ಕ್ರೈಂ ನ್ಯೂಸ್

ಹಾಡುಹಗಲೇ ಕುಡುಕನ ರಾದ್ಧಾಂತ

ಸುದ್ದಿಲೈವ್/ಶಿವಮೊಗ್ಗ

ನಡು ರಸ್ತೆಯಲ್ಲಿ ಕುಡುಕನೋರ್ವ ಸಕ್ಕತ್ ರೋಧನೆ ಇಟ್ಟ ಘಟನೆ ವರದಿಯಾಗಿದೆ. ಕಾಲೇಜಿನ ವಿದ್ಯಾರ್ಥಿ ಗೆ ಕುದಿಯುತ್ತಿದ್ದ ಕಬಾಬ್ ಎಣ್ಣೆ ಎರಚಿ ಕುಡಕನೋರ್ವ ರಾದ್ದಾಂತ ಮಾಡಿದ್ದಾನೆ. ವಿದ್ಯಾರ್ಥಿ ಮತ್ತು ಕುಡುಕನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ರಾಯಲ್ ಆರ್ಕೆಡ್ ಎದುರು ಕಬಾಬ್ ಮಾರಾಟ ಮಾಡುವ   ಗಾಡಿಯ ಮುಂದೆ ಕುಡುಕನೋರ್ವ ಬಂದಿದ್ದು ಮಾತನಾಡುತ್ತಲೇ ಕಬಾಬ್ ಅಂಗಡಿಯಲ್ಲಿ ಕಬಾಬ್ ಕರೆಯುವ ಎಣ್ಣೆಯನ್ನ ಜರಡಿ ಹಿಡಿದು ದಾರಿಯ ಮೇಲೆ ಹೋಗುವ ವಿದ್ಯಾರ್ಥಿಯ ಮೇಲೆ ಎರಚಿದ್ದಾನೆ

ದಾರಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಎರಚಿದ ಎಣ್ಣೆ ತಗುಲಿ ಬೊಬ್ಬೆ ಬಂದಿದೆ. ವಿದ್ಯಾರ್ಥಿಯನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಘಟನೆ ನಡೆದಮೇಲೆ ಈ ಕುಡುಕ ಹೈಡ್ರಾಮಾ ಹೆಚ್ಚಿಗೆ ನಡೆಸಿದ್ದಾನೆ. ಈತನಿಂದ ರಾಯಲ್ ಆರ್ಕೆಡ್ ನ ಬಿ.ಹೆಚ್ ರಸ್ತೆ ಫುಲ್ ಜಾಮ್ ಆಗಿದೆ.

112 ಪೊಲೀಸ್ ವಾಹನ ಸ್ಥಳಕ್ಕೆ ಬಂದರು 112 ವಾಹನದ ಅಡಿಗೆ ಹೋಗಿ ಪೊಲೀಸರನ್ನ ಹೈರಾಣು ಮಾಡಿದ್ದಾನೆ. ನಂತರ ಅಂಬ್ಯುಲೆನ್ಸ್ ಕರೆಯಿಸಿ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಕುಡಿತದ ಅಮಲಿನಲ್ಲಿ ಪದೇ ಪದೇ ಹೆಸರು ಬದಲಾಯಿಸಿದ್ದರಿಂದ ಆತನ ಹೆಸರು ನಿಖರವಾಗಿ ತಿಳಿದು ಬಂದಿಲ್ಲ. ರಾಯಲ್ ಆರ್ಕೆಡ್ ಬಳಿ ಟ್ರಾಫಿಕ್ ಜ್ಯಾಮ್ ಆಗುತ್ತಿದ್ದಂತೆ ಟ್ರಾಫಿಕ್ ಜಾಮ್ ಆಗಿದೆ.

ದೊಡ್ಡಪೇಟೆ ಪೊಲೀಸರು ಬರುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಕಾಲ್ಕಿತ್ತಿದ್ದಾರೆ. ಕುಡುಕ ಸುಮಾರು 2½ ಗಂಟೆ ಹೈಡ್ರಾಮಾ ನಡೆಸಿದ್ದಾರೆ. ಪೊಲೀಸರ ಮುಂದೆ ಕಾಯಿನ್ ನುಂಗುವುದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಾನೆ. ಕಷ್ಟಪಟ್ಟು ಮೆಗ್ಗಾನ್ ಗೆ ಕರೆತರಲಾಗಿದೆ.

ಇದನ್ನೂ ಓದಿ-https://suddilive.in/archives/3538

Related Articles

Leave a Reply

Your email address will not be published. Required fields are marked *

Back to top button