ಸ್ಥಳೀಯ ಸುದ್ದಿಗಳು

ಈಶ್ವರಪ್ಪನವರ ರಾಜಕೀಯ ಗಂಡಸುತನಕ್ಕೆ ಅಯನೂರು ಸವಾಲು

ಸುದ್ದಿಲೈವ್/ಶಿವಮೊಗ್ಗ

ಮಾಜಿ ಡಿಸಿಎಂ ಈಶ್ವರಪ್ಪ ಎಂಟೆದೆಯ ಗಂಡೇ ಅಲ್ಲ. ನಾಳೆ ರಾಷ್ಟ್ರಭಕ್ತರ ಸಭೆಯ ಬಳಿಕ ಬಿಎಸ್ ವೈ ನಮ್ಮ ಅಣ್ಣ ಎಂದು ಘೋಷಿಸದಿದ್ದರೆ ನೋಡಿ ಎಂದು ಆಯನೂರು ಮಂಜುನಾಥ ಸವಾಲು ಎಸೆದಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಬಂಡಾಯ ಅಭ್ಯರ್ಥಿ ಎಂದು ಘೋಷಿಸಿದರೆ ಅವರಿಗೆ ನನ್ನ ಓಟು ಸೀಮಿತವಾಗಿದೆ. ಈಶ್ವರಪ್ಪನವರಿಗೆ ಕಾಂಗ್ರೆಸ್ ನಿಂದ ಟಿಕೇಟ್ ಕೈ ತಪ್ಪಿಲ್ಲ. ಅವರ ಸ್ಥಾನ ಅವರೇ ಕಳೆದುಕೊಂಡಿದ್ದಾರೆ. ಶೇ.40 ರಷ್ಟು ಭ್ರಷ್ಠಾಚಾರದ ಆಪಾದನೆಯಲ್ಲಿ ಪುತ್ರನ ಪಾತ್ರವೂವಿದ್ದ ಕಾರಣ ಅವರಿಗೆ ಟಿಕೆಟ್ ಕೈ ತಪ್ಪಿದೆ. ರಾಷ್ಟ್ರಭಕ್ತರ ಬಳಗ ಸಭೆಯಲ್ಲಿ ಈಶ್ವರಪ್ಪ ಬಂಡಾಯದ ಮಾತು ಮೊಳಗಿದರೆ ಅವರನ್ನ ಗಂಡಸು ಎಂದು ಒಪ್ಪಿಕೊಳ್ಳುವೆ ಎಂದು ಸವಾಲು ಹಾಕಿದರು.

ಯಾವೋದೋ ಸ್ಥಾನ ಪಡೆಯಲು ಈಶ್ವರಪ್ಪ ನಾಟಕವಾಡಿದ್ದಾರೆ. ಅವರು ಪಕ್ಷೇತರವಾಗಿ ಸ್ಪರ್ಧಿಸಿದರೆ ನಾನೇ ಮೊದಲು ಹಾರಹಾಕುವೆ. ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಈಶ್ವರಪ್ಪರಿಗೆ ಎದೆಗಾರಿಕೆಯೇ ಇಲ್ಲ. ರಾಜಕೀಯವಾಗಿ ಅವರಿಗೆ ಅಂತಹ ಗಂಡಸಲ್ಲ. ಕಾಂಗರೋ ಅದರ ಮರಿಯನ್ನ ರಕ್ಷಣೆ ಮಾಡಲು ಹೋರಾಡುವ ಹಾಗೆ ಅವರ‌ ಮಗನಿಗಾಗಿ ಹೋರಾಡುತ್ತಿದ್ದಾರೆ ಎಂದರು.

ಅವರು ಶಿವಮೊಗ್ಗಕ್ಕೆ ಮಾತ್ರ ಸೀಮಿತರಾಗಿದ್ದರಿಂದ ಮಾಡಿದ್ದುಣ್ಣೋ ಮಹಾರಾಯ ಎಂಬಂತರಾಗಿದ್ದಾರೆ. ರಾಜಕೀಯ ಚುನಾವಣೆಯ ಹೇಡಿ ಆಗಿದ್ದಾರೆ ಈಶ್ವರಪ್ಪನವರಾಗಿದ್ದಾರೆ. ಮಾ.15 ರಂದು ನಡೆಯುವ ರಾಷ್ಟ್ರಬಳಗದ ಸಭೆಯಲ್ಲಿ ಅವರ ಸುದ್ದಿಗೋಷ್ಠಿಯಲ್ಲಿದ್ದ ಶಾಸಕರು ಜಿಲ್ಲಾಧ್ಯಕ್ಷರು ಭಾಗಿಯಾಗುತ್ತಾರೊ ನೋಡಿ ಎಂದು ಸವಾಲು ಎಸೆದಿದ್ದಾರೆ.

ಕಾಂತೇಶ್ ಗೆ ಜಿಪಂ ಕ್ಷೇತ್ರ ಗೆಲ್ಲಿಸಿಕೊಂಡು ಬಂದಿದ್ದು ನಾನು. ಆ ಹುಡುಗನ ಪರ ಬಿಎಸ್ ವೈ ಪ್ರಚಾರ ಮಾಡದಿದ್ದರಿಂದ ಹೊಳಲೂರು ಜಿಪಂ ಕ್ಷೇತ್ರ ಗೆಲ್ಲುವಂತಾಗಿತ್ತು. ಇಲ್ಲವಾದರೆ ಆತ ಅದನ್ನೂ ಗೆಲ್ಲುತ್ತಿರಲಿಲ್ಲ. ನಾಳೆ ನಡೆಯುವ ಮೋದಿ ಕಾರ್ಯಕ್ರಮದಲ್ಲಿ ಅವರ  ಕಾಲಿಗೆ  ಬಿದ್ದು ಬಾರದಿದ್ದರೆ ನೋಡಿ ಎಂದು ಮತ್ತೋಂದು ಸವಾಲು ಎಸೆದಿದ್ದಾರೆ. ಕೆಎಸ್ ಆರ್ ಟಿಸಿ ಉದ್ಘಾಟನೆಯ ವೇಳೆ ಬಿಎಸ್ ವೈ ವಿರುದ್ಧ ಮಾತನಾಡಿದ್ದ ಈಶ್ವರಪ್ಪ ವೇದಿಕೆ ಮೇಲೆ ನಮಸ್ಕರಿಸಿದ್ದರು. ಯುದ್ದವೇ‌ನಡೆಯಲಿದೆ ಎಂದು ಕೊಂಡಿದ್ವಿ. ಏನೂ ಆಗಲೇ ಇಲ್ಲ ಎಂದರು.

ಹಾಗಾಗಿ ಅವರಿಂದ ಬಂಡಾಯ ಸ್ಪರ್ಧೆಯ ನಿರೀಕ್ಷಿಸುವುದು ಕಷ್ಟ. ಯಾವುದೇ ಕಾರಣಕ್ಕೂ ಸ್ಪರ್ಧಿಸುವುದು ಅವರು ಕಷ್ಟ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/10682

Related Articles

Leave a Reply

Your email address will not be published. Required fields are marked *

Back to top button