ಸ್ಥಳೀಯ ಸುದ್ದಿಗಳು

ಗೌರವ ಅರ್ಹರನ್ನು ಹುಡುಕಿಕೊಂಡು ಬರುತ್ತವೆ-ಸುಂದರೇಶ್

ಸುದ್ದಿಲೈವ್/ಹೊಳೆಹೊನ್ನೂರು

ಗೌರವ ಎಂಬುದು ಅರ್ಹರನ್ನು ಹುಡುಕಿಕೊಂಡು ಬರುತ್ತವೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.

ಸಮೀಪದ ಮಾರಶೆಟ್ಟಿಹಳ್ಳಿಯ ಮರಾಠ ಸಮುದಾಯ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್.ಎಲ್.ಷಡಾಕ್ಷರಿ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿ ಎಸ್ ಎಸ್‌ ನಿಂದ ಹಿಡಿದು ಕೃಷಿ ಪತ್ತಿನ ಸಹಕಾರ ಸಂಘ, ಕೆ ಎಂ ಎಫ್ ಮತ್ತು ಜಿಲ್ಲಾ ಡಿಸಿಸಿ ಬ್ಯಾಂಕ್ ವರೆಗೆ ಎಲ್ಲದರಲ್ಲೂ ತಮ್ಮ ಚಾಪನ್ನು ಮೂಡಿಸಿದ್ದಾರೆ.ಇವರ ಈ ಗಮನಾರ್ಹ ಸೇವೆಯನ್ನು ಗುರುತಿಸಿದ ರಾಜ್ಯ ಸರ್ಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗೌರವಗಳು ಲಭಿಸುವಂತಾಗಲಿ ಎಂದು ಹಾರೈಸಿದರು.

ರೈತರ ಅಡಿಕೆ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಸದಸ್ಯ ಡಿ.ಬಿ.ಹಳ್ಳಿ ಬಸರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಾಂತರ ಕ್ಷೇತ್ರದ ಅತೀ ಕ್ರಿಯಾಶೀಲ ರಾಜಕಾರಣಿ ಹೆಚ್.ಎಲ್.ಷಡಾಕ್ಷರಿ. ಅವರ ತಂದೆ ಹೆಚ್.ಎಲ್.ಲೋಕೇಶಪ್ಪ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳನ್ನು ಬೆಳೆಸಲು ತುಂಬಾ ಶ್ರಮಪಟ್ಟರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮಗ ಷಡಾಕ್ಷರಿ ಸಮರ್ಥವಾಗಿ ಮುನ್ನಡೆಸಿಕೊಂದು ಹೋಗುತ್ತಿದ್ದಾರೆ.

ಎಲ್ಲಾ ವರ್ಗದ, ಎಲ್ಲಾ ಸಮುದಾಯದ ಜನರ ಒಡನಾಡಿಯಾಗಿ, ಎಲ್ಲರಲ್ಲೂ ಬೆರೆತು ಜೊತೆಗೆ ಕೊಂಡೊಯ್ಯುವ ಗುಣ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಲು ಕಾರಣ ಎಂದರು. ಮುಂದೆ ಇವರನ್ನು ಕ್ಷೇತ್ರದ ಶಾಸಕರಾಗಿ ನೋಡುವ ಬಯಕೆ ಕ್ಷೇತ್ರದ ಜನರಿಗೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಹೆಚ್.ಎಲ್.ಷಡಾಕ್ಷರಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಬೆಳ್ಳಿಯ ಗಧೆ ನೀಡಿ ಸನ್ಮಾನಿಸಲಾಯಿತು. ವಿವಿಧ ಸಂಘಟನೆಗಳು, ಸ್ಥಳೀಯ ಲಯನ್ಸ್ ಕ್ಲಬ್ ಮತ್ತು ಸಂಘ ಸಂಸ್ಥೆಗಳಿಂದ ಸನ್ಮಾನ ಜರುಗಿತು.

ಕಾರ್ಯಕ್ರಮದಲ್ಲಿ ಮಾಜಿ ಎಂಎಲ್‌ಸಿ ಆರ್.ಪ್ರಸನ್ನ ಕುಮಾರ್, ನಿಕಟ ಪೂರ್ವ ಅಭ್ಯರ್ಥಿ ಡಾ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು, ಓಬಿಸಿ ಅಧ್ಯಕ್ಷ ಶ್ರೀನಿವಾಸ್, ಬಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಉಮೇಶ್, ಜಿಲ್ಲಾ ಎಸ್‌ಟಿ ಘಟಕದ ಅಧ್ಯಕ್ಷ ಕೆ.ಆರ್.ಶ್ರೀಧರ್, ಅರಬಿಳಚಿ ಗ್ರಾಪಂ ಅಧ್ಯಕ್ಷ ಶೇಖರಪ್ಪ, ಕಿರಣ್ ಮೋರೆ, ಪರಶುರಾಮ್. ತಿಪ್ಪೇಶ್ ರಾವ್, ಶಿವಲಿಂಗಪ್ಪ, ಕಗ್ಗಿ ಮಲ್ಲೇಶಪ್ಪ, ಕೆ.ಲೋಕೇಶ್, ಎ.ಎಮ್.ಮಲ್ಲಿಕಾರ್ಜುನ್, ಎನ್.ಟಿ.ಸಂಗನಾಥ್ ಕೇಶವ್ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ-https://suddilive.in/archives/4792

Related Articles

Leave a Reply

Your email address will not be published. Required fields are marked *

Back to top button