ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಅಧ್ಯಕ್ಷರ ಮೇಲೆ ಅಟ್ಯಾಕ್-ಜಾತಿನಿಂದನೆ ಆರೋಪ

ಸುದ್ದಿಲೈವ್/ಭದ್ರಾವತಿ

ಅಂಬೇಡ್ಕರ್ ಸ್ವಾಭಿಮಾನಿ ಸಂಘದ ತಾಲೂಕು ಅಧ್ಯಕ್ಷರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಲ್ಲೆಯ ವಿಚಾರ ಜಾತಿನಿಂದನೆಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ..
ಗ್ರಾಮದ ಪ್ರಭಾವಿ ಮುಖಂಡರ ವಿರುದ್ಧ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಸಂಘಟನೆಯ ಅಧ್ಯಕ್ಷ ಯೋಗೀಶ್ ಎಂಬುವರ ಮೇಲೆ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಸಂಘಟನೆ ಮತ್ತು ಜಾತಿಯ ವಿರುದ್ಧ ಬೈದಿರುವ ಪ್ರಭಾವಿ ನಾಯಕರ ಕಡೆಯ ವ್ಯಕ್ತಿಗಳು ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.
ಗ್ರಾಮದಲ್ಲಿರುವ ಜಮೀನಿನಲ್ಲಿ ಅಲಿನೇಷನ್ ಮಾಡಿಸದೆ ನಿವೇಶನದಲ್ಲಿ ಎನ್ ಆರ್ ಐ ಜಿ ಯೋಜನೆಯ ಅಡಿ ಕೆಲಸಮುಗಿಸಲಾಗಿದ್ದು ಈ ನಿವೇಶನವನ್ನ ಹಂಚಲಾಗಿದೆ ಎಂದು ಆರೋಪಿಸಿ ಯುವಕ ಯೋಗೀಶ್ ಶಿವಮೊಗ್ಗದ ಜಿಪಂ ಮತ್ತು ಡಿಸಿಗೆ ಮನವಿ ಸಲ್ಲಿಸಿದ್ದರು. ಈ ಆರೋಪದ ಮೇಲೆ ಅಟ್ಯಾಕ್ ನಡೆದಿದೆ ಎಂದು ಹೇಳಲಾಗುತ್ತಿದೆ.
ಹಲ್ಲೆಗೊಳಗಾದ ಯೋಗೀಶ್ ಮೆಗ್ಗಾನ್ ಗೆ ದಾಖಲಿಸಲಾಗಿದೆ. ತಲೆಯ ಮೇಲೆ ಹಲ್ಲೆ ನಡೆದಿದೆ ಎನ್ಬಲಾಗಿದೆ. ಹಲ್ಲೆ ನಡೆಸಿರುವವರ ವಿರುದ್ಧ ಜಾತಿ ನಿಂದನೆಯ ಆರೋಪ ಕೇಳಿ ಬರುತ್ತಿದೆ.ವೀ ಘಟಬೆ ನಿನ್ನೆ ರಾತ್ರಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ಬೂ ಓದಿ-https://suddilive.in/2023/09/29/ಬಂದ್-ಗೆ-ಶಿವಮೊಗ್ಗದಲ್ಲಿ-ಇಲ/
