ಕ್ರೈಂ ನ್ಯೂಸ್

ತಡರಾತ್ರಿಯಲ್ಲಿ ಹೊತ್ತಿಉರಿದ ಮನೆ-ನೊಂದ ಮಹಿಳೆಗೆ ಸಹಾಯವಾಗುವುದೇ ಪಾಲಿಕೆ

ಸುದ್ದಿಲೈವ್/ಶಿವಮೊಗ್ಗ

ಮಧ್ಯರಾತ್ರಿಯ ವೇಳೆ ಕಾಣಿಸಿಕೊಂಡ ಬೆಂಕಿಯಿಂದ ಇಡಿ ಮನೆಯೊಂದು ಉರಿದು ಭಸ್ಮವಾಗಿದೆ. ಶಾರ್ಟ್ ಸೆರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ ಅದೃಷ್ಟವಶಾತ್ ಬಡಪಾಯಿಯ ಜೀವ ಉಳಿದುಕೊಂಡಿದೆ.

ಶರಾವತಿ ನಗರದ‌ ಮೊದಲನೇ ತಿರುವಿನಲ್ಲಿರುವ ಉಮಾ ಎಂಬುವರ ಹೆಂಚಿನ ಮನೆಯಲ್ಲಿ ಮಧ್ಯರಾತ್ರಿ ಎರಡು ಗಂಟೆಗೆ‌ ಬೆಂಕಿ ಕಾಣಿಸಿಕೊಂಡಿದೆ. ಗಾಢ ನಿದ್ದೆಯಲ್ಲಿದ್ದ ಮಹಿಳೆಗೆ ಸುಟ್ಟ ವಾಸನೆಯಿಂದ ತಟ್ಟನೆ ಎಚ್ಚರವಾಗಿದೆ.

ಎಚ್ಚರವಾದ ಮಹಿಳೆ ಸಿಲಿಂಡರ್ ವೊಂದನ್ನ ತಕ್ಷಣಕ್ಕೆ ಮನೆಯಿಂದ ಹೊರಗಡೆ ಇಟ್ಟಿದ್ದಾರೆ. ಇದರಿಙದ ಅರ್ಧಕರ್ಧ ಅನಾಹುತವನ್ನ ದೂರ ಇಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮನೆಯ ಬೀರುವಿನಲ್ಲಿದ್ದ ಬೆಲೆಬಾಳುವ ಸೀರೆ 10 ಸಾವಿರ ನಗದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವೆಲ್ಲಾ ಬೆಂಕಿಗೆ ಭಸ್ಮವಾಗಿದೆ.

ತಡವಾಗಿ ಬಂದ ಫೈರಿಂಜಿನ್!

ಗಂಡನನ್ನ ಕಳೆದುಕೊಂಡ ಒಂಟಿ ಮಹಿಳೆ ಒಬ್ವರೇ ಮೋಟಾರ್ ಆನ್ ಮಾಡಿ ಚಾನೆಲ್ ನಿಂದ ನೀರು ಎತ್ತಿ ಮನೆಗೆ ಹತ್ತಿಕೊಂಡಿದ್ದ ಬೆಂಕಿಯನ್ನ ನಿಂದಿಸಿದ್ದಾರೆ. ಮನೆ ಕೆಲಸ ಮಾಡಿಕೊಂಡು ಬದುಕುತ್ತಿರುವ ಉಮಾರವರಿಗೆ ಎಲ್ಲವೂ ಇದೆ. ಆದರೆ ಸಮಯಕ್ಕೆ ಸರಿಯಾಗಿ ಬಾರದ ಫೈರಿಂಜಿನ್ ಸಿಬ್ಬಂದಿಗಳಿಂದ ಐದು ಪೈಸೆಯ ಉಪಯೋಗವಾಗಿಲ್ಲ.

ಇದೇ ಫೈರಿಂಜಿನ್ ವಿರುದ್ಧ ಶರತ್ ಭೂಪಾಳಂ  ವಿಚಾರದಲ್ಲಿಯೂ ನಿರ್ಲಕ್ಷ ವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ವಂದಿಗಳಿಂದ ನಡೆದ ಯಡವಟ್ಟಿನಿಂದ ಯಾವ ಪ್ರಯೋಜನವೂ ಆಗಿಲ್ಲ. ಹೋಗಲಿ ಪಾಲಿಕೆಯಾದರೂ ಸಹಾಯವಾಗುತ್ತಾ ಎಂಬ ನಿರೀಕ್ಷೆ ಹೆಚ್ಚಿದೆ. ಧಕ್ಷ ಆಯುಕ್ತರಿದ್ದಾರೆ. ಇವರಿಂದ ನೊಂದ ಬಡ ಮಹಿಳೆಗೆ ಸಹಾಯವಾಗುವ ನಿರೀಕ್ಷೆ ಹೆಚ್ಚಿದೆ. ಕಾದುನೋಡೋಣ.

ಇದನ್ನೂ ಓದಿ-https://suddilive.in/archives/4381

Related Articles

Leave a Reply

Your email address will not be published. Required fields are marked *

Back to top button