ಸ್ಥಳೀಯ ಸುದ್ದಿಗಳು

ಜೀ ಕಾರ್ಯಕ್ರಮ ನಡೆಯುತ್ತಿದ್ದ ಬಂಟರ ಭವನಕ್ಕೆ ನುಗ್ಗಿದ ಸಚಿವರ ಬೆಂಗಾವಲು ವಾಹನ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಬಿಜೆಪಿಯ ಮಾಹಶಕ್ತಿ ಸಂಕಲ್ಪ ಸಭೆ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪನವರ ಬೆಂಗಾವಲು ವಾಹನ ಒಳಗೆ ಹೋಗಿ ಅರಿವಾದ ಮೇಲೆ ವಾಪಾಸ್ ಹೋದ ಘಟನೆ ನಡೆದಿದೆ.

ಬಿಜೆಪಿಯ ಮಹಾಶಕ್ತಿ ಸಂಕಲ್ಪ ಸಭೆಯು ಗೋಪಾಳದ ಬಂಟರ ಭವನದಲ್ಲಿ ನಡೆಯುತ್ತಿತ್ತು.ಈ ವೇಳೆ ಉದ್ಘಾಟಕರಾಗಿ ಬಂದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಜೀ ಮಾತನಾಡುವ ವೇಳೆ ಸಚಿವರ ಬೆಂಗಾವಲು ವಾಹನ ಆಲ್ಕೋಳ ಸರ್ಕಲ್ ಕಡೆಯಿಂದ ಬಂದು ಒಳಗೆ ನುಗ್ಗಿತ್ತು.

ಬೆಂಗಾವಲು ವಾಹನದ ಹಿಂದೆ‌ ಇದ್ದ ಸಚಿವರ ಲ್ಯಾಂಡ್ ರೋವರ್ ಎಂಡೀವರ್ ವಾಹನ ಒಂದು ಕ್ಷಣ ಬಂಟರ ಭವನದ ಮುಂದೆ ನಿಂತು ಪಕ್ಕದ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ಕಡೆಗೆ ತೆರಳಿತು. ಮುಂದೆ ಇರಬೇಕಿದ್ದ ಬೆಂಗಾವಲು ವಾಹನ ಹಿಂಗಾವಲು ವಾಹನವಾಗಿತ್ತು.

ಸಾಯಿ ಇಂಟರ್ ನ್ಯಾಷನಲ್ ನಲ್ಲಿ ಕಾಂಗ್ರೆಸ್ ಸ್ನೇಹಿತರೆಲ್ಲ ಸೇರಿದ್ದು ಆ ವೇಳೆ ಸಚಿವರ ವಾಹನ ಬಂದಿದೆ. ಬಂಟರ ಭವನದ ಪಕ್ಕವೇ ಸಾಯಿ ಇಂಟರ್ ನ್ಯಾಷನಲ್‌ ಹೋಟೆಲ್ ಇದ್ದಿದ್ದರಿಂದ ಅಲ್ಲಿಗೆ ತೆರಳಬೇಕಿದ್ದ ಬೆಂಗಾವಲು ವಾಹನ ಸ್ವಲ್ಪ ಗೊಂದಲವಾಗಿ ಬಂಟರ ಭವನಕ್ಕೆ ತೆರಳಿದೆ. ಸುದ್ದಿಯಾಗಿದೆ.

ಇದನ್ನೂ ಓದಿ-https://suddilive.in/archives/13562

Related Articles

Leave a Reply

Your email address will not be published. Required fields are marked *

Back to top button