ಕ್ರೈಂ ನ್ಯೂಸ್

KRSTC ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಮತ್ತು ನಗದು ಕಳುವು

ಸುದ್ದಿಲೈವ್/ಶಿವಮೊಗ್ಗ

ಬಂಗಾರ ಕೊಟ್ಟು ಬಂಗಾರ ಖರೀದಿಸಲು ಕುಂಸಿಯಿಂದ ದಾವಣಗೆರೆಗೆ ಹೊರಟಿದ್ದ ಮಹಿಳೆಗೆ ಶಿವಮೊಗ್ಗ ಕೆಎಸ್ ಆರ್ ಟಸಿ ಬಸ್ ನಿಲ್ದಾಣದಲ್ಲಿ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ಬೆಳ್ಳಿ, ನಗದನ್ನ ಕಳೆದುಕೊಂಡಿದ್ದಾರೆ.

ಬಹಳ ದಿನಗಳಿಂದ ಶಾಂತವಾಗಿದ್ದ ಶಿವಮೊಗ್ಗ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಈ ವರ್ಷದ ನಾಲ್ಕನೇ ಪ್ರಕರಣ ದಾಖಲಾಗಿದೆ. ಸಿಸಿಟಿವಿಗಳ ಇಲ್ಲದ ಕಾರಣ ಕಳೆದ ವರ್ಷ 24 ಕಳುವು ಪ್ರಕರಣ ದಾಖಲಾಗಿತ್ತು.

ಪ್ರತಿ ವರ್ಷ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ 10-12 ಪ್ರಕರಣಗಳು ದಾಖಲಾಗುತ್ತಿದ್ದವು. ಕಳೆದ ವರ್ಷ ಡಬ್ಬಲ್ ಆಗಿತ್ತು. ಕಳೆದ ವರ್ಷ ಹೋಲಿಸಿಕೊಂಡರೆ ಕಳುವು ಪ್ರಕರಣ ಕೊಂಚ ತಗ್ಗಿದೆ. ಅದರಲ್ಲೂ ದೊಡ್ಡಪೇಟೆ ಪಿಐ ಬದಲಾವಣೆಯಾದ ನಂತರ ರವಿ ಪಾಟೀಲ್ ಸಂಗನ ಗೌಡ ಪಿಐ ಆಗಿ ಬಂದ ನಂತರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಳುವು ಪ್ರಕರಣ ಕಡಿಮೆಯಾಗಿದೆ.

ಏ.07 ರಂದು ಬೆಳಗ್ಗೆ 10-30 ಗಂಟೆಗೆ ಕುಂಸಿಯಿಂದ ಬಸ್ ಹತ್ತಿಕೊಂಡು ಚಿಕ್ಕಮ್ಮಳ ಜೊತೆ ಬಂದಿದ್ದ ಬೆಂಗಳೂರಿನ ಮಹಿಳೆ ಶಿವಮೊಗ್ಗ ಕೆ,ಎಸ್.ಆರ್.ಟಿ,ಸಿ ಬಸ್ ನಿಲ್ದಾಣಕ್ಕೆ ಬಂದು ದಾವಣಗೆರೆ ಪ್ಲಾಟ್ ಫಾರಂ ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು.

ಬಸ್ ಹತ್ತುವ ವೇಳೆ ತುಂಬಾ ರಶ್‌ ಆದ ಪರಿಣಾಮ ಬಸ್ ಹತ್ತಿ ಸೀಟ್ ಹಿಡಿಯಲು ಹರಸಾಹಸ ಪಡೆದಿದ್ದಾರೆ. ವ್ಯಾನಿಟಿ ಬ್ಯಾಗಿನಲ್ಲಿಟ್ಟಿದ್ದ ಮೊಬೈಲ್ ತೆಗೆಯಲು ವ್ಯಾನಿಟಿ ನೋಡಿದಾಗ ವ್ಯಾನಿಟಿ ಬ್ಯಾಗಿನ ಜಿಪ್ ತೆರೆದಿದ್ದು,

ಬ್ಯಾಗ್ ಚೆಕ್ ಮಾಡಿ ನೋಡಿಕೊಂಡಾಗ ಬ್ಯಾಗಿನಲ್ಲಿಟ್ಟಿದ್ದ 13 ಗ್ರಾಂ ಮಾಂಗಲ್ಯ ಸರ, 40 ಗ್ರಾಂ‌ ಬೆಳ್ಳಿ, 16000 ಕ್ಯಾಶ್, ಕಳುವಾಗಿತ್ತು. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/12490

Related Articles

Leave a Reply

Your email address will not be published. Required fields are marked *

Back to top button