ಕಾಡಾನೆ ದಾಳಿಗೆ ಹಾನಿಗೊಳಗಾದ ಜಾಗಕ್ಕೆ ಶಾಸಕಿ ಶಾರದ ಪೂರ್ಯನಾಯ್ಕ್ ಭೇಟಿ

ಸುದ್ದಿಲೈವ್/ಶಿವಮೊಗ್ಗ

ತಾಲೂಕಿನ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳು ಬೆಳೆ ಹಾನಿ ಮಾಡಿದ ಜಮೀನುಗಳಿಗೆ ಶಾಸಕಿ ಶಾರದಾ ಪೂರ್ಯನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಮಂಜರಿಕೊಪ್ಪ, ಮಲೆ ಶಂಕರ ಸಂಪಿಗೆಹಳ್ಳ, ತಮ್ಮಡಿಹಳ್ಳಿ ಕೂಡಿ,ಎರೆಬೀಸು ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಷ್ಟಕ್ಕೀಡಾದ ರೈತರ ಅಹವಾಲು ಆಲಿಸಿದರು. ಅಡಿಕೆ ಮರಗಳನ್ನು ಮುರಿದು ಹಾಕಿರುವುದು, ಭತ್ತದ ಗದ್ದೆಗಳಲ್ಲಿ ಮನಸೋ ಇಚ್ಛೆ ಆನೆಗಳು ಓಡಾಡಿರುವುದು, ಮೆಕ್ಕೆ ಜೋಳದ ಹೊಲದಲ್ಲಿ ಓಡಾಡಿರುವುದರಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ ಎಂಬ ಮಾಹಿತಿಯನ್ನು ಸ್ಥಳೀಯ ನಿವಾಸಿಗಳು ಶಾಸಕರಿಗೆ ನೀಡಿದರು.
ಸ್ಥಳದಿಂದಲೇ ಮೊಬೈಲ್ ಮೂಲಕ
ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸಂಪರ್ಕಿಸಿದ ಶಾಸಕರು, ಆನೆಗಳನ್ನು ಅರಣ್ಯಕ್ಕೆ ಓಡಿಸಬೇಕು.ಇಲ್ಲವೇ ಜಮೀನುಗಳಿಗೆ ನುಗ್ಗಿ ಬೆಳೆನಷ್ಟ ಮಾಡದಂತೆ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡಲು ಕ್ರಮ ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ರೈತರು ಹಾಗೂ ಸ್ಥಳಿಯ ಮುಖಂಡರು ಇದ್ದರು.
ಇದನ್ನೂ ಓದಿ-https://suddilive.in/archives/3324
