ರಾಜಕೀಯ ಸುದ್ದಿಗಳು

ಅವರು ಕೆ.ಎಸ್.ಈಶ್ವರಪ್ಪ, ಇವರು ಡಿ.ಎಸ್.ಈಶ್ವರಪ್ಪ, ಈಶ್ವರಪ್ಪನವರ ಹೆಸರಲ್ಲಿ ಮತ್ತೊಂದು ನಾಮಪತ್ರ ಸಲ್ಲಿಕೆ

ಸುದ್ದಿಲೈವ್/ಶಿವಮೊಗ್ಗ

ಇವೆಲ್ಲ ಓಲ್ಡ್ ಟ್ರಿಕ್ಸೋ, ನ್ಯೂ ಟ್ರಿಕ್ಸೋ ಆದರೆ ಈಶ್ವರಪ್ಪನವರ ಹೆಸರಿನಲ್ಲಿ ಬೇರೆ ನಾಮಪತ್ರವೊಂದು ಸಲ್ಲಿಕೆಯಾಗಿದೆ. ಇವರೂ ಸಹ‌ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.  ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪನವರೆಂದೆ ಪರಿಚಯವಾಗಿರುವ ಇವರ ಹೆಸರಿನಲ್ಲಿ ಮತ್ತೊಂದು ನಾಮಪತ್ರ ಸಲ್ಲಿಕೆಯಾದರೆ, ಡಿಎಸ್ ಈಶ್ವರಪ್ಪನವರ ಹೆಸರಿನಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ.

1999 ರ ಚುನಾವಣೆ ಸಂದರ್ಭ, ಶಾಸಕರಾಗಿದ್ದ ಕೆ.ಎಸ್.ಈಶ್ವರಪ್ಪನವರನ್ನ ಸೋಲಿಸಬೇಕೆಂಬ ಬಂಗಾರಪ್ಪನವರ ಸಂಕಲ್ಪದ ಹಿನ್ನಲೆಯಲ್ಲಿ ಇದೇ ಈಶ್ವರಪ್ಪ ಎಂಬುವರ ಹೆಸರಿನಲ್ಲಿ ನಾಮಪತ್ರ ಸಲ್ಲಿಸಲಾಗಿತ್ತು. ಆಗಿನ ಕೆ.ಎಸ್ ಈಶ್ವರಪ್ಪನವರು ಸೋತ ಪರಿಣಾಮ ಬಂಗಾರಪ್ಪನವರ ಗರಡಿಯಲ್ಲಿದ್ದ ಹೆಚ್‌ಎಂ ಚಂದ್ರಶೇಖರಪ್ಪ ಶಾಸಕರಾಗಿ ಆಯ್ಕೆಯಾಗಿದ್ದರು.

ಈ ಬಾರಿಯೂ ಅದೇ ರೀತಿಯ ಟ್ರಿಕ್ಸ್  ಬಳಸಲಾಗಿದೆಯಾ ಎಂಬ ಪ್ರಶ್ನೆಗೆ ನಮ್ಮ‌ಬಳಿ ಉತ್ತರವಿಲ್ಲ. ಆದರೆ ಆ ರೀತಿಯ ಒಂದು ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನಕ್ಕೆ ಈಶ್ವರಪ್ಪನವರ ಹೆಸರಿನಲ್ಲಿ ಮತ್ತೊಂದು ನಾಮಪತ್ರ ಸಲ್ಲಿಕೆಯಾಗಿದೆ. ಹಳೆಯ ಬಂಗಾರಪ್ಪನವರ ಟ್ರಿಕ್ಸ್ ಬಳಸಲಾಗಿದೆ ಎಂಬ ಶಂಕೆ ಇದೆ. ಆದರೆ ಡಿಜಿಟಲ್ ಯುಗದಲ್ಲಿ ಈ ಟ್ರಿಕ್ಸ್ ಎಷ್ಟರ ಮಟ್ಟಿಗೆ ವರ್ಕೌಟ್‌ ಆಗ್ತಾ ಇದೆ ಕಾದು ನೋಡಬೇಕಿದೆ.

ನಾಲ್ಕು ಜನರ ಜೊತೆ ಬಂದಿರುವ ಡಿ.ಎಸ್.ಈಶ್ವರಪ್ಪ ಶಿಕಾರಿಪುರದವರು ಎಂಬ ಮಾಹಿತಿ ಲಭ್ಯವಾಗಿದೆ.

ಇಂದು 03 ನಾಮಪತ್ರ ಸಲ್ಲಿಕೆ

ಶಿವಮೊಗ್ಗ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಏ.16 ರಂದು ಒಟ್ಟು 03 ನಾಮಪತ್ರ ಸಲ್ಲಿಕೆ ಆಗಿವೆ.
ಪಕ್ಷೇತರ ಅಭ್ಯರ್ಥಿಗಳಾಗಿ ಡಿ.ಎಸ್.ಈಶ್ವರಪ್ಪ, ಕುಣಜೆ ಮಂಜುನಾಥ ಗೌಡ ಮತ್ತು ಗಣೇಶ್ ಬಿ ಸೇರಿದಂತೆ ಇಂದು ಮೂರು ಜನ ಅಭ್ಯರ್ಥಿಗಳು ಒಟ್ಟು 03 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/12949

Related Articles

Leave a Reply

Your email address will not be published. Required fields are marked *

Back to top button