ರಾಜಕೀಯ ಸುದ್ದಿಗಳು

ಸಂಸದ ರಾಘವೇಂದ್ರ ಅವರ ಹೆಸರಿನಲ್ಲಿ ಎಷ್ಟಿದೆ ಆಸ್ತಿ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಚುನಾವಣೆಗೆ ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಬಿ.ವೈ.ರಾಘವೇಂದ್ರ ಅವರ ಗಳಿಕೆ‌, ಆಸ್ತಿ, ಏನೇನು ಹೊಂದಿದ್ದಾರೆ ಎಂಬುದಕ್ಕೆ ಅವರ‌ ಸಲ್ಲಿರುವ ಅಫಿಡೆವಿಟ್ ನಲ್ಲಿ ಹೀಗಿದೆ.

ಚುನಾವಣಾ ಆಯೋಗಕ್ಕೆ ಆಸ್ತಿ ವಿವರವನ್ನ ಅಫಿಡವಿಟ್ ನಲ್ಲಿ ಸಲ್ಲಿಸಿರುವ  ಬಿ.ವೈ.ರಾಘವೇಂದ್ರ ಹಾಗೂ ಅವರ ಪತ್ನಿ ತೇಜಸ್ವಿನಿ ಹೆಸರಿನಲ್ಲಿರುವ ಆಸ್ತಿ ವಿವರ ಹೀಗಿದೆ. ಒಟ್ಟು 73.71 ಕೋಟಿ ಮೌಲ್ಯದ ಆಸ್ತಿ ವಿವರದ ಅಫಿಡವಿಟ್ ನಲ್ಲಿ ರಾಘವೇಂದ್ರ ಸಲ್ಲಿಸಿದ್ದೇನೆ.

ತಮ್ಮ ಬಳಿ 33,291 ರೂ. ನಗದು, ಎಫ್ ಡಿ 98,01,123 ರೂ. ಶೇರು ಮತ್ತು ಎಫ್ ಡಿಯ ರೂಪದಲ್ಲಿ 8,13,53,738 ರೂ. ಸಾಲ 20,39,74,798 ರೂ ನಷ್ಟಿದೆ, ಚಿನ್ನಾಭರಣ, 98,83,650 ರೂ ಮೌಲ್ಯ, ಇತರೆ ಬೆಲೆಬಾಳುವ ಆಸ್ತಿ ಅಥವಾ ವಸ್ತುಗಳು 14 ಲಕ್ಷ ರೂ ಮೌಲ್ಯ, ವಾಹನಗಳು 44,77,700, ಫಿಕ್ಸಡ್ ಅಸೆಟ್ಸ್ ಈಗಿನ‌ ಮೌಲ್ಯದಲ್ಲಿ 29,73,72,967 ರೂ ಇದೆ. ಒಟ್ಟು 60,82,97,267 ರೂ ಆಸ್ತಿ ಹೊಂದಿದ್ದಾರೆ.

ಅದೇ ರೀತಿ 9.39 ಲಕ್ಷ ರೂ ನಗದು ಹೊಂದಿರುವ ರಾಘವೇಂದ್ರ ಪತ್ನಿ ತೇಜಸ್ವಿನಿ ಹೆಸರಿನಲ್ಲಿ ಎಫ್ ಡಿ 25,65,577 ರೂ. 1,32,59,487 ರೂ. ಶೇರು ಮತ್ತು ಮ್ಯೂಚ್ಯುವಲ್ ಫಂಡ್ ಹೊಂದಿದ್ದಾರೆ. ಸಾಲ 2,50,000 ರೂ, 1,13,73,125 ರೂ. ಆಭರಣಗಳನ್ನ ಹೊಂದಿದ್ದಾರೆ. 12 ಲಕ್ಷ ರೂ. ಇತರೆ ಬೆಲೆಬಾಳುವ ವಸ್ತು ಹಾಗೂ ಆಸ್ತಿ ಇದೆ. ಯಾವುದೇ ವಾಹನವನ್ನ ಇವರ ಹೆಸರಿನಲ್ಲಿ ತೋರಿಸಿಲ್ಲ. 21,79,78,549 ರೂ.ವಿನ ಫಿಕ್ಸ್ಡ್ ಅಸೆಟ್ಸ್ ಎಂದು ತೋರಿಸಲಾಗಿದೆ. ಒಟ್ಟು ಪತ್ನೆ ಹೆಸರಿನಲ್ಲಿ 24,25,65,847 ಆಸ್ತಿ ಇದೆ.

ವಿವಿಧ ಬ್ಯಾಂಕ್ ಗಳಲ್ಲಿ 13 ಖಾತೆಗಳನ್ನ ಹೊಂದಿರುವ ಅಭ್ಯರ್ಥಿ ಬಿ.ವೈ.ಆರ್. 13 ಅಕೌಂಟ್ ಗಲ್ಲಿ 98.01 ಲಕ್ಷ ರೂ. ಹಣ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಪತ್ನಿ ತೇಜಸ್ವಿನಿ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ 08 ಅಕೌಂಟ್ ಹೊಂದಿದ್ದಾರೆ. 8 ಅಕೌಂಟ್ ನಲ್ಲಿ 25.65 ಲಕ್ಷ ರೂ. ಹಣ ಹೊಂದಿರುವುದಾಗಿ ಘೋಷಿಸಲಾಗಿದೆ.

ಸುಮಾರು 15 ಕಂಪನಿಗಳಲ್ಲಿ 7.68 ಕೋಟಿ ಹೂಡಿಕೆ ಮಾಡಿರುವ ಸಂಸದರು ತಮ್ಮ ಪತ್ನಿಯ ಹೆಸರಿನಲ್ಲಿ 6 ಕಂಪನಿಯಲ್ಲಿ 1.22 ಕೋಟಿ ಹೂಡಿಕೆ ಮಾಡಿದ್ದಾರೆ. ಪತ್ನಿ ತೇಜಸ್ವಿನಿ, ಸಹೋದರ ವಿಜಯೇಂದ್ರ ಹಾಗೂ ಮಕ್ಕಳಾದ ಶುಭಾಷ್ ಮತ್ತು ಭಗತ್ ಗೆ ಸಾಲ ನೀಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ವಿಜಯೇಂದ್ರಗೆ 85 ಲಕ್ಷ ರೂ ಹಾಗೂ ಪತ್ನಿ ತೇಜಸ್ವಿನಿಗೆ 5.4 ಕೋಟಿ ಸಾಲ ನೀಡಿದ್ದಾರೆ.

ಜೊತೆಗೆ ಪುತ್ರ ಭಗತ್ ಗೆ 65 ಲಕ್ಷ ಹಾಗೂ ಸುಭಾಷ್ ಗೆ 85 ಲಕ್ಷ ಸಾಲ ನೀಡಿದ್ದಾರೆ. ಸಂಬಂಧಿಗಳು ಹಾಗೂ ವಿವಿಧ ಕಂಪನಿಗೆ ಒಟ್ಟು 20.39 ಕೋಟಿ ಸಾಲ ನೀಡಿದ್ದಾರೆ. ಅಂಬಾಸಿಡರ್ , ಟ್ರಾಕ್ಟರ್ ಹಾಗೂ ಟಯೋಟಾ ಫಾರ್ಚೂನರ್ ಕಾರು ಹೊಂದಿರುವುದಾಗಿ ರಾಘವೇಂದ್ರ ಘೋಷಿಸಿಕೊಂಡಿದ್ದಾರೆ.

ಜೊತೆಗೆ 1021.50 ಗ್ರಾಂ ಚಿನ್ನ, 8.6 ಕೆ.ಜಿ ಬೆಳ್ಳಿ, 116.26 ಕ್ಯಾರೆಟ್ ವಜ್ರ ಮತ್ತು 42 ಕ್ಯಾರೆಟ್ ಬೆಲೆಬಾಳುವ ಹರಳು ಹೊಂದಿರುವ ಬಿವೈಆರ್ಅದೇ ರೀತಿ 1395.92 ಗ್ರಾಂ ಚಿನ್ನ, 5.1 ಕೆ.ಜಿ ಬೆಳ್ಳಿ ಹೊಂದಿರುವ ತೇಜಸ್ವಿನಿ  96.022 ಕ್ಯಾರೆಟ್ ವಜ್ರ ಹೊಂದಿರುವುದಾಗಿ ಘೋಷಿಸಿದ್ದಾರೆ.

ರಾಘವೇಂದ್ರ ಅವರು 69.39 ಲಕ್ಷ ರೂ. ಸಾಲ ಹೊಂದಿದ್ದರೆ,  12.91 ಕೋಟಿ ಸಾಲವನ್ನ ಪತ್ನಿ ತೇಜಸ್ವಿನಿ ಮಾಡಿದ್ದಾರೆ. ಒಟ್ಟು 55.85 ಕೋಟಿ ರೂ. ಮೌಲ್ಯದ ಸ್ಥಿರ ಹಾಗೂ ಚರಾಸ್ತಿಯನ್ನ  ರಾಘವೇಂದ್ರ ಹೊಂದಿದ್ದರೆ. 17.86 ಕೋಟಿ ರೂ. ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿರುವ ಪತ್ನಿ ತೇಜಸ್ವಿನಿ ಹೆಸರಿನಲ್ಲಿ ಘೋಷಿಸಿದ್ದಾರೆ.

ಇದನ್ನೂ ಓದಿ-https://suddilive.in/archives/13122

Related Articles

Leave a Reply

Your email address will not be published. Required fields are marked *

Back to top button