ಕ್ರೈಂ ನ್ಯೂಸ್

ಮಾನವೀಯತೆ ಮೆರೆದ ಸಂಚಾರಿ ಪೊಲೀಸರು

ಪೊಲೀಸರ ಕಣ್ಣು ತಪ್ಪಿಸಲು ಹೋಗಿ ಯಡವಟ್ಟು ಮಾಡಿಕೊಂಡ್ನಾ ಆರ್ ಎಸ್?

ಸುದ್ದಿಲೈವ್/ಶಿವಮೊಗ್ಗ

ರೌಡಿ ಶೀಟರ್ (ಆರ್ ಎಸ್) ಓರ್ವ ಸಂಚಾರಿ ಪೊಲೀಸರು ತಪಾಸಣೆ ನಡೆಸಿದ್ದನ್ನ ಕಂಡು ತಪ್ಪಿಸಿಕೊಳ್ಳಲು ಹೋಗಿ ಯಡವಿ ಬಿದ್ದಿದ್ದು ಆತನನ್ನ ಪೊಲೀಸರೆ ಅಂಬ್ಯುಲೆನ್ಸ್ ನಲ್ಲಿ ದವಾಖಾನೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ಕರ್ನಾಟಕ ಸಂಘದ ಬಳಿ ಪೂರ್ವ ಸಂಚಾರಿ ಪೊಲಿಸರು ತಪಾಸಣೆ ಮಾಡುತ್ತಿದ್ದ ವೇಳೆ ದ್ವಿಚಕ್ರವಾಹನದಲ್ಲಿ ಬಂದ ಯಾಸೀನ್ ಖುರೇಶಿ ಪೊಲೀಸರ ಕಣ್ಣು ತಪ್ಪಿಸಲು ಹೋಗಿ ಬಿದ್ದಿದ್ದಾನೆ. ಆದರೆ ಪೊಲೀಸರು ಇಲ್ಲಿ ಮಾನವೀಯತೆ ಮೆರೆದು ಅಂಬ್ಯೂಲೆನ್ಸ್ ನಲ್ಲಿ ಸಾಗಿಸಿದ್ದಾರೆ.

ಸಂಚಾರಿ ಪೊಲೀಸರು ತಪಾಸಣೆ ನಗರಾದ್ಯಂತ ಚುರುಕುಗೊಳಿಸಿದ್ದಾರೆ. ಹೆಲ್ಮೆಟ್ ಧರಿಸದೆ, ಡಿಎಲ್ ಇಲ್ಲದೆ, 18 ವರ್ಷದೊಳಗಿನ ಯುವಕ ಯುವತಿಯರ ಹಾವಳಿ ನಗರದಲ್ಲಿ ಹೆಚ್ಚಾಗಿದೆ. ಈ ಹಾವಳಿಯನ್ನ ತಪ್ಪಿಸಲು ಪೊಲೀಸರ ತಪಾಸಣೆ ಅನಿವಾರ್ಯವಾಗಿದೆ.

ಅಲ್ಲದೆ ಸಿಗ್ನಲ್ ಗಳ ಜಂಪ್ ತ್ರಿಬ್ಬಲ್ ರೈಡಿಂಗ್ ಸಹ ಹೆಚ್ಚಾಗಿದೆ. ಕರ್ಕಷ ಶಬ್ದ ಮಾಡುವ ದ್ವಿಚಕ್ರ ವಾಹಗಳಿಗೆ ಎಸ್ಪಿ ಮಿಥುನ್ ಕುಮಾರ್ ಅವರ ನೇತೃತ್ವಲ್ಲಿ ಆಗಿರುವ ಕಾರ್ಯಾಚರಣೆಯಿಂದ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. 500-1000 ದಂಡ ಕಟ್ಟುವುದನ್ನ ತಪ್ಪಿಸಲು ಹೋಗಿ ಯುವ ಜನಾಂಗ ಪೊಲೀಸರ ಕಣ್ಣುತಪ್ಪಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಕೊನೆಗೆ ಅವರಿಂದಲೇ ದವಾಖಾನೆ ಸೇರುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ-https://suddilive.in/archives/8025

Related Articles

Leave a Reply

Your email address will not be published. Required fields are marked *

Back to top button