ರಾಗಿಗುಡ್ಡಕ್ಕೆ ಬರಬೇಕಿದ್ದ ಪ್ರಮೋದ್ ಮುತಾಲಿಕ್ ಗೆ ಮಾಸ್ತಿಕಟ್ಟೆಯಲ್ಲೇ ತಡೆದು ನೋಟೀಸ್

ಸುದ್ದಿಲೈವ್/ಶಿವಮೊಗ್ಗ

ಇಂದು ರಾಗಿಗುಡ್ಡಕ್ಕೆ ಭೇಟಿ ನೀಡಬೇಕಿದ್ದ ಹಿಂದೂ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಅವರನ್ನ ಜಿಲ್ಲಾ ಪೊಲೀಸರು ತಡೆದು ನೇರವಾಗಿ ದಾವಣಗೆರೆ ಜಿಲ್ಲೆಗೆ ಬಿಟ್ಟು ಬಂದಿದ್ದಾರೆ.
ರಾಗಿಗುಡ್ಡದಲ್ಲಿ ಅ.1 ರಂದು ಈದ್ ಮೆರವಣಿಗೆ ಕಾಲದಲ್ಲಿ ಉಂಟಾದ ಕಲ್ಲುತೂರಾಟದಿಂದಾಗಿ ಸೆಕ್ಷನ್ 144 ಇನ್ನೂ ಜಾರಿಯಲ್ಲಿದೆ. ಸೆಕ್ಷನ್ 144 ಹಿನ್ನಲೆಯಲ್ಲಿ ಪ್ರಮೋದ್ ಮುತಾಲಿಕ್ ರಿಗೆ ಜಿಲ್ಲಾ ಪೊಲೀಸರು ಮಾಸ್ತಿಕಟ್ಟೆ ಪ್ರವೇಶಿಸುತ್ತಿದ್ದಂತೆ ನೋಟೀಸ್ ನೀಡಲಾಗಿದೆ.
ಉಡುಪಿ ಜಿಲ್ಲೆಯಿಂದ ಇಂದು ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲ್ಲುತೂರಾಟದಿಂದ ಹಾನಿಗೊಳಗಾದ ಮನೆಗಳಿಗೆ ಮುತಾಲಿಕ್ ಭೇಟಿ ನೀಡಿಲಿದ್ದರು. ಆದರೆ ತಡರಾತ್ರಿ ಮುತಾಲಿಕ್ ರಿಗೆ ನಗರ ಪೊಲೀಸ್ ಠಾಣೆ ಪೊಲೀಸರು ನೋಟೀಸ್ ನೀಡಿ ಭೇಡಿ ನೀಡದಂತೆ ಸೂಚನೆ ನೀಡಲಾಗಿದೆ.
ಗಲಭೆ ನಡೆದ ರಾಗಿಗುಡ್ಡದಲ್ಲಿ ಇನ್ನೂ ಸೆಕ್ಷನ್ 144 ಜಾರಿಯಿದ್ದ ಕಾರಣ ಅವರಿಗೆ ಭೇಟಿ ನೀಡದಂತೆ ಸೂಚನೆ ನೀಡಿ ದಾವಣಗೆರೆ ಜಿಲ್ಲೆಗೆ ಎಸ್ಕಾರ್ಟ್ ಮೂಲಕ ಬಿಡಲಾಗಿದೆ. ಅ.7 ರಂದು ಅರುಣ್ ಕುಮಾರ್ ಪುತ್ತಿಲರಿಗೆ ಭೇಟಿ ನೀಡಲು ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ-https://suddilive.in/archives/1430
