ಕ್ರೈಂ ನ್ಯೂಸ್

ತುಡುಕಿ ಬಳಿ ಕಾರು-ಬಸ್ ನಡುವೆ ರಸ್ತೆ ಅಪಘಾತ-ಓರ್ವ ಸಾವು

ಸುದ್ದಿಲೈವ್/ತೀರ್ಥಹಳ್ಳಿ

ತೀರ್ಥಹಳ್ಳಿಯ ತುಡಕಿ ಬಳಿ ರಸ್ತೆ ಅಪಘಾತ ಉಂಟಾಗಿದ್ದು ಅಪಘಾತದಲ್ಲಿ ಬಡ ಕೂಲಿ ಕಾರ್ಮಿಕ ಬಳಗಟ್ಟೆ ಪೂರ್ಣೇಶ್ ಸಾವು ಕಂಡಿದ್ದಾರೆ.

ಬಸ್ ಮತ್ತು ಫಾರ್ಚ್ಯೂನರ್ ನಡುವೆ ಅಪಘಾತ ಸಂಭವಿಸಿದ್ದು, ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ. ಜೆಸಿ ಆಸ್ಪತ್ರೆಯಲ್ಲಿ  ಗಾಯಾಳುಗಳುಗಳಿಗೆ ಚಿಕಿತ್ಸೆ ನೀಡಲಾಗಿದೆ.

ಇಂದು ಸಂಜೆ ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ ಶಿವಮೊಗ್ಗ ಮಾರ್ಗ ಮಧ್ಯದ ತುಂಗಾ ಕಾಲೇಜು ತುಡುಕಿ ಸಮೀಪದಲ್ಲಿ ಗುರುರಾಜ ಬಸ್ಸು ಮತ್ತು ಫಾರ್ಚುನರ್ ಕಾರು ನಡುವೆ ರಸ್ತೆ ಅಪಘಾತ ಸಂಭವಿಸಿದೆ.

ಕಾರಿನಲ್ಲಿ ತೀರ್ಥಹಳ್ಳಿ ಮಲೆನಾಡು ಕೆಟರಸ್ ಮಾಲೀಕರದ್ದ ಅಡುಗೆ ಕಾಂಟ್ರಾಕ್ಟರ್ ಬಳಗಟ್ಟೆ ಶಾಂತಪ್ಪ ಅವರು ಶಿವಮೊಗ್ಗಕ್ಕೆ ಹೋಗುತ್ತಿದ್ದರು. ದುರಾದೃಷ್ಟವಶಾತ್ ಕಾರಿನಲ್ಲಿದ್ದ ಬಳಗಟ್ಟೆ ಪೂರ್ಣೇಶ್(45) ಅಪಘಾತದಲ್ಲಿ ಸಾವನಪ್ಪಿದ್ದಾರೆ.

ಪೂರ್ಣೇಶ್ ರವರು ವಿವಾಹಿತರಾಗಿದ್ದು ಬಡ ಕೂಲಿ ಕಾರ್ಮಿಕರಾಗಿ, ಜೀವನ ನಿರ್ವಹಿಸುತ್ತಿದ್ದು ಇವರಿಗೆ ಪತ್ನಿ ಸೇರಿದಂತೆ ಮೂರು ಮಕ್ಕಳು ಇದ್ದಾರೆ.
ಹಾಗೆ ಅಪಘಾತದಲ್ಲಿ ಕಾರಿನಲ್ಲಿದ್ದ ಶಾಂತಪ್ಪ ಹಾಗೂ ಬಸ್ಸಿನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಸಂದರ್ಭದಲ್ಲಿ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿದ್ದು ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/3874

Related Articles

Leave a Reply

Your email address will not be published. Required fields are marked *

Back to top button