ರಾಜಕೀಯ ಸುದ್ದಿಗಳು

ಅರ್ಧ ಕೋಟಿಗೂ ಹೆಚ್ಚು ಹಣ ಸಂಗ್ರಹ

ಹಣಗೆರೆ ಕಟ್ಟೆಯ ಧಾರ್ಮಿಕ ಕೇಂದ್ರದಲ್ಲಿ ಹುಂಡಿ ಹಣ ಎಣಿಕೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹಿಂದೂ ಮುಸ್ಲೀಂ ಭಾವೈಕ್ಯ ಕೇಂದ್ರವಾಗಿರುವ ಹಣಗೆರೆ ಕಟ್ಟೆಯಲ್ಲಿರುವ ಭೂತರಾಯ ಚೌಡೇಶ್ವರಿ ದೇವಾಲಯ ಮತ್ತು ಸೈಯದ್ ಹಜರತ್ ದರ್ಗಾದ‌ ಕಾಣಿಕೆ ಹುಂಡಿ ತೆಗೆಯಲಾಗಿದ್ದು ಅರ್ಧ ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ.

ನಿನ್ನೆ ಹಣಗೆರೆಕಟ್ಟೆಯ ಈ ಧಾರ್ಮಿಕ ಕೇಂದ್ರದಲ್ಲಿ ಮುಜರಾಯಿ ಇಲಾಖೆಯ ಸಿಬ್ಬಂದಿಗಳು ಕಾಣಿಕೆ ಹುಂಡಿ ಎಣಿಕೆಗೆ ಹೋದಾಗ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತಿತರರು ಕೆಲ ಬೇಡಿಕೆಯನ್ನಿಟ್ಟು ಪ್ರತಿಭಟಿಸಿದ್ದರು.

ಈ ಆಕ್ಷೇಪಣೆಗೆ ಹುಂಡಿ ಎಣಿಕೆ ಕಾರ್ಯ ತಡವಾಗಿ ಆರಂಭವಾಗಿದೆ. ಪೊಲೀಸರ ಮತ್ತು ಮುಜರಾಯಿ ಇಲಾಖೆ ಅಧಿಕಾರಿ ಪ್ರದೀಪ್ ನಿಕ್ಕಂ ನೇತೃತ್ವದಲ್ಲಿ ಪ್ರತಿಭಟನೆ ಸುಖಾಂತ್ಯಗೊಂಡ ನಂತರ ಹುಂಡಿ ಹಣ ಎಣಿಕೆ ಕಾರ್ಯ ಮುಂದುವರೆದಿತ್ತು.

ನಿನ್ನೆ ತಡವಾಗಿ ಎಣಿಕೆ ಕಾರ್ಯ ರಾತ್ರಿ 9 ರವರೆಗೆ ನಡೆದಿತ್ತು. ನಾಣ್ಯದ ಎಣಿಕೆ ಹೊರತುಪಡಿಸಿ ಒಟ್ಟು ನೋಟುಗಳ ಎಣಿಕೆಗಳನ್ನ ಮಾಡಲಾಗಿದ್ದು 54,50,760 ರೂ ಸಂಗ್ರಹವಾಗಿದೆ. ಪ್ರತಿ  ಮೂರು ತಿಂಗಳಿಗೆ ಈ ಧಾರ್ಮಿಕ‌ಕೇಂದ್ರದಲ್ಲಿ ಅರ್ಧ ಕೋಟಿಯ ಹಣ ಸಂಗ್ರಹವಾಗಲಿದೆ.

ಇನ್ನೂ ಮುಂದಿನ ತಿಂಗಳು ಉರುಸ್ ಮತ್ತು ಹಬ್ಬ ಹರಿದಿನಗಳಲ್ಲಿ ಭಕ್ತರ ಸಂಖ್ಯೆ ಹರಿದುಬರಲಿದೆ. ಹಾಗೆ ಹಣವೂ ಸಹ ಕಾಣಿಕೆಯ ರೂಪದಲ್ಲಿ ಸಂಗ್ರಹವಾಗಲಿದೆ. ಈ ಕಾಣಿಕೆಯ ಸಂಗ್ರಹದ ಮೇಲೆಯೇ ಧಾರ್ಮಿಕ ಕೇಂದ್ರ ತಾವ ಶ್ರೇಣಿಯಲ್ಲಿದೆ ಎಂಬುದನ್ನ ನಿಗದಿಪಡಿಸಲಾಗುತ್ತದೆ. ಹಣಗೆರೆಕಟ್ಟೆಯ ಈ ಧಾರ್ಮಿಕ ಕೇಂದ್ರ ‘ಎ’ ಶ್ರೇಣಿಯ ಧಾರ್ಮಿಕ ಕೇಂದ್ರ ಎನಿಸಿಕೊಂಡಿದೆ.

ಇದನ್ನೂ ಓದಿ-https://suddilive.in/archives/7083

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373