಾವಣೆ ವೇಳೆ ಏನು ಮಾಡಬೇಕೋ ಅದನ್ನ ಮಾಡಿ ತೀರುತ್ತಾರೆ ಎಂದರು.

ನಿನ್ನೆ ಭದ್ರಾವತಿ ತಾಲೂಕು, ಸಾಗರ, ಸೊರಬದಲ್ಲಿ ಪ್ರವಾಸ ಮಾಡಿ ಫೆ.14 ರಂದು ಶಿವಮೊಗ್ಗದಲ್ಲಿ ಪ್ರತಿಭಟಿಸಲಾಗುತ್ತಿದೆ. ಸರ್ಕಾರ ಹಾಲುಮತಸ್ಥರಿಗೆ ಮತ್ತು ಕುಂಚಿಟಿಗರಿಗೆ ನ ಈಸಲಾತಿ ಶಿಫಾರಸು ಮಾಡಿದ್ರಿ ಲಿಂಗಾಯಿತ ಸಮಾಜಕ್ಕೆ ಮೀಸಲಾತಿ ಕೊಡಲು ಏನು ಸಮಸ್ಯ ಇದೆ ಎಂದ್ರಪ್ರಶ್ನಿಸಿದರು.

ಲಿಂಗ ಪೂಜೆ ಮಾಡುವ ಮೂಲಕ ಫೆ.14 ರಂದು ಗೋಪಿ ವೃತ್ತದ ಬಳಿ ನೆರವೇರಿಸಲಾಗುವುದು. ನಂತರ ಶಿವಪ್ಪ ನಾಯಕ ಪ್ರತಿಮೆಯಿಂದ ಗೋಪಿ ವೃತ್ತದ ವರೆಗೆ ಮೆರವಣಿಗೆ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಮೀಸಲು ಹೋರಾಟದ ಸತೀಶ್, ಶಿವರಾಜ್, ರುದ್ರೇಗೌಡ ಪಾಟೀಲ್, ಪಂಚಮಸಾಲಿ ಜಿಲ್ಲಾಧ್ಯಕ್ಷರು ಹೆ್ ವಿ ಮಹೇಶ್ವರಪ್ಪ, ಶಿವಕುಮಾರ್ ಬಿ.ಎಸ್, ಚನ್ನಬಸಪ್ಪ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/8637

Related Articles

Leave a Reply

Your email address will not be published. Required fields are marked *

Back to top button