ವಾಹನದಲ್ಲಿ ಹೋಗುತ್ತಿದ್ದ ಮಹಿಳೆರನ್ನ ಯಾಮಾರಿಸಿ ಮಾಂಗಲ್ಯ ಸರ ಅಪಹರಣ

ಸುದ್ದಿಲೈವ್/ಶಿವಮೊಗ್ಗ/ತೀರ್ಥಹಳ್ಳಿ

ಎರಡು ಪ್ರತ್ಯೇಕ ಮಾಂಗಲ್ಯ ಸರ ಅಪಹರಣ ಪ್ರಕರಣ ಜಿಲ್ಲೆಯ ಎರಡು ಠಾಣೆಗಳಲ್ಲಿ ದೂರು ದಾಖಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆ ಮತ್ತು ವಿನೋಬ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ದೂರು ದಾಖಲಾಗಿದೆ.
KA14 ED 3060 Hero Maestro ದ್ವಿಚಕ್ರ ವಾಹನದಲ್ಲಿ ಆಲ್ಕೊಳ ವೃತ್ತದ ಬಳಿಯ ಪ್ರಿಯದರ್ಶನಿ ಲೇಔಟ್ ನಿವಾಸಿಗಳಾದ ನಂದ ಮತ್ತು ಅವರ ಅತ್ತೆ ವಿನೋಬನಗರದಲ್ಲಿ ರುವ ಅವರ ಸಂಬಂದಿಯ ಮನೆಗೆ ಹೋಗಿ ನಂತರ ಮನೆಗೆ ವಾಪಾಸ್ ಆಗುವಾಗ ಎ.ಪಿ.ಎಂ.ಸಿ ಮುಂದಿನ ಕಟ್ಟೆ ಸುಬ್ಬಣ ಸರ್ಕಲ್ ಹತ್ತಿರ ಇರುವ ಹಂಪ್ ಹತ್ತಿರ ಇಬ್ಬರು ಅಪರಿಚಿತರು ಯಾವುದೋ ಬೈಕಿನಲ್ಲಿ ಬಂದು ನಿಮ್ಮ ಹಿಂದೆ ಕುಳಿತಿರುವ ಸೀರೆ ಬೈಕ್ ನ ಚಕ್ರಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ,
ಕೂಡಲೇ ನಂದರವರು ಗಾಡಿಯನ್ನು ಸ್ವಲ್ಪ ನಿಧಾನ ಮಾಡಿ ತಿರುಗಿ ನೋಡಿದಾಗ ಬೈಕಿನಲ್ಲಿ ಹಿಂಬದಿ ಕುಳಿತ್ತಿದ್ದವನು ನಂದಾರವರ ಕೊರಳಿಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 75-80 ಗ್ರಾಂ ತೂಕದ ಅಂದಾಜು ರೂ.2,65,000/- ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾನೆ. ಈ ಬಗ್ಗೆ ನಂದಾರವರು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತೀರ್ಥಹಳ್ಳಿ ಪ್ರಕರಣ
ಮತ್ತೊಂದು ಪ್ರಕರಣದಲ್ಲಿ ಅ.23 ರಂದು ದಸರಾ ಹಬ್ಬದ ಪ್ರಯುಕ್ತ ತೀರ್ಥಹಳ್ಳಿಯ ಮಾರಿಕಾಂಬ ದೇವಸ್ಥಾನಕ್ಕೆ ಭಜನೆಯ ಸಲುವಾಗಿ ಸಂಜೆ 5-00 ಗಂಟೆಗೆ ಹೋಗಿ ವಾಪಸ್ ಮನೆಗೆ ಹೊರಟಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ 22 ಗ್ರಾಂ ಎರಡೆಳೆ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ.
ಕೆಎ-14 ಇವಿ-4363ನೇ ನಂಬರ್ ನ ಸೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯು ಚರ್ಚ್ ರಸ್ತೆಯ ಮಾರ್ಗವಾಗಿ ಸೀಬಿನಕೆರೆ ಸರ್ಕಲ್ ನ ಹತ್ತಿರದ ಹನುಮಾನ್ ಹೋಟೆಲ್ ಎದುರಿನ ಟಾರ್ ರಸ್ತೆಗೆ ಬಂದಾಗ 2 ಜನ ಅಪರಿಚಿತ ವ್ಯಕ್ತಿಗಳು ಬೈಕಿನಲಿ ಬಂದು ಕುತ್ತಿಗೆಗೆ ಕೈಹಾಕಿಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ.
ಲೀಲಾವತಿ ರಾವ್ ಅವರ 2 ಎಳೆಯ ಅಂಜಲಿ ಆರ್ ಕೆ ಕಟಿಂಗ್ ಮಾದರಿಯ ಬಂಗಾರದ ಮಾಂಗಲ್ಯ ಸರವಾಗಿದ್ದು,ಸುಮಾರು 40 ಗ್ರಾಂ ತೂಕವಿದೆ. ಇದಕ್ಕೆ ಪ್ರತಿರೋಧ ವೊಡ್ಡಿದ ಪರಿಣಾಮ ಕಿತ್ತುಕೊಂಡ ಸರದಲ್ಲಿ ಅರ್ದ ಭಾಗ ತಾಳಿ ಸಮೇತ ಉಳಿದು ಕೊಂಡಿದೆ.
40 ಗ್ರಾಂ ತೂಕದ ಸರದಲ್ಲಿ 18 ಗ್ರಾಂ ಚಿನ್ನಾಭರಣ ಉಳಿದುಕೊಂಡಿದೆ. 22 ಗ್ರಾಂ ಚಿನ್ನಾಭರಣ ಕಳುವಾಗಿದೆ. ಅದರ ಬೆಲೆ ಸುಮಾರು 1,00,000/- ರೂ ಗಳಾಗಬಹುದು ಎಂದು ಅಂದಾಜಿಸಲಾಗಿದೆ. ದೂರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ-https://suddilive.in/archives/1885
