ಕ್ರೈಂ ನ್ಯೂಸ್

ಗಾಂಜಾ ಮಾರಾಟದ ಆರೋಪ-ಆರೋಪಿಗಳು ಬಂಧನ

ಸುದ್ದಿಲೈವ್/ಸಾಗರ

ಕಾನೂನು ಬಾಹಿರವಾಗಿ ಗಾಂಜಾ ಪದಾರ್ಥ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ ಮತ್ತು 170 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಸಾಗರಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಣಲೆಕೊಪ್ಪಕ್ಕೆ ಹೋಗುವ ರಸ್ತೆ ಕಾಗೋಡು ತಿಮ್ಮಪ್ಪ ಬಡಾವಣೆ ವರದಾ ಘಾಟ್ ರುದ್ರ ಭೂಮಿ ಪಕ್ಕದ ಖಾಲಿ ಜಾಗದಲ್ಲಿ ಮೂರು ಜನ ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಾಗರ ಟೌನ್ ಪೊಲೀಸರು ದಾಳಿ ನಡೆಸಿದ್ದಾರೆ.

ಎಸ್ಪಿ ಮಿಥುನ್ ಕುಮಾರ್ ಐಪಿಎಸ್ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ ಅನಿಲ್ ಕುಮಾ‌ರ್ ಭೂಮರೆಡ್ಡಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು  ಕಾರಿಯಪ್ಪ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರುಗಳ ಆದೇಶದ ಮೇರೆಗೆ ಗೋಪಾಲಕೃಷ್ಣ ತಿ ನಾಯಕ್ ಮಾನ್ಯ ಪೊಲೀಸ್ ಉಪಾಧೀಕ್ಷಕರು ಸಾಗರ ಉಪ ವಿಭಾಗ ಸಾಗರ ರವರ ಮಾರ್ಗದರ್ಶನದ ಮೇರೆಗೆ ಸಾಗರಟೌನ್ ಪೊಲೀಸ್ ಠಾಣೆಯ ಪಿ.ಐ ರವರಾದ ಸೀತಾರಾಮ್ ಜೆ.ಬಿ ಮತ್ತು ಪಿಎಸ್‌ಐರವರಾದ ಶ್ರೀ ನಾಗರಾಜ ಟಿ ಎಂ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಹೆಚ್.ಸಿ.85 ಶ್ರೀ ರತ್ನಾಕರ್, ಹೆಚ್.ಸಿ.418 ಶ್ರೀ ಮೋಹನ್, ಸಿಪಿಸಿ 1553 ವಿಕಾಸ್, ಪಿಸಿ 1660 ಕೃಷ್ಣಮೂರ್ತಿ ಹೆಚ್.ಎಂ. ಮತ್ತು ವಿಶ್ವನಾಥ ಸಿಪಿಸಿ 1691 ರವರನ್ನೊಳಗೊಂಡ ತಂಡ ಕಾನೂನು ಬಾಹಿರವಾಗಿ ಗಾಂಜಾ ಪದಾರ್ಥ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ‌ ಬಂಧನಕ್ಕೆ ತಂಡ ರಚಿಸಲಾಗಿದೆ.

1. ರೂಹಿಲ್ ತಂದೆ ಅನ್ವರ್ ಖಲೀಲ್, 26 ವರ್ಷ, ಮುಸ್ಲಿಂ ಜನಾಂಗ, ಕ್ಯಾಂಟೀನ್ ನಲ್ಲಿ ಕೆಲಸ, ವಾಸ 04 ನೇ ಕ್ರಾಸ್ ನೆಹರು ನಗರ ಸಾಗರ ಟೌನ್. 2. ಜೋಸ್ಟನ್ ಲೋಬೋ ತಂದೆ ಜೋಸೆಫ್ ಲೋಬೋ, 21 ವರ್ಷ, ಕ್ರಿಶ್ಚಿಯನ್ ಜನಾಂಗ, ಚಿಕನ್ ಅಂಗಡಿಯಲ್ಲಿ ಕೆಲಸ, ವಾಸ ಮದರ್ ಥೆರೆಸಾ ಆಟೋ ಸ್ಟಾಂಡ್ ಬಿ.ಹೆಚ್ ರಸ್ತೆ ಸಾಗರ ಟೌನ್. 3. ನಿತಿನ್ ಪಾವಸ್ಕರ್ ತಂದೆ ಮಾರುತಿ, 20 ವರ್ಷ, ಸಮಗಾರ ಜಾತಿ, ವಿದ್ಯಾರ್ಥಿ, ವಾಸ 02ನೇ ಕ್ರಾಸ್ ಅರಮನೆ ಕೇರಿ ಸಾಗರ ಟೌನ್ ರವರ ಮೇಲೆ ಪಂಚರೊಂದಿಗೆ ದಾಳಿ ಮಾಡಿ ಆರೋಪಿತರಿಂದ 170 ಗ್ರಾಂ ತೂಕದ 6,000/- ರೂ ಬೆಲೆಯ ಗಾಂಜಾ ಪದಾರ್ಥವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ. ಸದರಿ ಕರ್ತವ್ಯ ನಿರ್ವಹಿಸಿದ ಸಾಗರ ಪೇಟೆ ಪೊಲೀಸ್ ಠಾಣೆಯ ತಂಡಕ್ಕೆ ಮಾನ್ಯಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಅಭಿನಂದನೆ ಸಲ್ಲಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/6190

Related Articles

Leave a Reply

Your email address will not be published. Required fields are marked *

Back to top button