ಕ್ರೈಂ ನ್ಯೂಸ್

ಜನನ ಮರಣ ವಿಭಾಗದ ಎಫ್ ಡಿ ಎ ಲೋಕ ಬಲೆಗೆ

ಸುದ್ದಿಲೈವ್/ಶಿವಮೊಗ್ಗ

ಪಾಲಿಕೆಯ ಜನನ ಮತ್ತು ಮರಣ ವಿಭಾಗದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಎಫ್ ಡಿ ಎ ನಾಗರಾಜ್ ಎಂಬುವರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜನನ ಮತ್ತು ಮರಣ ವಿಭಾಗದಲ್ಲಿ ಶಿವಮೊಗ್ಗ
ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಮಹಾನಗರ ಪಾಲಿಕೆಯಲ್ಲಿ ಜನನ ಪ್ರಮಾಣ ಪತ್ರ ನೀಡಲು ಲಂಚ ಕೇಳಿದ್ದ ನೌಕರನ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಒಂದು ಸಾವಿರ ಲಂಚ ಪಡೆಯುವಾಗ ಎಫ್‌ಡಿಎ ನಾಗರಾಜ್ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ.
ಮಹಾನಗರ ಪಾಲಿಕೆ ಜನನ ಮತ್ತು ಮರಣ ನೋಂದಣಾಧಿಕಾರಿಗೆ ಗೀರಿಶ್ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ದಾಳಿ ನಡೆದಿದೆ.

ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಲೋಕಾಯುಕ್ತ ದಾಳಿ ಎಫ್ಐಆರ್ ಆಗಿದೆ.

ಇದನ್ನೂ ಓದಿ-https://suddilive.in/archives/8517

Related Articles

Leave a Reply

Your email address will not be published. Required fields are marked *

Back to top button