ರಾಜಕೀಯ ಸುದ್ದಿಗಳು

ವಿಮಾನ ನಿಲ್ದಾಣದ ಕುರಿತು ಸಚಿವ ಮಧು ಬಂಗಾರಪ್ಪ‌ ಆಕ್ಷೇಪ!

ಸುದ್ದಿಲೈವ್/ಶಿವಮೊಗ್ಗ

ನಾನು ಭಾಗ್ಯವಂತ,  ಪುಣ್ಯ ಮಾಡಿದ್ದೀನಿ ಸಿಎಂಗಳು ಮತ್ತು ಸಚಿವರು ನಿಂತು ಧ್ವಜಾರೋಹಣ ಮಾಡಿರುವ ಜಾಗದಲ್ಲಿ ಇಂದು ನಾನು ಧ್ವಜಾರೋಹಣ ಮಾಡಿರುವುದು ಸಂತೋಷ ತಂದಿದೆ. ಇದು ನನ್ನ ಎರಡನೇ ಬಾರಿಯ ಧ್ವಜಾರೋಹಣ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಅವರು ಮಾಧ್ಯಮಗಳಿಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದಿದೆ. ನೂನ್ಯತೆಗಳು ಇವೆ. ಅದರ ಜೊತೆಗೆ ಸಮರ್ಪಕವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಸುಭದ್ರ ಆಡಳಿತ ನೀಡಿದ್ದಾರೆ. ರಾಜ್ಯದಲ್ಲಿ ಐದು ಗ್ಯಾರೆಂಟಿಗಳನ್ನ ಸರ್ಕಾರ ಸಮರ್ಪಕವಾಗಿ ಅನುಷ್ಠಾನ ಮಾಡಿದೆ. ನುಡಿದಂತೆ  ನಡೆದುಕೊಂಡಿದ್ದೇವೆ ಎಂದರು.

ಪ್ರನಾಳಿಕೆಯ ಉಪಾಧ್ಯಕ್ಷರಾಗಿದ್ದೆ. ಪ್ರನಾಳಿಕೆಯ ಬಹತೇಕ ಗ್ಯಾರೆಂಟಿ ಜಾರಿ ನೀಡಲಾಗಿದೆ. ಶಿವಮೊಗ್ಗ ಏರ್ ಪೋರ್ಟ್ ನಿರ್ಮಾಣದಲ್ಲಿ ನೂನ್ಯತೆ ಇದೆ ತನಿಖೆಯಾಗಬೇಕಿದೆ. ಇದರ ಬಗ್ಗೆ ಮತ್ತೊಂದು ದಿನ ಚರ್ಚಿಸೋಣ, ಹಾಗೆ ಸ್ಮಾರ್ಟ್ ಸಿಟಿಯೋಜನೆ ತನಿಖೆ ಆಗಬೇಕಿದೆ. ಶಿವಮೊಗ್ಗದ ಅಭಿವೃದ್ಧಿಗೆ ಹಲವು ಕ್ರಮ‌ ಜರುಗಿಸಬೇಕಿದೆ. ಅದರಂತೆ ರೈಲ್ವೆಯ ಸಂಖ್ಯೆ ಹೆಚ್ಚಿಸಲಾಗುವುದು. ವಿಮಾನಗಳ ಸೌಕರ್ಯ ಹೆಚ್ಚಿಸಬೇಕಿದೆ ಎಂದು ಹೇಳಿದರು.

ಜಿಲ್ಲೆ ಪ್ರವಾಸೋದ್ಯಮವನ್ನೂ ಅಭಿವೃದ್ಧಿ‌ ಮಾಡಬೇಕಿದೆ.  ಅದನ್ನ ಮುನ್ನೆಲೆಗೆ ತರಲು ಅನೇಕ ಶ್ರಮ ವಹಿಸಬೇಕಿದೆ. ನೂರಾರು ಕೋಟಿ ವೆಚ್ಚದಲ್ಲಿ ಜೋಗ, ಸಕ್ಕರೆ ಬೈಲು, ಗುಡವಿ ಪಕ್ಷಿದಾಮ ಅಭಿವೃದ್ಧಿ ಪಡಿಸಬೇಕಿದೆ.  ಸಾಂಸ್ಕೃತಿಕ ನಾಯಕ ಎಂದು ಬಸಣ್ಣರನ್ನ ಸರ್ಕಾರ ಘೋಷಿಸಲಾಗಿದೆ. ಆತನ‌ ಸಂಸತ್ ನಲ್ಲಿ ಅಲ್ಲಮ ಪ್ರಭು ನಮ್ಮ ಜಿಲ್ಲೆಯವರು. ಹಾಗಾಗಿ ಆತನ ಜನ್ಮ ಸ್ಥಳದ ಅಭಿವೃದ್ಧಿಯನ್ನೂ ಮಾಡಬೇಕಿದೆ.‌ ಹಾಗಾಗಿ ಶಿವಮೊಗ್ಗದ ಟೂರಿಸಂಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು.

ಕೈಗಾರಿಕೋದ್ಯಮವನ್ನ ಹೆಚ್ಚು ಅಭಿವೃದ್ಧಿ ಮಾಡಬೇಕಿದೆ. ಇನ್ ಫ್ರಸ್ಡ್ರಾಕ್ಚರ್ ನೀಡುವ ಬಗ್ಗೆ ಸಚಿವರ ಜೊತೆ ಚರ್ಚಿಸಲಾಗುವುದು ಹಾಸ್ಪಿಟಾಲಿಟಿ, ಇಂಡಸ್ಟ್ರೀಯಲ್ ಮತ್ತು ಟೂರಿಸಂ ಅಭಿವೃದ್ಧಿ ಮಾಡುವ ಬಗ್ಗೆ ಗುರಿಹೊಂದಲಾಗಿದೆ. ಟೂರಿಸಂ ಡೆವೆಲಪ್ ಮೆಂಟ್ ಗೆ ಎಕ್ಸಿಬಿಷನ್ ಮಾಡಲಾಗುವುದು ಎಂದರು.

ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ತರಲಾಗುವುದು. ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನ‌ಸೊರಬ ಆನವಟ್ಟಿ ಕುಂಸಿಯ ಭಾಗದಲ್ಲಿ ನೆರವೇರಿಸಲಾಗುವುದು. ಶರಾವತಿ ನೀರನ್ನ ಬೆಂಗಳೂರಿಗೆ ಕಳುಹಿಸುವ ಬಗ್ಗೆನೂ‌ಪ್ರತಿಕ್ರಿಯಿಸಿದ ಸಚಿವರು, ಶಿವಮೊಗ್ಗ ಜಿಲ್ಲೆಯಿಂದ ಲಿಫ್ಟ್ ಮಾಡುವ ಬಗ್ಗೆ ಸ್ಥಳೀಯರ ಮನದಾಳವನ್ನ ಗೌರವಿಸಿ ನಂತರ ಮುಂದುವರೆಯಲಾಗುವುದು ಎಂದರು.

ವಿದ್ಯುತ್ ಮತ್ತು ಕುಡಿಯುವ ನೀರಿಗೆ ಶರಾವತಿ‌ ನದಿಯ ನೀರು ಬಳಕೆಗೆ ಪ್ರಥಮ ಆಧ್ಯತೆಯಾಗಲಿದೆ. ನಂತರ ಬೆಂಗಳೂರಿಗೆ ನೀರು ಹಂಚುವ‌ಬಗ್ಗೆ ಯೋಚಿಸಲಸಗುವುದು ಇದೂ ಸಹ ಜನರ ಒಪ್ಪಿಗೆಯೊಂದಿಗೆ ಒಂದು ವೇಳೆ ಒಪ್ಪಿಗೆ ಇಲ್ಲ ಎಂದರೆ ಕೈಬಿಡಲಾಗುವುದು ಎಂದರು.

ಸಂಸದ ರಾಘವೇಂದ್ರ ಜಿಲ್ಲೆಯ 36 ಕೋಟಿ ರೂ. ಹಣವನ್ನ ಈಗಿನ‌ ಕಾಂಗ್ರೆಸ್ ಸರ್ಕಾರ ವಾಪಾಸ್ ಪಡೆದಿದೆ ಎಂದು ಸಂಸದರು ಗಂಭೀರ ಆರೋಪ ಮಾಡಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾರ್ಯಕ್ರಮ ಘೋಷಣೆ ಮಾಡಿ ಶಂಕುಸ್ಥಾಪಿಸಿದ್ದ ಸರ್ಕಾರ  ಹಣನೇ ಬಿಡುಗಡೆ ಮಾಡಿಲ್ಲ.  ಅಧಿಕಾರಕ್ಕೆ ಬರೊದಿಲ್ಲವೆಂದು ಅಡಿಗಲ್ಲು ಹಾಕಿದ್ದಾರೆ. ಆದರೆ ನಾವು ಗ್ಯಾರೆಂಟಿಯನ್ನ ಜಾರಿ ಮಾಡುವಾಗ ಹಣ ಎಲ್ಲಿ ತರುತ್ತೇವೆ ಎಂದು ಹೇಳಿದ್ವಿ ಆದರೆ ಹಿಂದಿನ‌ ಸರ್ಕಾರ ಹಣ ಇಡದೆ ಅಡಿಗಲ್ಲು ಹಾಕಿತ್ತು. ಅವರ ಘೋಷಣೆಯನ್ನ‌ ವಾಪಾಸ್ ಪಡೆದಿದ್ವಿ ಎಂದರು. ಅಲ್ಲಮ ಪ್ರಭು ಜಾಗ ಅಭಿವೃದ್ಧಿಗೆ ಎಂದು ಒಂದು ಕೋಟಿ ಹಣನೀಡಲಾಗಿದೆ ಎಂದು ಸಂಸದರೆ ನನ್ನ‌  ಬಳಿ‌ ಹೇಳಿದ್ರು ಆದರೆ ಅದು ಪಕ್ಕದ ಭವನದ ನಿರ್ಮಾಣಕ್ಕೆ  ನೀಡಿದ್ದು ಎಂದು ತಡವಾಗಿ ಗೊತ್ತಾಯಿತು. ಈಗ ಆ ಗೊಂದಲವನ್ಙ ಬಗೆಹರಿಸಲಾಗುದು. ಅಲ್ಲಮನ ಜನ್ಮ ಸ್ಥಳವನ್ನ ಅಭಿವೃದ್ಶಿ ಮಾಡಲಾಗುವುದು ಎಂದರು.

200 ಕೋಟಿ ವೆಚ್ಚದ ವಿಮಾನ ನಿಲ್ದಾಣ 449 ಕೋಟಿ ವೆಚ್ಚ ಮಾಡಲಾಗಿದೆ. ನಿಲ್ದಾಣವನ್ನ ಮೇಲ್ದರ್ಜೆಗೆ ಏರಿಸಲಾಗಿದೆ. ಹಾಗಂತ ಮೂರು ಪಟ್ಟು ಹಣ ವ್ಯಯಮಾಡಿರುವುದು ಯಾಕೆ ಎಂದು ಗುಡುಗಿದರು. ಮುಂದಿನ‌ಬೇಸುಗೆ ಎದುರಿಸಲು ಜಿಲ್ಲೆ ಸನ್ನಧ್ಧ ವಾಗಿದೆ. ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ. ಟ್ಯಾಂಕ್ ನೀರಲ್ಲಿ ಹಂಚಲು ಸಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ಜಿಪಂ ಸಿಇಒ ಸುಧಾಕರ್ ಲೋಖಂಡೆ ಉಪಸ್ಥಿತರಿದ್ದರು.‌

ಇದನ್ನೂ ಓದಿ-https://suddilive.in/archives/7763

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373