ಕ್ರೈಂ ನ್ಯೂಸ್

ಬಾಡಿ ಬಿಲ್ಡರ್ ರತಿಲ ಕುಮಾರ್ ಸಾವನ್ನ ಕೊಲೆ ಎಂದು ಪ್ರಕರಣ ದಾಖಲಿಸುವಂತೆ ಕೋರಿ ಸಚಿವರಿಗೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಬಾಡಿ ಬಿಲ್ಡರ್ ಹಾಗೂ ಭದ್ರಾವತಿಯ ವಿ. ರತಿಲ ಕುಮಾರ್ ಅವರ ಸಾವಿನ ಪ್ರಕರಣವನ್ನ ಎಫ್ಐಆರ್ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸುವಂತೆ ಆಗ್ರಹಿಸಿ ಮೃತನ ಕುಟುಂಬ  ನಿನ್ನೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರನ್ನ ಭೇಟಿಯಾಗಿ ಮನವಿ ಸಲ್ಲಿಸಿತ್ತು.

ನಿನ್ನೆ ರತಿಲ ಕುಮಾರ್ ತಂದೆ ವಿ.ಇಂದ್ರೇಶ್ ಮೊದಲಾದ ದಲಿತ ಸಂಘಟನೆಯವರು ಸಚಿವ ಮಧು ಬಂಗಾರಪ್ಪನವರು ಸುದ್ದಿಗೋಷ್ಠಿ ನಡೆಸಲು ಬಂದಿದ್ದ ಖಾಸಗಿ ಹೋಟೆಲ್ ವೊಂದರ ಮುಂಭಾಗದಲ್ಲಿ ಭೇಟಿಯಾಗಿ ಮಗನ ಸಾವು ಸಹಜಸಾವಾಗಿಲ್ಲ‌‌ ಅದೊಂದು ಕೊಲೆ. ಕೊಲೆಮಾಡಿದವರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.

ಜನತಾದರ್ಶನ, ಡಿಸಿ ಕಚೇರಿಯಲ್ಲಿ ಭೇಟಿಯಾದಾಗ ಪ್ರಕರಣವನ್ನ ಎಫ್ಐಆರ್ ಮಾಡಿಕೊಂಡು ದೂರು ದಾಖಲಿಸಲು ಇಲಾಖೆಗೆ ಸಚಿವರು ಬರೆದರೂ ಇದುವರೆಗೂ ಸೂಕ್ತ ಕ್ರಮವಾಗಿಲ್ಲ ಎಂಬುದು ಮೃತ ಕುಟುಂಬಸ್ಥರ ಆರೊಪವಾಗಿದೆ.

2023 ನೇಸಾಲಿನಲ್ಲಿ ಮದುವೆಗೆಂದು ದರ್ಶನ್ ಎಂಬುವನು ರತಿಲ ಕುಮಾರ್ ನನ್ನ ಕರೆಯಿಸಿಕೊಂಡು ಕಾಡುಮನೆ ರೆಸ್ಟೋರೆಂಟ್ ಬಳಿ ಗಲಾಟೆಯಾಗಿರುವುದು  ಸಿಸಿ ಟಿವಿಯಲ್ಲಿ ಗಲಾಟೆ ದೃಶ್ಯಾವಳಿಗಳು ಸೆರೆಯಾಗಿರುತ್ತವೆ.

ನಂತರ ಸಿರಿಯೂರು ಚಾನೆಲ್ ಬಳಿ ಕರೆದುಕೊಂಡು ಹೋಗಿ ಆತನ ಕುತ್ತಿಗೆಯನ್ನ ಬಾಯಿಯಿಂದ ಕಚ್ಚಿ, ಮದ್ಯ ಕುಡಿಸಿ ನೀರಿಗೆ ತಳ್ಳಲಾಗಿದೆ. ಆದರೆ ಪೊಲೀಸರು ಇದಕ್ಕೆ ಸಾಕ್ಷಿ ತೆಗೆದುಕೊಂಡು ಬನ್ನಿ ಎನ್ನುತ್ತಿದ್ದು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿಲ್ಲ ಎಂದು ಕುಟುಂಬಸ್ಥರ ಆರೋಪವಾಗಿದೆ.  ಇದನ್ನ ಸಚಿವರಿಗೆ ಮನವಿ ರೂಪದಲ್ಲಿ ಸಲ್ಲಿಸಿ ಪೊಲೀಸ್ ಇಲಾಖೆಗೆ ಎಫ್ಐಆರ್ ದಾಖಲಿಸುವಂತೆ ಕೋರಿದ್ದಾರೆ.

ಇದನ್ನೂ ಓದಿ-https://suddilive.in/archives/12690

Related Articles

Leave a Reply

Your email address will not be published. Required fields are marked *

Back to top button