ಕ್ರೈಂ ನ್ಯೂಸ್

ಜಾವಳ್ಳಿಯ ನೀಲಗಿರಿ ಪ್ಲಾಂಟೇಷನ್ ನಲ್ಲಿ ದರೋಡೆ

ಸುದ್ದಿಲೈವ್/ಶಿವಮೊಗ್ಗ

ವಾಹನ ಸವಾರರು, ಹೈವೆ ಕಳ್ಳರಿಂದ ಎಚ್ಚರದಿಂದರಬೇಕಿದೆ. ಹೈವೆ ಪ್ಯಾಟ್ರೋಲಿಂಗ್ ಸಹ ಕೇವಲ ದಾಖಲಾತಿ ಚೆಕ್ ಮಾಡುವ ಬದಲು ಈ ದರೋಡೆಕೋರರಿಂದ ರಕ್ಷಿಸುವ ಜವಬ್ದಾರಿಯೂ ಇದೆ.

ಖಾಸಗಿ ಮೆಡಿಕಲ್ ಕಾಲೇಜ್ ನಿಂದ ಚಿತ್ರದುರ್ಗಕ್ಕೆ ಹೊರಟಿದ್ದ ಯುವಕ ಚಿನ್ಮಯ್ ಎಂಬುವರು ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತಿದ್ದಾಗ ಮೊನ್ನೆ ಭಾನುವಾರ ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ಜಾವಳಿಯ, ಖಾಸಗಿ ಶಾಲೆಯ ಮುಂದರುವ ನೀಲಗಿರಿ ಪ್ಲಾಂಟೇಷನ್ ಹತ್ತಿರ  ಮೂತ್ರವಿಸರ್ಜನೆಗೆ ರಸ್ತೆಯ ಬದಿ ಬೈಕ್ ನಿಲ್ಲಿಸಿ ಸ್ನೇಹಿತನನ್ನ ಬಿಟ್ಟು ತೆರಳಿದ್ದಾರೆ.

ನೀಲಿಗಿರಿ ಪ್ಲಾಂಟೇಶ್ ನಲ್ಲಿ ಮೂತ್ರ ವಿಸರ್ಜನೆಯ ವೇಳೆ ಅಲ್ಲಿಗೆ ಬಂದ 6 ಜನರು ಪ್ಲಾಂಟೇಶನ್ ಒಳಗೆ ಎಳೆದು ಕೊಂಡು ಹೋಗಿ ಕುತ್ತಿಗೆಯಲ್ಲಿದ್ದ 20 ಗ್ರಾಂ ಬಂಗಾರದ ಕೊರಳ ಚೈನ್ ಅನ್ನು ಕಿತ್ತು ಕೊಂಡಿದ್ದಾರೆ. ಈ ವೇಳೆ ಚಿನ್ಮಯ್ ಕೂಗಾಡುವುದನ್ನು ಕೇಳಿ ಸ್ನೇಹಿತ ಪ್ಲಾಂಟೇಷನ್ ಒಳಗೆ ನುಗ್ಗಿದ್ದಾರೆ.

ಸ್ನೇಹಿತ ಚಿನ್ಮಯ್ ರನ್ನ ಬಿಡಿಸಲು ಬಂದಾಗ 6 ಜನರು ಕೋಲಿನಿಂದ ಮತ್ತು ಕೈಗಳಿಂದ ಹೊಡೆದು ಆತನ ಹತ್ತಿರ ಇದ್ದ 3000/ ರೂ ಹಣವನ್ನು ಮತ್ತು ಒಂದು ವಾಚ್ ಮತ್ತು ವಿವೋ ಕಂಪನಿಯ ವೈ 16 ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. 6 ಜನ ದರೋಡೆಕೋರರಲ್ಲಿ ಓರ್ವ ಚಿನ್ಮಯ್ ರನ್ನ ಎಳೆದು ಕೊಂಡು ಹೋಗುತ್ತಿದ್ದಾಗ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಏನದು ಎಂದು ಜೋರಾಗಿ ಕೂಗಿದ್ದಾರೆ. ಕೂಗಿದ ಹೊಡೆತಕ್ಕೆ ಬಿಟ್ಟು ಓಡಿ ಹೋಗಿದ್ದಾರೆ.

ಅದರಲ್ಲಿ ಒಬ್ಬ ದಡೂತಿ ದೇಹದವನಾಗಿದ್ದು ಗಡ್ಡ
ಬಿಟ್ಟಿರುವುದಾಗಿ, ಉಳಿದವರು ಸಣ್ಣದಾಗಿ ಇರುವುದಾಗಿ ಚಿನ್ಮಯ್ ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ. ನಂತರ ತೋಟದಲ್ಲಿದ್ದ ವ್ಯಕ್ತಿ ಚಿನ್ಮಯ್ ರನ್ನ ಉಪಚರಿಸಿ ರಸ್ತೆ ಕಡೆ ಕರೆದುಕೊಂಡು ಹೋಗಿದ್ದಾರೆ. ದರೋಡೆಕೋರರನ್ನ ಹುಡುಕಾಡಿದ್ದಾರೆ.

ಆ ವ್ಯಕ್ತಿಗಳು ಓಡಿ ಹೋಗುವಾಗ ತೋಟದಲ್ಲಿ ಕೆಲಸ ಮಾಡುವ ವ್ಯಕ್ತಿ ದಡೂತಿ ದೇಹದ ವ್ಯಕ್ತಿ ಮಣಿಕಂಠ ಎಂದು ಗುರುತಿಸಿದ್ದಾರೆ. ತರಗನಹಳ್ಳಿ ನಿವಾಸಿಯವರು ಆಗಿರುವುದಾಗಿ ಪತ್ತೆಹಚ್ಚಿದ್ದಾರೆ.
ಕುತ್ತಿಗೆಯಲ್ಲಿ ಇದ್ದ 20 ಗ್ರಾಂ ಬಂಗಾರದ ಕೊರಳ ಚೈನ್ ನ ಬೆಲೆ ಸುಮಾರು 100000/ ರೂ. ಮತ್ತು ಸ್ನೇಹಿತನ ಮೊಬೈಲ್ ಮತ್ತು ವಾಚ್ ಸುಮಾರು 15000/ ರೂ ಬೆಲೆ ಮೌಲ್ಯವೆಂದು ಅಂದಾಜಿಸಲಾಗಿದೆ.

ಮೊಬೈಲ್ ಅನ್ನು ಕಿತ್ತು ಕೊಂಡ ಹೋದ ಮಣಿಕಂಠ ಮತ್ತು ಅವನ ಜೊತೆಯಲ್ಲಿದ್ದ 5 ಜನರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದೂರುದಾಖಲಾಗಿದೆ.

ಇದನ್ನೂ ಓದಿ-https://suddilive.in/archives/12954

Related Articles

Leave a Reply

Your email address will not be published. Required fields are marked *

Back to top button