ರಾಜಕೀಯ ಸುದ್ದಿಗಳು

ಜೆಡಿಎಸ್ ಮತ್ತು ಬಿಜೆಪಿಯ ಜಂಟಿ ಪತ್ರಿಕಾಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ

ಜೆಡಿಎಸ್ ನೊಂದಿಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಆದ ನಂತರ ಸಮನ್ವಯ ಸಮಿತಿ ರಾಜ್ಯಮಟ್ಟದಲ್ಲಿ ರಚನೆ ಆಗಿರಲಿಲ್ಲ. ಈಗ ಆಗಿದೆ ಎಂದು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದರು.

ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಎಂಬುದ ಕರಪತ್ರಗಳಲ್ಲಿ ಇರುತ್ತದೆ. ಚಿಹ್ನೆ ಬಿಜೆಪಿದು ಇರುತ್ತದೆ  ಎಂದರು.

ಮತಯಾಚನೆಗೆ ಜೆಡಿಎಸ್ ಮತ್ತು ಬಿಜೆಪಿ ಮನೆ ಮನೆಗೆ ಹೋಗಿ ಪ್ರಚಾರ ಮಾಡ್ತೀವಿ. 10 ಜನ ಜೆಡಿಎಸ್ ಮತ್ತು 10 ಜನ ಬಿಜೆಪಿ ಸದಸ್ಯರು ಸಮನ್ವಯ ಸಮಿತಿಯಲ್ಲಿರುತ್ತಾರೆ. ಈಗಾಗಲೆ ಸಭೆಯನ್ನ ನಡೆಸಲಾಗಿದೆ. ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಮಾಡಲಾಗುವುದು.  ಎಂದರು.

ಲೋಕಸಭಾ ಚುನಾವಣೆಗೆ ಮಾತ್ರ ಮೈತ್ರಿ ಸೀಮಿತನಾ ಅಥವಾ ಮುಂದಿನ ಚುನಾವಣೆಗೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರಘುಪತಿ ಭಟ್, ಇದು ಕಾರ್ಯಕರ್ತರು ಮತ್ತು ನಾಯಕರ ನಡುವಿನ‌ ಹೊಂದಾಣಿಕೆ ಆಗಿವೆ. ಮತದಾರರಿಗೆ ಗೊಂದಲವಿಲ್ಲ ಎಂದರು.

ಗ್ರಾಮಾಂತರ ಪ್ರಭಾರಿಯಾಗಿ ಡಾ.ಧನಂಜಯ್ ಸರ್ಜಿ ಇರುತ್ತಾರೆ. ಗ್ರಾಮಾಂತರದಲ್ಲಿ ರಾಘವೇಂದ್ರರನ್ನ ಅತಿ ಹೆಚ್ಚು ಮತ ಗಳಿಸುವ ಉದ್ದೇಶವಿದೆ. ಬೂತ್ ಮಟ್ಟಕ್ಕೆ ತೆರಳಿ ಸಮನ್ವಯತೆಯಲ್ಲಿನಡೆಸಲು ಪ್ರಯತ್ನಿಸಲಾಗುತ್ತಿದೆ.

ಹಿಂದೆ ಸಮಸನ್ವಯ ಕೊರತೆ ಇತ್ತು. ಈಗ ಸಮನ್ವಯ ಸಮಿತಿ ರಚನೆಯಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ನಡುವೆ ಗ್ರಾಮಾಂತರದಲ್ಲಿ ಫೈಟ್ ಇದೆ. ಭಿನ್ನಾಭಿಪ್ರಾಯವನ್ನ ತಗ್ಗಿಸಿ ಸಮನ್ವಯತೆಯಲ್ಲಿ ಹೋಗಲು ತೀರ್ಮಾನಿಸಲಾಗಿದೆ ಎಂದರು.

ಶಾಸಕಿ ಶಾರದ ಪೂರ್ಯಾನಾಯ್ಕ್ ಮಾತನಾಡಿ, ಶಿವಮೊಗ್ಗ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿಯೊಂದಿಗೆ ಹೊಙದಾಣಿಕೆಯಲ್ಲಿ ತೆರಳಲಾಗುವುದು. ಪ್ರಧಾನಿಯೊಂಸಿಗೆ ವೇದಿಕೆ ಹಂಚಿಕೊಂಡಿದ್ದೀವಿ. ಹರಿಗೆ ವಾರ್ಡ್ ನಿಂದ ನಿನ್ನೆ ಭೇಟಿ ನೀಡಿ ಪ್ರಚಾರ ಮಾಡಿದ್ದೇವೆ ಎಂದರು.

ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ರಾಘವೇಂದ್ರ ಇರುತ್ತಾರೆ. ಗ್ರಾಮಾಂತರ ಭಾಗದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇರುವುದಿಲ್ಲ ಎಂದರು.

ಎಂಎಲ್ ಸಿ ಭೋಜೇಗೌಡ ಮಾತನಾಡಿ, ಸಂಪ್ರದಾಯ ವೈರಿಗಳಾಗಿದ್ದರೂ ಉತ್ತಮ ಸರ್ಕಾರ ನೀಡಿದ ಸರ್ಕಾರ ಕುಮಾರಸ್ವಾಮಿ ಮತ್ತು ಬಿಎಸ್ ವೈ ಅಧಿಕಾರವಿದ್ದಾಗ ಎಂಬುದು ಜನರಿಗೆ ಗೊತ್ತಿದೆ. ಐದು ಪರ್ಸೆಂಟ್ ಗೊಂದಲವಿರಬಹುದು. ಆದರೆ ಈ ಹೊಂದಾಣಿಕೆಯ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ನಡೆದಿದೆ. ಜಿಲ್ಲಾಧ್ಯಕ್ಷರು ಪತ್ರ ನೀಡಿದ ನಂತರ ಹೊಂದಾಣಿಕೆ ಆಗಿದೆ ಎಂದರು.

ಮಾಜಿ ಶಾಸಕ ಕೆಬಿ ಅಶೋಕ್ ನಾಯ್ಕ್ ಮಾತನಾಡಿ, ವಾರಕ್ಕೆ ಎರಡು ಸಮನ್ವಯ ಸಮಿತಿ ನಡೆಸಲಿದ್ದೇವೆ. ಭಿನ್ಬಾಭಿಪ್ರಾಯಗಳಿದ್ದರೆ ಸಮನ್ವಯ ಸಮಿತಿಯಲ್ಲಿ ಬಗೆಹರಿಸಲಾಗುತ್ತದೆ. ಮುಂದೆ ಮತ್ತೆ ಹೊಂದಾಣಿಕೆಯಲ್ಲಿ ಸಾಗಿಸಲಾಗುವುದು ಎಂದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಕೆ.ಬಿ.ಪ್ರಸನ್ನ ಕುಮಾರ್, , ಜಗದೀಶ್, ಕಾಂತರಾಜ್, ವಿನ್ಸೆಂಟ್ ರೋಡ್ರಿಗಸ್, ವಿರುಪಾಕ್ಷಪ್ಪ ಡಾ.ಧನಂಜಯ ಸರ್ಜಿ, ಕಡಿದಾಳ್ ಗೋಪಾಲ್, ದೀಪಕ್ ಸಿಂಗ್, ಸೋಮಿನಕೊಪ್ಪ ಕಾಂತರಾಜು ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/11849

Related Articles

Leave a Reply

Your email address will not be published. Required fields are marked *

Back to top button