ಕ್ರೈಂ ನ್ಯೂಸ್

ಅಬ್ಬಲಗೆರೆ ಗ್ರಾಪಂ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಸುದ್ದಿಲೈವ್/ಶಿವಮೊಗ್ಗ

ಜಮಿನಿನನ ಖಾತೆಯನ್ನ ತನ್ನ ಹೆಸರಿಗೆ ಬದಲಾಯಿಸಿಕೊಳ್ಳಲು ಲಂಚದ ಬೇಡಿಕೆ ಇಟ್ಟಿದ್ದ ಅಬ್ಬಲಗೆರೆ ಗ್ರಾಪಂ ಕಾರ್ಯದರ್ಶಿ ಗ್ರೇಡ್-2 ಯೋಗೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಬಿ.ಯಶವಂತ ಎಂಬುವರು ಶಿವಮೊಗ್ಗದ ಚನ್ನಮುಂಭಾಪುರ ಅಕ್ಷರ ಕಾಲೇಜು ಎದುರು ಸ.ನಂ: 9/8 ರಲ್ಲಿ 00-10.08 ಗುಂಟೆ ಜಾಗವಿದ್ದು, ಜಾಗವನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಶಿವಮೊಗ್ಗ ತಾಲ್ಲೂಕ್ ಅಬ್ಬಲಗೆರೆ ಗ್ರಾಮ ಪಂಚಾಯ್ತಿಯ ಅಧಿಕಾರಿಯಾದ ಕಾರ್ಯದರ್ಶಿ-02 ಯೋಗೇಶ್‌ರವರ ಬಳಿ ಈಗ್ಗೆ 6 ತಿಂಗಳ ಹಿಂದೆ ಆಧಾರ ಕಾರ್ಡ್, ಸ್ಟೇಚ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಏಕ ನಿವೇಶನ ವಿನ್ಯಾಸ ನಕ್ಷೆ ದೃಢೀಕರಣ, ಡಿ.ಸಿ.ಸಾಹೇಬರವರ ಅಲಿನೇಷನ್ ಪತ್ರವನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಿದ್ದರು.

ಅರ್ಜಿಯನ್ನು ಪಡೆದುಕೊಂಡು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಯೋಗೀಶ್ ಕೆಲಸ ಮಾಡಿಕೊಡದೆ ಸತಾಯಿಸಿದ್ದರು. ನಿನ್ನೆ ಮಧ್ಯಾಹ್ನ ಸುಮಾರು 12.45 ಗಂಟೆಗೆ ಯಶವಂತ್ ಅಬ್ಬಲಗೆರೆ ಪಂಚಾಯಿತಿ ಕಛೇರಿಗೆ ಹೋದಾಗ ನಿಮ್ಮ ಜಾಗವು ಅಪ್ರೋವಲ್ ಆಗಿದೆ ಕೆಲಸಕ್ಕೆ15,000/-ರೂಗಳ ಲಂಚದ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು.‌

ಲಂಚದ ಹಣ ನೀಡಲು ಇಷ್ಟವಿಲ್ಲದ ದೂರುದಾರರು ಶಿವಮೊಗ್ಗ ಲೋಕಾಯುಕ್ತ ಕಛೇರಿಗೆ ಹಾಜರಾಗಿ ದೂರು ನೀಡಿದ್ದರು. ದೂರಿನ ಮೇರೆಗೆ ಇಂದು ಬೆಳಿಗ್ಗೆ ಅಧಿಕಾರಿ ಗ್ರಾಪಂ ಕಾರ್ಯದರ್ಶಿ ಯೋಗೇಶ ಟಿ. ಗ್ರೇಡ್-2 15,000/- ರೂ. ಲಂಚದ ಹಣವನ್ನು ಪಡೆಯುವಾಗ ಲೋಕ ಬಲೆಗೆ ಬಿದ್ದಿದ್ದಾರೆ.

ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಕಚೇರಿಯ ಪೊಲೀಸ್ ಅಧೀಕ್ಷಕರಾದ ಶ್ರೀ ಮಂಜುನಾಥ ಚೌದರಿ. ಎಂ.ಹೆಚ್, ಹಾಗೂ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಉಮೇಶ್ ಈಶ್ವರನಾಯ್ಕ ಇವರ ಸೂಕ್ತ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ನಿರೀಕ್ಷಕರಾದ ಶ್ರೀ ವೀರಬಸಪ್ಪ ಎಲ್. ಕುಸಲಾಪುರ, ಶ್ರೀ ಪ್ರಕಾಶ್, ಶ್ರೀ ಹೆಚ್.ಎಸ್.ಸುರೇಶ್ ಮತ್ತು ಸಿಬ್ಬಂದಿಯವರಾದ ಶ್ರೀಯೋಗೇಶ್ ಸಿ.ಹೆಚ್.ಸಿ, ಶ್ರೀ ಸುರೇಂದ್ರ ಹೆಚ್.ಜಿ, ಸಿ.ಹೆಚ್.ಸಿ, ಶ್ರೀ ಪ್ರಶಾಂತ್ ಕುಮಾರ್ ಸಿ.ಪಿ.ಸಿ, ಶ್ರೀ ರಘುನಾಯ್ಕ ಸಿ.ಪಿ.ಸಿ, ಶ್ರೀ ದೇವರಾಜ್ ಸಿಪಿಸಿ, ಶ್ರೀಮತಿ ಪುಟ್ಟಮ್ಮ ಎನ್. ಮಪಿಸಿ, ಶ್ರೀ ಪ್ರದೀಪ್, ಎ.ಪಿ.ಸಿ, ಶ್ರೀ ಗೋಪಿ ವಿ. ಎ.ಪಿ.ಸಿ. ಶ್ರೀ ಜಯಂತ್ ಎ.ಪಿ.ಸಿ. ಇವರುಗಳು ಹಾಜರಿದ್ದು, ಕರ್ತವ್ಯ ನಿರ್ವಹಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/13575

Related Articles

Leave a Reply

Your email address will not be published. Required fields are marked *

Back to top button