ರಾಷ್ಟ್ರೀಯ ಸುದ್ದಿಗಳು

ಉದ್ಘಾಟನಾ ಕಾರ್ಯಕ್ರಮಕ್ಕೆ ಪತ್ರಕರ್ತರನ್ನ ಆಹ್ವಾನಿಸಿ ಉದ್ಘಾಟಕರ ಭಾಷಣಕ್ಕೆ ಅವಕಾಶ ನೀಡದೆ ಹೊರಕಳುಹಿಸಿದ ಬಿಜೆಪಿ

ಸುದ್ದಿಲೈವ್/ಶಿವಮೊಗ್ಗ

ಪತ್ರಕರ್ತರನ್ನ ಹೊರಕಳುಹಿಸಿ ಬಿಜೆಪಿ ಜಿಲ್ಲಾ ಘಟಕ ಸಭೆ ನಡೆಸಿದೆ. ಈ ಮೊದಲಯ ವಾಟ್ಸಪ್ ಗ್ರೂಪ್ ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗಿಯಾದ ಪತ್ರಕರ್ತರನ್ನ ಹೊರಕಳುಹಿಸಿ ಸಭೆ ನಡೆಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಮಹಾಶಕ್ತಿ ಸಂಕಲ್ಪ ಸಭೆಯು ನಗರದ ಗೋಪಾಳಗೌಡ ಬಡಾವಣೆಯಲ್ಲಿಉವ ಭಟಂಟರ ಭವನದಲ್ಲಿ ನಡೆಯಿತು. ಸಭೆಯಲ್ಲಿ ಮೊದಲಿಗೆ ಮಾತನಾಡಿದ ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್ 4000 ಸಣ್ಣ ಸಣ್ಣ ಸಭೆ ನಡೆಸಲು ತೀರ್ಮಾನಿಸಲಾಗಿದೆ ಇದರಲ್ಲಿ 1600 ಸಭೆಗಳು ಮುಗಿದೆ ಎಂದರು.

1600 ಸಭೆ ನಡೆದಿದೆ ಏ. 21 ರಿಂದ ಮನೆ ಮನೆಗೆ ಕರಪತ್ರ ಹಂಚಿಕೆ ನಡೆಯಲಿದೆ, ಯಾಂತ್ರಿಕ ಮತದಾರರ ಸಂಪರ್ಕ ಈಗಾಗಲೇ ಆಗಿದೆ. ಗುಣಮಟ್ಟದ ಮತದಾರ ಭೇಟಿ ಆಗಬೇಕು. ಏ 28 ರಂದು ಮಹಾಸಂಪರ್ಕದ ಅಭಿಯಾನ ನಡೆಯಲಿದೆ ಎಙದರು.

ಮೇ 3,4 ಮಾದರಿ ಮತಯಾಚನೆ ನಡೆಯಲಿದೆ. 1500 ಸಣ್ಣ ಸಣ್ಣ ಸಭೆ ನಡೆಸಲಾಗುವುದು. ಸ್ಟಾರ್ ಪ್ರಚಾರಕರು, ರಾಷ್ಟ್ರಧ್ವಜದ ಸಭೆ ನಡೆಸಲಿದ್ದಾರೆ. ಅದರಂತೆ ಇಂದು ಅಣ್ಣಮಲೈ ಶಿವಮೊಗ್ಗದಲ್ಲಿ ನಡೆಸಲಿದ್ದಾರೆ ಎಂದರು.

ಈ ವೇಳೆ ಪತ್ರಕರ್ತರು ಉಪಸ್ಥಿತರಿದ್ದರು. ಆದರೆ ಬಿ.ಎಲ್ ಸಂತೋಷ್ ಮಾತನಾಡಬೇಕು ಅಷ್ಟರಲ್ಲಿ ಪತ್ರಕರ್ತರು ತೆರಳುವ ಸೂಚನೆಯನ್ನ ನೀಡಲಾಯಿತು. ಉಧ್ಘಾಟನೆಯನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉದ್ಘಾಟನೆ ನಾಡಲಿದ್ದಾರೆ. ಉದ್ಘಾಟನೆ ಭಾಷಣಕ್ಕೆ ಅವಕಾಶ ಮಾಡಿಕೊಡದೆ ಪತ್ರಕರ್ತರನ್ನ ಹೊರಗೆ ಕಳುಹಿಸಲಾಯಿತು.

ಇಂತಹ ಗೊಂದಲ ಮತ್ತು ಮಾಧ್ಯಮಗಳು ಬೇಡ ಅಂದ ಮೇಲೆ ಆಹ್ವಾನಿಸಿದ್ದು ಯಾಕೆ? ಇದಕ್ಕೂ ಬಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಆ ಕಾರ್ಯಕ್ರಮಕ್ಕೆ ಆಹ್ವಾನವಿರದಿದ್ದರೂ ಪತ್ರಕರ್ತರು ತೆರಳಿ ಸಭೆಯ ಫೊಟೊ ತೆಗೆದು ಸುದ್ದಿ ಮಾಡಲಾಗಿತ್ತು. ಆದರೆ ಮಾಧ್ಯಮದವರನ್ನ ಬಂಟರ ಭವನಕ್ಕೆ ಕರೆಯಿಸಿ ಉದ್ಘಾಟಕರ ಭಾಷಣದ ಸುದ್ದಿ ಮಾಡಲು ಅವಕಾಶ ನೀಡದೆ ಇರುವುದು ಅಪಮಾನಿಸಿದಂತೆ ಅಲ್ಲವೇ?

ಇದನ್ನೂ ಓದಿ-https://suddilive.in/archives/13558

Related Articles

Leave a Reply

Your email address will not be published. Required fields are marked *

Back to top button